ಚಳಿ ಇರುವ ಕಾರಣ ದೋಸೆ ಇಡ್ಲಿ ಹಿಟ್ಟು, ಸರಿಯಾಗಿ ಹುಳಿ ಬರುತ್ತಿಲ್ಲವೇ?? ಹಾಗಿದ್ದರೆ ಹೀಗೆ ಮಾಡಿ ಸರಿಯಾಗಿ ಹುಳಿ ಬರುತ್ತದೆ.

ಚಳಿ ಇರುವ ಕಾರಣ ದೋಸೆ ಇಡ್ಲಿ ಹಿಟ್ಟು, ಸರಿಯಾಗಿ ಹುಳಿ ಬರುತ್ತಿಲ್ಲವೇ?? ಹಾಗಿದ್ದರೆ ಹೀಗೆ ಮಾಡಿ ಸರಿಯಾಗಿ ಹುಳಿ ಬರುತ್ತದೆ.

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಸಾಮಾನ್ಯವಾಗಿ ಬೆಳಗ್ಗೆ ಉಪಹಾರಕ್ಕೆ ದೋಸೆ ಅಥವಾ ಇಡ್ಲಿಯೇ ಮೊದಲ ಆಹಾರ. ಅದರಲ್ಲೂ ದೋಸೆ ಹಿಟ್ಟಿಗೆ ಅಥವಾ ಇಡ್ಲಿ ಹಿಟ್ಟಿಗೆ ಸರಿಯಾಗು ಹುದುಗು ಬಂದರೆ ಅಥವಾ ಹುಳಿ ಬಂದರೆ ಮೃದುವಾದ ದೋಸೆ ಅಥವಾ ಇಡ್ಲಿ ತಯಾರಿಸಬಹುದು. ಆದರೇನು ಮಾಡುವುದು ಇದು ಚಳಿಗಾಲ. ಚಳಿಗಾಲದಲ್ಲಿ ಬೇಗ ಹಿಟ್ಟು ರುಬ್ಬಿಟ್ಟಿದ್ದರೂ ಕೂಡ ಬೆಳಿಗ್ಗೆ ಆಗುವಷ್ಟರಲ್ಲಿ ಹುಳಿ ಬರುವುದಿಲ್ಲ, ಆಗ ದೋಸೆಯಾಗಲಿ ಇಡ್ಲಿಯಾಗಲಿ ಗಟ್ಟಿಯಾಗುವ ಸಾಧ್ಯತೆಗಳಿರುತ್ತವೆ.

ಹಾಗಾದರೆ ಇದಕ್ಕೇನು ಮಾಡಬೇಕು ಇಲ್ಲಿದೆ ಕೆಲವು ಸರಳ ಉಪಾಯ. ದೋಸೆ ಅಥವಾ ಇಡ್ಲಿ ಹಿಟ್ಟನ್ನು ಸಿದ್ಧಪಡಿಸಿಕೊಂಡ ಮೇಲೆ, ಅದಕ್ಕೆ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಹಿಟ್ಟಿನ ಪಾತ್ರೆಯನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ರಾತ್ರಿಯಿಡಿ ಹಾಗೆಯೇ ಇಡಿ. ಬೆಳಿಗೆ ಆಗುವಷ್ಟರಲ್ಲಿ ಹುಳಿ ಬಂದಿರುತ್ತದೆ. ಮುಂದಿನ ಟಿಪ್ಸ್, ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ.

ಬಳಿಕ ಅದಕ್ಕೆ ಡ್ರೈ ಯೀಸ್ಟ್ ನ್ನು ಸೇರಿಸಿ ಮಿಕ್ಸ್ ಮಾಡಿ. ೨೦ ನಿಮಿಷ ಹಾಗೆಯೇ ಬಿಡಿ. ನಂತರ ಇದನ್ನು ಹಿಟ್ಟಿಗೆ ಸೇರಿಸಿ. ಇದನ್ನು ಇಡೀ ರಾತ್ರಿ ಇಡಬೇಕಿಲ್ಲ. ೩೦೪ ಗಂಟೆ ಇಟ್ಟರೂ ಚೆನ್ನಾಗಿ ಹುದುಗಿ ಕೊಳ್ಳುತ್ತದೆ. ಇನ್ನೊಂದು ಟಿಪ್ಸ್ ಎಂದರೆ ಒಂದು ಖಾಲಿ ಕುಕ್ಕರ್ ತೆಗೆದುಕೊಳ್ಳಿ. ಅದನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ರೆಡಿಯಾದ ಹಿಟ್ಟನ್ನು ಕುಕ್ಕರ್ ನಲ್ಲಿ ಇಟ್ಟು ಮುಚ್ಚಳ ಮುಚ್ಚಿ. ಇದು ಬೆಳಗ್ಗೆ ಆಗುವಷ್ಟರಲ್ಲಿ ಅತ್ಯುತ್ತಮವಾಗಿ ಹುದುಗಿ ಬಂದಿರುತ್ತದೆ. ಈ ಮೇಲಿನ ಯಾವುದೇ ವಿಧಾನಗಳಿಂದ ಹುದುಗಿದ ಹಿಟ್ಟನ್ನು ಚಳಿಗಾಲದಲ್ಲಿಯೂ ಕೂಡ ಸಿದ್ಧಪಡಿಸಿಕೊಳ್ಳಬಹುದು.