ಅದೇ ಹಳೆಯ ಖದರ್ ನೊಂದಿಗೆ ಹೊಸ ಲುಕ್ ನಲ್ಲಿ ಬಿಡುಗಡೆಯಾಗುತ್ತಿದೆ ಮಹೀಂದ್ರಾ ಸ್ಕಾರ್ಪಿಯೋ, ಹೊಸ ವಿಶೇಷತೆಗಳೇನು ಗೊತ್ತೇ??

ಅದೇ ಹಳೆಯ ಖದರ್ ನೊಂದಿಗೆ ಹೊಸ ಲುಕ್ ನಲ್ಲಿ ಬಿಡುಗಡೆಯಾಗುತ್ತಿದೆ ಮಹೀಂದ್ರಾ ಸ್ಕಾರ್ಪಿಯೋ, ಹೊಸ ವಿಶೇಷತೆಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹೊಸವರ್ಷದ ಸಮಯದ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಕಂಪನಿಗಳು ಹೊಸ ಹೊಸ ರೀತಿಯ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದ ಲೀಡಿಂಗ್ ಕಾರ್ ಸಂಸ್ಥೆಯಾಗಿರುವ ಮಹಿಂದ್ರ ಕೂಡ ಸ್ಕಾರ್ಪಿಯೋದಲ್ಲಿ ಹೊಸ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಹಿಂದ್ರ ಸಂಸ್ಥೆಯ ಥಾರ್ ಈಗಾಗಲೇ ದೇಶದಾದ್ಯಂತ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಎಸ್ ಯು ವಿ ಕಾರನ್ನು ಖರೀದಿಸಬೇಕೆಂದು ಹುಡುಕಾಡುತ್ತಿರುವ ವರಿಗೆ ಸ್ಕಾರ್ಪಿಯೋ 2022 ರ ಎಡಿಷನ್ ತುಂಬಾನೇ ಪರ್ಫೆಕ್ಟ್ ಎಂದು ಹೇಳಬಹುದಾಗಿದೆ.

ಹಾಗಿದ್ದರೆ ಕಾರಿನಲ್ಲಿರುವ ವಿಶೇಷತೆ ಹಾಗೂ ಗುಣಲಕ್ಷಣಗಳು ಏನು ಎಂಬುದನ್ನು ನಿಮಗೆ ವಿವರಿಸುತ್ತೇವೆ ಬನ್ನಿ. ಈ ಕಾರಿನಲ್ಲಿ ಸನ್ರೂಫ್ ಜೊತೆಗೆ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಕೂಡ ಇದೆ. ಮಲ್ಟಿ ಫಂಕ್ಷನ್ ಸ್ಟೇರಿಂಗ್ ವೀಲ್ ಹೊಸ ರೀತಿಯ ಇನ್ಸ್ಟ್ರುಮೆಂಟ್ ಕನ್ಸೋಲ್ ಎಂಜಿನ್ ಸ್ಟಾರ್ಟ್ ಹಾಗೂ ಸ್ಟಾರ್ಟ್ ಬಟನ್ ಗಳು ಕೂಡ ಇದ್ದು ಡಬಲ್ ಡ್ಯಾಶ್ ಬೋರ್ಡ್ ಗಳಿವೆ. ಆದರೆ ಈ ವೈಶಿಷ್ಟ್ಯತೆಗಳು ಕೇವಲ ಹೈ ಎಂಡ್ ಎಸ್ ಯು ವಿ ಯಲ್ಲಿ ಮಾತ್ರ ಇರಲಿದೆ. ಇನ್ನು ಕಾರಿನ ಒಳಭಾಗವನ್ನು ಆಕರ್ಷಕವಾಗಿ ಕಾಣಿಸಲು ಸಿಲ್ವರ್ ಆಕ್ಸೆಂಟ್ಗಳೊಂದಿಗೆ ವರ್ಟಿಕಲ್ ಏಸಿ ವೆಂಟ್ ಗಳನ್ನು ಡ್ಯಾಶ್ ಬೋರ್ಡಿನ ಬಲಭಾಗದಲ್ಲಿ ಲಗತ್ತಿಸಲಾಗಿದೆ. ಈ ಕಾರಿನ ಇನ್ನಷ್ಟು ವಿಶೇಷಗಳ ಕುರಿತಂತೆ ಹೇಳುವುದಾದರೆ ವಿಭಿನ್ನವಾದ ಎಲ್ಇಡಿ ಹೆಡ್ ಲೈಟ್ ಗಳು ಮಿಶ್ರಲೋಹದ ವೀಲ್ ಗಳು. ಇಷ್ಟು ಮಾತ್ರವಲ್ಲದೆ ಈ ಸಲ ಸ್ಕಾರ್ಪಿಯೋ ಗೆ ಹೊಸ ಟಚ್ ನೀಡಲಾಗಿದ್ದು ಮುಂಭಾಗದಲ್ಲಿ ದೊಡ್ಡ ಗ್ರಿಲ್ ನೀಡಲಾಗಿದೆ.

ಹಿಂದಿನ ಬಾಗಿಲಿನಲ್ಲಿ ಸ್ಪಾಯ್ಲರ್, ಮಲ್ಟಿ ಸ್ಪೋಕ್ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಬಲವಾದ ಬಂಪರ್ ಗಳ ಜೊತೆಗೆ ಎಲ್ಇಡಿ ಟೈಮ್ ಲ್ಯಾಂಪು ಗಳು ಕೂಡ ಇದರಲ್ಲಿ ಅಡಕವಾಗಿದೆ. ನ್ಯೂ ಸ್ಕಾರ್ಪಿಯೋ ದಲ್ಲಿ 2.2 ಲೀಟರ್ ಸಾಮರ್ಥ್ಯವನ್ನು ಹೊಂದಿರುವ ಎಂ ಹಾಕ್ ಎಂಜಿನ್ ಅನ್ನು ಬಳಸಲು ಇದು ವಾಹನದ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಹೀಗಾಗಿ ಈ ಬಾರಿಯ ಸ್ಕಾರ್ಪಿಯೊ ಹಿಂದೆಂದಿಗಿಂತ ಬಲಿಷ್ಠವಾಗಿ ಮೂಡಿಬರಲಿದೆ. ಮಹಿಂದ್ರ ಸಂಸ್ಥೆಯ ಜನಪ್ರಿಯ ಕಾರ್ ಆಗಿರುವ ಥಾರ್ ಗೆ ಬಳಸಿರುವ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನನ್ನು ಈ ಕಾರಿನಲ್ಲಿ ಕೂಡ ಬಳಸಲಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ನ್ಯೂ ಜನರೇಶನ್ ನ ಸ್ಕಾರ್ಪಿಯೋ ಕಾರು ಇದು ಎಂದು ಹೇಳಬಹುದಾಗಿದೆ. ಥಾರ್ ನಂತೆ ಈ ಕಾರು ಕೂಡ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸೋಣ.