ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸೌತ್ ಆಫ್ರಿಕಾ ಸೆಂಚೂರಿಯನ್ ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ವಿರಾಟ್ ಹೇಳಿದ್ದೇನು ಗೊತ್ತಾ??

12

ನಮಸ್ಕಾರ ಸ್ನೇಹಿತರೇ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಜಯಗಳಿಸಿತು. ಈ ಮೂಲಕ ಮೂರು ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಯಿತು.

ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಗೆಲುವಿಗೆ ಕಾರಣರಾದ ತಂಡದ ಆಟಗಾರರನ್ನು ಮುಕ್ತ ಕಂಠದಿಂದ ಹೊಗಳಿದರು. ಟೆಸ್ಟ್ ನಡೆದಿದ್ದೇ ನಾಲ್ಕು ದಿನ, ಆದರೂ ನಾವು ಜಯಗಳಿಸುತ್ತೇವೆಂದೇ ತಿಳಿಯಿರಿ, ನಮ್ಮ ತಂಡ ಎಷ್ಟು ಉತ್ತಮ ಪ್ರದರ್ಶನ ನೀಡಿತೆಂದು ಎಂದು ಹೇಳಿದರು. ನಮಗೆ ಗೆಲ್ಲಲು ಪ್ರಮುಖ ಕಾರಣವೆಂದರೇ ರಾಹುಲ್ ಹಾಗೂ ಮಯಾಂಕ್ ನಡುವಿನ ಮೊದಲ ವಿಕೇಟ್ ಜೊತೆಯಾಟ. ಆ ಜೊತೆಯಾಟದಿಂದಲೇ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿತು. ನಮ್ಮ ಜಯಕ್ಕೆ ಮುನ್ನುಡಿ ಬರೆಯಿತು ಎಂದರು.

ಇನ್ನು ಉತ್ತಮ ಬೌಲಿಂಗ್ ಮಾಡಿದ ಮಹಮದ್ ಶಮಿಯನ್ನು ಹೊಗಳಿದ ವಿರಾಟ್, ಶಮಿ ವಿಶ್ವದ ಶ್ರೇಷ್ಠ ವೇಗದ ಬೌಲರ್ ಗಳಲ್ಲಿ ಟಾಪ್ – 3 ಸ್ಥಾನ ಪಡೆಯುತ್ತಾರೆ. ಅವರೇ ನಮಗೆ ಟ್ರಂಪ್ ಕಾರ್ಡ್. ಇನ್ನು ಬುಮ್ರಾ-ಶಮಿ ಜೋಡಿ ಮುಂದಿನ ಟೆಸ್ಟ್ ನಲ್ಲಿಯೂ ಸಹ ನಮಗೆ ಉತ್ತಮ ಬೌಲಿಂಗ್ ಮಾಡುತ್ತಾರೆ ಎಂದರು. ಇನ್ನು ಪ್ರಥಮ ಇನ್ನಿಂಗ್ಸ್ ನಲ್ಲಿ ಬುಮ್ರಾ ಇಂಜುರಿಗೊಂಡು ಹೊರಗಡೆ ನಡೆದರು. ಆ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ 30 ರಿಂದ 40 ರನ್ ಹೆಚ್ಚು ಗಳಿಸಿತು‌. ಇಲ್ಲವಾದಲ್ಲಿ 150 ರನ್ ಒಳಗೆ ಆಲೌಟ್ ಆಗುತ್ತಿತ್ತು ಎಂದರು. ಉಳಿದಿರುವ ಎರಡು ಟೆಸ್ಟ್ ಗೆಲ್ಲುವುದೇ ನಮ್ಮ ಮುಂದಿರುವ ಗುರಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.