ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಷ್ಟರ ಮಟ್ಟಿಗೆ ಮಹಿಳೆಯರು ಮುಳುಗುತ್ತಾರೆ ಎನ್ನುವುದಕ್ಕೆ ಇದೆ ಸಾಕ್ಷಿ, ಸೀರಿಯಲ್ ನೋಡುವಾಗ ಮನೆಯಲ್ಲಿ ನಡೆದ್ದಡೇನು ಗೊತ್ತೇ??

27

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಮಹಿಳೆಯರಿಗೆ ಜಗತ್ತೇ ತಲೆಕೆಳಗಾಗಲಿ ಆದರೆ ದಾರವಾಹಿ ನೋಡುವುದನ್ನು ಮಾತ್ರ ಬಿಡುವುದಿಲ್ಲ ಎಂಬುದನ್ನು ಪುರುಷರು ಆಗಾಗ ಹೇಳುತ್ತಿರುತ್ತಾರೆ ಆದರೆ ಇಂದು ನಡೆದಿರುವ ಘಟನೆ ಖಂಡಿತವಾಗಿ ಒಂದು ಜೀವಂತ ಉದಾಹರಣೆ ಎಂದರೆ ತಪ್ಪಾಗಲಾರದು. ತಮಿಳುನಾಡಿನಲ್ಲಿ ನಡೆದಿರುವ ಒಂದು ಘಟನೆ ಈಗ ಇದಕ್ಕೆ ಒಂದು ಜೀವಂತ ಉದಾಹರಣೆ ಎಂಬಂತೆ ಮಾರ್ಪಟ್ಟಿದೆ. ಅದೇನೆಂದರೆ ನಗರದ ಖ್ಯಾತ ಆಡಿಟರ್ ಆಗಿರುವ ಮೇಘನಾಥನ್ ರವರ ಮನೆಯಲ್ಲಿ ನಡೆದಿರುವ ಘಟನೆಯನ್ನು ಇಂದು ನಾವು ಹೇಳಲು ಹೊರಟಿರುವುದು.

ಗುರುವಾರ ರಾತ್ರಿ ಮೇಘನಾಥನ್ ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಹಾಗೂ ಸಂಬಂಧಿಕರು ರಾತ್ರಿ ಊಟ ಮಾಡಿಕೊಂಡು ಇಂಟರೆಸ್ಟಿಂಗ್ ಆಗಿ ಧಾರವಾಹಿಯನ್ನು ನೋಡುತ್ತಿದ್ದರು. ಮಹಿಳೆಯರು ದಾರವಾಹಿ ನೋಡುವಾಗ ಆಕಾಶವೇ ಬಿದ್ದರೂ ಕೂಡ ಅದರ ಬಗ್ಗೆ ಪರಿವೇ ಇಲ್ಲದಂತೆ ಧಾರವಾಹಿಯನ್ನು ನೋಡುತ್ತಾರೆ ಎಂಬುದು ಹಲವಾರು ಬಾರಿ ನಾವು ಕೇಳಿದ್ದೇವೆ ಆದರೆ ಇಲ್ಲಿ ನಿಜವಾಗಿ ನಡೆದಿದೆ. ಹಾಗಿದ್ದರೆ ಇವರು ಧಾರವಾಹಿ ನೋಡುತ್ತಿದ್ದ ಸಂದರ್ಭದಲ್ಲಿ ನಡೆದಂತಹ ಘಟನೆ ಏನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಇವರು ಧಾರವಾಹಿ ನೋಡುತ್ತಿದ್ದ ಸಂದರ್ಭದಲ್ಲಿ ನಾಲ್ವರು ಕಳ್ಳರು ಬಂದಿದ್ದಾರೆ ಇಬ್ಬರು ಗೇಟಿನ ಹೊರಗಡೆ ನಿಂತಿದ್ದರೆ ಇನ್ನು ಉಳಿದ ಇಬ್ಬರು ಮನೆಯ ರೂಮಿನ ಒಳಗಡೆ ಹೋಗಿ ಅಲ್ಲಿದ್ದ ಹಣವನ್ನು ತೆಗೆದಿದ್ದಾರೆ. ಆದರೆ ವಾರ್ಡ್ರೋಬ್ ನ ಕೀ ಸಿಗದಿದ್ದ ಕಾರಣ ಮೇಘನಾಥನ್ ರವರ ಪತ್ನಿ ಹಾಗೂ ಅವರ ಸಂಬಂಧಿಕರನ್ನು ಕಟ್ಟಿಹಾಕಿ ಕೀಯನ್ನು ಪಡೆದು 19 ಲಕ್ಷ ಮೌಲ್ಯವುಳ್ಳ ಚಿನ್ನಾಭರಣ ಹಾಗೂ ಹಣವನ್ನು ಲೂಟಿ ಮಾಡಿದ್ದಾರೆ. ಒಟ್ಟಾರೆಯಾಗಿ ಮಹಿಳೆಯರ ಧಾರವಾಹಿ ಹುಚ್ಚಿನಲ್ಲಿ 19 ಲಕ್ಷ ರೂಪಾಯಿಯನ್ನು ಮೇಘನಾಥನ್ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು. ಈ ಕಥೆ ಮಿಕ್ಕುಳಿದ ಮಹಿಳೆಯರಿಗೆ ಒಂದೊಳ್ಳೆ ಪಾಠವಾಗಲಿ ಎಂದು ಆಶಿಸುತ್ತೇವೆ.