ಕೊಹ್ಲಿ ಇಂದ ನಾಯಕತ್ವ ಕಿತ್ತುಕೊಂಡಷ್ಟು ಸುಲಭವಲ್ಲ ನಿಭಾಯಿಸುವುದು. ರೋಹಿತ್ ಶರ್ಮ ಗೆ ಮತ್ತೊಮ್ಮೆ ಖಡಕ್ ವಾರ್ನಿಂಗ್ ರವಾನೆ. ಏನು ಗೊತ್ತೇ??

ಕೊಹ್ಲಿ ಇಂದ ನಾಯಕತ್ವ ಕಿತ್ತುಕೊಂಡಷ್ಟು ಸುಲಭವಲ್ಲ ನಿಭಾಯಿಸುವುದು. ರೋಹಿತ್ ಶರ್ಮ ಗೆ ಮತ್ತೊಮ್ಮೆ ಖಡಕ್ ವಾರ್ನಿಂಗ್ ರವಾನೆ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ರವರನ್ನು ಭಾರತೀಯ ನಿಯಮಿತ ಓವರ್ಗಳ ತಂಡದ ಕಪ್ತಾನನಾಗಿ ಮಾಡಿರುವುದು ತಿಳಿದಿದೆ. ಆದರೆ ನ್ಯೂಜಿಲೆಂಡ್ ಟೆಸ್ಟ್ ಸರಣಿ ಗೆದ್ದ ನಂತರ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ರೋಹಿತ್ ಶರ್ಮಾ ರವರು ಸೌತ್ ಆಫ್ರಿಕಾದ ಫ್ಲೈಟನ್ನು ಹತ್ತಬೇಕಿತ್ತು. ಹೌದು ಗೆಳೆಯರೇ ರೋಹಿತ್ ಶರ್ಮಾ ರವರು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಸೌತ್ ಆಫ್ರಿಕಾ ದಲ್ಲಿ ನಡೆಯುವ ನಿಯಮಿತ ಓವರ್ ಗಳ ಪಂದ್ಯದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಬೇಕಿತ್ತು.

ಆದರೆ ಇದೀಗ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಓಪನಿಂಗ್ ಬ್ಯಾಟ್ಸ್ ಮನ್ ಹಾಗೂ ನಾಯಕನಾಗಿರುವ ರೋಹಿತ್ ಶರ್ಮಾ ರವರು ಬೆಂಗಳೂರಿಗೆ ಬಂದಿದ್ದು ಎನ್ ಸಿ ಎ ಕ್ಯಾಂಪಿನಲ್ಲಿ ತಮ್ಮ ಫಿಟ್ನೆಸ್ ನಿರೂಪಿಸಲು ವಿಫಲರಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ರೋಹಿತ್ ಶರ್ಮ ರವರ ಹ್ಯಾಮ್ ಸ್ಟ್ರಿಂಗ್. ತಂಡದ ನಾಯಕನ ದಾರಿಯನ್ನು ಕಾಯುತ್ತಿರಬೇಕಾದರೆ ರೋಹಿತ್ ಶರ್ಮಾ ರವರು ಈಗ ಹ್ಯಾಮ್ ಸ್ಟ್ರಿಂಗ್ ನಿಂದ ಬಳಲುತ್ತಿರುವುದು ತಂಡದ ಮೊರಲ್ ಡೌನ್ ಮಾಡಿರಬಹುದು. ಈ ಸಂದರ್ಭದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ರೋಹಿತ್ ಶರ್ಮಾ ರವರಿಗೆ ಎಚ್ಚರಿಕೆಯನ್ನು ರವಾನಿಸಿದೆ ಎಂದು ಹೇಳಬಹುದಾಗಿದೆ.

ಮೇಲ್ಮೈನಲ್ಲಿ ನೋಡಿದಾಗ ನಮಗೆ ಬಿಸಿಸಿಎಲ್ ರೋಹಿತ್ ಶರ್ಮಾ ರವರಿಗೆ ಫಿಟ್ನೆಸ್ ಸಾಬೀತುಪಡಿಸಿ ತಂಡದಲ್ಲಿ ಆದಷ್ಟು ಬೇಗ ಭರ್ತಿಯಾಗಿ ಯಾಕೆಂದರೆ ಯಾವ ಆಟಗಾರರು ಗಾಯಾಳುವಾಗಿ ತಂಡದಿಂದ ಹೊರಗುಳಿಯಲು ಇಷ್ಟಪಡುವುದಿಲ್ಲ ನಿಮ್ಮ ನಿರೀಕ್ಷೆಯಲ್ಲಿದ್ದೇವೆ ಎಂಬುದಾಗಿ ಹೇಳಿದ್ದರೂ ಕೂಡ, ಈಕಡೆ ಸೌತ್ ಆಫ್ರಿಕಾ ಪ್ರವಾಸದಲ್ಲಿ ನಿಯಮಿತ ಓವರ್ಗಳ ತಂಡಕ್ಕೆ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಆದಷ್ಟು ಬೇಗ ಫಿಟ್ನೆಸ್ ಸಾಬೀತು ಪಡಿಸದಿದ್ದರೆ ತಂಡದಲ್ಲಿ ಜಾಗ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳುತ್ತಿದೆ. ಯಾಕೆಂದರೆ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸಿರುವುದು ಪರೋಕ್ಷವಾಗಿ ಇದೇ ವಿಚಾರವನ್ನು ಸಾಬೀತುಪಡಿಸಿದೆ ಎಂದು ಹೇಳಬಹುದಾಗಿದೆ. ಕೇವಲ ಈ ಬಾರಿ ಮಾತ್ರವಲ್ಲದೆ ರೋಹಿತ್ ಶರ್ಮಾ ರವರು ಹಲವಾರು ಬಾರಿ ಇನ್ಜುರಿಗಳಿಗೆ ತುತ್ತಾಗಿದ್ದರು. ನಾಯಕನೇ ಪದೇಪದೇ ಹೀಗೆ ಇಂಜುರಿ ಗಳಿಗೆ ತುತ್ತಾಗುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ.