ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆಗೂ ಬಯಲಾಯಿತು ಕಾರಣ, ಡ್ಯಾನ್ಸ್ ಕಾರ್ಯಕ್ರಮಗಳಿಗೆ ಜಡ್ಜ್ ಆಗಿ ವಿನೋದ್ ರಾಜ್ ಯಾಕೆ ಬರುವುದಿಲ್ಲ ಗೊತ್ತೇ?? ಭೇಷ್ ಎಂದ ನೆಟ್ಟಿಗರು.

12

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಒಂದು ಕಾಲದಲ್ಲಿ ನಟಿ ಲೀಲಾವತಿ ಅಮ್ಮ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಾಯಕನಟಿ ಹಾಗೂ ಪೋಷಕರಾಗಿದ್ದರು ಎಂಬುದು ತಿಳಿದಿದೆ. ಇನ್ನು ಅವರ ಮಗನಾಗಿರುವ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಕಾಲಿಟ್ಟ ಸಂದರ್ಭದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಆಗಿ ಮಿಂಚಿದ್ದು ಕೂಡ ತಿಳಿದಿದೆ. ಆದರೆ ಅದಾದ ನಂತರ ಇಬ್ಬರೂ ಕೂಡ ಕನ್ನಡ ಚಿತ್ರರಂಗದಿಂದ ದೂರ ಆಗಿ ಸಿಟಿ ಜೀವನ ಬಿಟ್ಟು ನೆಲಮಂಗಲದಲ್ಲಿ ಹಳ್ಳಿಯಲ್ಲಿ ಜೀವನ ನಡೆಸುತ್ತಿದ್ದರು ಎಂಬುದು ಕೂಡ ಇತ್ತೀಚಿನ ಸುದ್ದಿಗಳಲ್ಲಿ ತಿಳಿದುಬಂದಿದೆ.

ವ್ಯವಸಾಯ ಮಾಡುತ್ತಾ ತಮ್ಮ ಗ್ರಾಮಸ್ಥರಿಗೆ ಸಹಾಯವನ್ನು ಮಾಡುತ್ತಾ ಆಸ್ಪತ್ರೆಯನ್ನು ಕಟ್ಟಿಸಿ ಹಸುಗಳಿಗೆ ಮೇವನ್ನು ಒದಗಿಸುತ್ತ ಹೀಗೆ ಒಳ್ಳೆಯ ಕಾರ್ಯಗಳಿಗೆ ತೊಡಗಿಕೊಂಡಿದ್ದಾರೆ. ಆದರೆ ಇಂದಿಗೂ ಕೂಡ ಇವರಿಬ್ಬರು ಚಿತ್ರರಂಗದಲ್ಲಿ ಸಕ್ರಿಯರಾದರೆ ಇವರಿಗಾಗಿ ಚಿತ್ರಮಂದಿರಗಳಿಗೆ ಬರುವ ದೊಡ್ಡ ವೀಕ್ಷಕ ಬಳಗವಿದೆ ಎಂದು ಹೇಳಬಹುದು. ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಯಾವ ಮಟ್ಟದಲ್ಲಿ ಡ್ಯಾನ್ಸಿಂಗ್ ಸಂಚಲನವನ್ನು ಸೃಷ್ಟಿಸಿದ್ದರು ಎಂಬುದನ್ನು ನೀವು 90ರ ದಶಕದ ಮಕ್ಕಳಾಗಿದ್ದರೆ ಖಂಡಿತವಾಗಿ ಟಿವಿಗಳಲ್ಲಿ ನೋಡಿರುತ್ತೀರಿ ಅಥವಾ ಚಿತ್ರಮಂದಿರಗಳಲ್ಲಿ ನೋಡಿರುತ್ತೀರಿ.

ಇನ್ನು ಈಗ ಅವರು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ನಟಿಸಲು ಎಂದು ಎಷ್ಟು ಜನ ಹಾರೈಸುತ್ತಾರೋ ಅಷ್ಟೇ ಜನ ಕನ್ನಡದ ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ವಿನೋದರಾಜ್ ರವರು ಜಡ್ಜ್ ಆಗಿ ಕಾಣಿಸಿಕೊಳ್ಳಲಿ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸಂಚಲನವನ್ನೇ ಮಾಡಿದ್ದರು. ಯಾಕೆಂದರೆ ವಿನೋದ್ ರಾಜ್ ರವರ ಡ್ಯಾನ್ಸಿಂಗ್ ಶೈಲಿಯನ್ನು ವುದು ಬೇರೆಲ್ಲಾ ಕಲಾವಿದರಿಗೆ ಹೋಲಿಸಿದರೆ ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿತ್ತು. ಇತ್ತೀಚಿಗಷ್ಟೇ ವಿನೋದ್ ರಾಜ್ ರವರು ಕೂಡ ಡ್ಯಾನ್ಸಿಂಗ್ ಹೇಗಿತ್ತು ಮತ್ತು ಹೇಗಿದೆ ಇಷ್ಟು ಮಾತ್ರವಲ್ಲದೆ ಯಾಕೆ ತಾನು ಇನ್ನೂ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ ಎಂಬುದನ್ನು ಕೂಡ ವಿವರವಾಗಿ ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೆ ತಾನು ನಾಯಕನಾಗಿದ್ದ ಸಂದರ್ಭದಲ್ಲಿ ಡ್ಯಾನ್ಸಿಂಗ್ ಗೆ ಇದ್ದಂತಹ ಪ್ರಾಮುಖ್ಯತೆಯನ್ನು ಕೂಡ ವಿವರಿಸಿದ್ದಾರೆ. ಹಾಗಿದ್ದರೆ ವಿನೋದರಾಜ್ ರವರು ಇಷ್ಟೊಂದು ಬೇಡಿಕೆ ಇದ್ದರೂ ಕೂಡ ಡ್ಯಾನ್ಸಿಂಗ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಇದುವರೆಗೂ ಯಾಕೆ ಕಾಣಿಸಿಕೊಂಡಿಲ್ಲ ಎಂಬುದನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ವಿವರವಾಗಿ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ನಟ ವಿನೋದ್ ರಾಜ್ ರವರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಬರಲು ಅಥವಾ ಕನಿಷ್ಠ ಪಕ್ಷ ಗೆಸ್ಟ್ ಆಗಿ ಆದರೂ ಕೂಡ ಬರಲು ಕಾರ್ಯಕ್ರಮದ ಶ್ರೀಕಾಂತ ರವರು ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ವಿನೋದರಾಜ್ ರವರು ನೀಡುವ ಉತ್ತರ ನಿಜವಾಗಿಯೂ ಜವಾಬ್ದಾರಿಯುತವಾದದ್ದು ಎಂದು ಹೇಳಬಹುದು. ಹೌದು ತಾಯಿ ಲೀಲಾವತಿ ಅವರನ್ನು ನಂಬಿಕೊಂಡು 35ಕ್ಕೂ ಹೆಚ್ಚಿನ ಕುಟುಂಬಗಳು ದಿನನಿತ್ಯ ಊಟವನ್ನು ಮಾಡುತ್ತಿದ್ದಾರೆ.

ನೆಲಮಂಗಲದಲ್ಲಿರುವ ತೋಟಗಳು ಮತ್ತು ತಮಿಳುನಾಡಿನಲ್ಲಿರುವ ತೋಟಗಳು ಎಲ್ಲರ ಜವಾಬ್ದಾರಿ ನನ್ನ ಮೇಲಿದೆ ಎಂಬುದಾಗಿ ಕೂಡ ಹೇಳಿದ್ದಾರೆ. ಕೆಲಸಗಾರರಿಗೆ ವ್ಯವಸ್ಥೆ ಇಷ್ಟು ಮಾತ್ರವಲ್ಲದೆ ಹಲವಾರು ಕುಟುಂಬದ ಹಾಗೂ ಕೆಲಸ ನಿಮಿತ್ತವಾಗಿ ಇರುವಂತಹ ಜವಾಬ್ದಾರಿಗಳು ನನ್ನ ಮೇಲಿದೆ ಅದನ್ನೆಲ್ಲ ಬಿಟ್ಟು ಬರುವ ನನಗೆ ಸಮಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಸಮಯ ಇದ್ದಾಗ ನನಗೆ ಯಾವುದೇ ಅವಕಾಶಗಳು ಬರಲಿಲ್ಲ ಈಗ ನನಗೆ ಬಂದಿರುವ ಅವಕಾಶಗಳನ್ನು ಹುಡುಕಿಕೊಂಡು ನನ್ನ ತಾಯಿಯನ್ನು ಬಿಟ್ಟು ಹೋಗುವಷ್ಟು ನನಗೆ ಸಮಯವಿಲ್ಲ ಎಂಬುದಾಗಿ ವಿನೋದ್ ರಾಜ್ ಅವರು ಹೇಳಿದ್ದಾರೆ.

ಒಂದು ಕಾಲದಲ್ಲಿ ನನ್ನ ತಾಯಿ ಲೀಲಾವತಿಯವರು ನನ್ನನ್ನು ಕಾರಿನಲ್ಲಿ ಮಲಗಿಸಿ ನಟನೆ ಮಾಡಿಕೊಂಡು ಬರುತ್ತಿದ್ದರು ಅಷ್ಟರಮಟ್ಟಿಗೆ ನನ್ನನ್ನು ನೋಡಿಕೊಂಡಿದ್ದಾರೆ. ಈಗ ಅವರು ಅಂದುಕೊಂಡಿರುವ ಕೆಲಸವನ್ನು ಸಾಧಿಸುವುದು ನನ್ನ ಜೀವನದ ಪರಮಧ್ಯೇಯ ಎಂಬುದಾಗಿ ವಿನೋದ್ ರಾಜ್ ಅವರು ಹೇಳಿಕೆ ನೀಡಿದ್ದಾರೆ, ಈ ಮೂಲಕ ತಾಯಿಗಾಗಿ ತನ್ನ ಕುರಿತು ಆಲೋಚನೆ ಮಾಡುತ್ತಿಲ್ಲ ಎಂದು ವಿನೋದ್ ರಾಜ್ ರವರಿಗೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಆದರೂ ಕೂಡ ಹೇಗಾದರೂ ಮಾಡಿ, ಒಂದು ಒಂದು ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಳ್ಳಿ ಎಂದು ಮನವಿ ಕೂಡ ಮಾಡಿದ್ದಾರೆ. ಹೀಗಾಗಿ ಇವುಗಳನ್ನು ಕಿರುತೆರೆಯ ಡ್ಯಾನ್ಸಿಂಗ್ ಕಾರ್ಯಕ್ರಮಗಳಲ್ಲಿ ವಿನೋದರಾಜ್ ರವರು ಜಡ್ಜ್ ಆಗಿ ಬರದೆ ಇರಲು ಕಾರಣ ಎಂದು ಹೇಳಬಹುದಾಗಿದೆ. ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬ ಮನುಷ್ಯ ಕೂಡ ವಿನೋದ್ ರಾಜ್ ರವರ ಮಾತನ್ನು ಖಂಡಿತವಾಗಿ ಒಪ್ಪಿಕೊಳ್ಳುತ್ತಾರೆ.