ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈ ಬಾರಿಯ ಹರಾಜಿನಲ್ಲಿ ಬಲಿಷ್ಠ ಭಾರತೀಯ ಆಟಗಾರರ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ, ಆ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಸಲ ಆದರೂ ಆರ್ಸಿಬಿ ತಂಡ ಕಪ್ ಗೆಲ್ಲುತ್ತದೆ ಎಂಬುದು ಅಭಿಮಾನಿಗಳ ನೀರಿಕ್ಷೆ. ಆದರೇ ಅದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ತಿಳಿದಿಲ್ಲ. ಇನ್ನು ಈ ಭಾರಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್ ಹಾಗೂ ಮಹಮದ್ ಸಿರಾಜ್ ರನ್ನ ಮಾತ್ರ ಉಳಿಸಿಕೊಂಡಿದೆ. ಕಪ್ ಗೆಲ್ಲಲು ಆರ್ಸಿಬಿ ಈ ಐದು ಆಟಗಾರರ ಮೇಲೆ ಕಣ್ಣಿಟ್ಟಿದೆಯಂತೆ. ಬನ್ನಿ ಆ ಐವರು ಆಟಗಾರರು ಯಾರು ಎಂದು ತಿಳಿಯೋಣ.

ಟಾಪ್ 5 – ಶುಭಮಾನ್ ಗಿಲ್ : ಕೆಕೆಆರ್ ತಂಡದ ಆರಂಭಿಕ ಆಟಗಾರ ಹಾಗೂ ಅಂಡರ್ 19 ತಂಡದ ನಾಯಕನಾಗಿದ್ದ ಯುವ ಆಟಗಾರ ಶುಭಮಾನ್ ಗಿಲ್ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ. ಗಿಲ್ ಆರಂಭಿಕ ಹಾಗೂ ನಾಯಕ ಎರಡು ಸ್ಥಾನ ನಿಭಾಯಿಸಬಲ್ಲರು.

ಟಾಪ್ 4 : ದೇವದತ್ ಪಡಿಕ್ಕಲ್ – ಆರ್ಸಿಬಿ ತಂಡದ ಅನ್ವೇಷಣೆ, ಕನ್ನಡಿಗ ಪಡಿಕ್ಕಲ್ ಸದ್ಯ ಉತ್ತಮ ಫಾರ್ಮ್ ನಲ್ಲಿ ಇಲ್ಲ. ಆದರೇ ಫಾರ್ಮ್ ಗೆ ಮರಳಿದರೇ ಶತಕ ಸಿಡಿಸುವ ಬ್ಯಾಟ್ಸಮನ್ ಅವರು‌. ಹಾಗಾಗಿ ಆರ್ಸಿಬಿ ತಂಡ ತನ್ನ ಮಾಜಿ ಆಟಗಾರನ ಮೇಲೆ ಒಂದು ವಿಶೇಷ ಕಣ್ಣಿಟ್ಟಿದೆ.

ಟಾಪ್ 3 : ಪ್ಯಾಟ್ ಕಮಿನ್ಸ್ – ಆಸ್ಟ್ರೇಲಿಯಾದ ಸ್ಟಾರ್ ವೇಗಿ ಪ್ಯಾಟ್ ಕಮಿನ್ಸ್ ಸದ್ಯ ಉತ್ತಮ ಲಯದಲ್ಲಿದ್ದಾರೆ‌. ಕಳೆದ ಭಾರಿ ಕೆಕೆಆರ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಒಬ್ಬ ಪೇಸ್ ವೇಗಿಯ ನೀರಿಕ್ಷೆಯಲ್ಲಿರುವ ಆರ್ಸಿಬಿ ತಂಡ ಆಲ್ ರೌಂಡರ್ ಕಮಿನ್ಸ್ ಗೆ ಮಣೆ ಹಾಕಬಹುದು.

ಟಾಪ್ 2 : ಯುಜವೆಂದ್ರ ಚಾಹಲ್ – ಆರ್ಸಿಬಿಯ ಮ್ಯಾಚ್ ವಿನ್ನರ್ ಆಗಿದ್ದ ಯುಜಿ ಚಾಹಲ್ ಈ ಭಾರಿ ರಿಟೇನ್ ಆಗಿಲ್ಲ. ಆದರೆ ಅವರನ್ನ ಪುನಃ ತಂಡದಲ್ಲಿ ಸೇರಿಸಿಕೊಳ್ಳುತ್ತೆವೆಂದು ಆರ್ಸಿಬಿ ಮ್ಯಾನೇಜ್ ಮೆಂಟ್ ಹೇಳಿತ್ತು. ಹಾಗಾಗಿ ಚಾಹಲ್ ರನ್ನ ಟಾರ್ಗೇಟ್ ಮಾಡಿ ಪರ್ಚೇಸ್ ಮಾಡುವುದು ಪಕ್ಕಾ.

ಟಾಪ್ 1 : ಹರ್ಷಲ್ ಪಟೇಲ್ – ಕಳೆದ ಸೀಸನ್ ನ ಆರ್ಸಿಬಿಯ ಅನ್ವೇಷಣೆ, ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ರನ್ನ ಆರ್ಸಿಬಿ ರಿಟೇನ್ ಮಾಡಿಲ್ಲ. ಸ್ಲಾಗ್ ಓವರ್ ನಲ್ಲಿ ಅಧ್ಭುತವಾಗಿ ಬೌಲಿಂಗ್ ಮಾಡುವ ಹರ್ಷಲ್ ಪಟೇಲ್ ರನ್ನ ಮತ್ತೆ ಆರ್ಸಿಬಿ ಫ್ರಾಂಚೈಸಿ ಟಾರ್ಗೇಟ್ ಮಾಡಿ ಖರೀದಿಸುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.