ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏನೇನೋ ನಡೆಯುತ್ತಿದ್ದರೂ ಪಾಠ ಕಲಿಯದ ಕೊಹ್ಲಿ, ಪದೇ ಪದೇ ಮತ್ತೆ ಅದೇ ಎಡವಟ್ಟು. ಇದಕ್ಕೆಲ್ಲ ಪರಿಹಾರ ಒಂದೇ. ಏನು ಗೊತ್ತೇ??

5

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ಷೇತ್ರವೆಂದರೆ ಅದು ಕ್ರಿಕೆಟ್ ಕ್ಷೇತ್ರ ಎಂದರೆ ತಪ್ಪಾಗಲಾರದು. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಕ್ರಿಕೆಟ್ ಕ್ಷೇತ್ರದ ಅನಭಿಷಕ್ತ ದೊರೆಯ ಕುರಿತಂತೆ. ಈಗ ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ತಂಡದ ಕಪ್ತಾನನಾಗಿ ರುವ ವಿರಾಟ್ ಕೊಹ್ಲಿ ರವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಈಗ ಮಿನುಗುತ್ತಿರುವ ತಾರೆ ವಿರಾಟ್ ಕೊಹ್ಲಿ ಎಂದು ಹೇಳಬಹುದಾಗಿದೆ.

ಆದರೆ ಈ ತಾರೆ ಇತ್ತೀಚಿಗೆ ಅಷ್ಟೊಂದು ಜೋರಾಗಿ ಬೆಳಗುತ್ತಿಲ್ಲ ಎಂಬುದೇ ಅವರ ಅಭಿಮಾನಿಗಳಿಗೆ ಹಾಗೂ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇರುವ ನಿರಾಶೆಯಾಗಿದೆ. ಅದಕ್ಕೆ ಇನ್ನೂ ಮತ್ತೊಂದು ಸೇರ್ಪಡೆ ಎನ್ನುವಂತೆ ಇಂದು ವಿರಾಟ್ ಕೊಹ್ಲಿ ಅವರಿಗೆ 71ನೇ ಶತಕ ಬಾರಿಸುವ ಅವಕಾಶವಿದ್ದರೂ ಕೂಡ ಕೆಟ್ಟ ಹೊಡೆತಕ್ಕೆ ಕೈಹಾಕಿ ಮತ್ತೆ ತಪ್ಪು ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನಿಂಗ್ಸ ಆರಂಭದಲ್ಲಿ ಭಾರತೀಯ ಕ್ರಿಕೆಟ್ ತಂಡ ಆರಂಭಿಕ ಆಟಗಾರರನ್ನು ಕಳೆದುಕೊಂಡಿದ್ದಾಗ ವಿರಾಟ್ ಕೊಹ್ಲಿ ಅವರು ತಂಡಕ್ಕೆ ಆಧಾರವಾಗಿ ಬ್ಯಾಟಿಂಗ್ ಮಾಡುತ್ತಾರೆ.

ಆದರೆ ಇದೇ ಸಂದರ್ಭದಲ್ಲಿ ಲುಂಗಿ ಎನ್ಗಿಡಿ ರವರ ಎಸೆತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳುತ್ತಾರೆ. ಇದೇ ತಪ್ಪನ್ನು ಈ ಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿ ಕೂಡ ಮಾಡಿದ್ದರು. ಆಫ್ ಸೈಡ್ ಫಾಫ್ದ ಸ್ಟಂಪ್ ಎಸೆತವನ್ನು ಸರಿಯಾದ ದಿಕ್ಕಿನತ್ತ ಕನೆಕ್ಷನ್ ಮಾಡದೆ ವಿಕೆಟ್ ಕೀಪರ್ ಗೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ಔಟಾಗಿದ್ದಾರೆ. ಈಗಾಗಲೇ ಹಲವಾರು ವರ್ಷಗಳಿಂದ ವಿರಾಟ್ ಕೊಹ್ಲಿ ರವರ 71ನೇ ಶತಕ ಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದು ಈಗ ಮತ್ತೊಂದು ನಿರಾಸೆ ಕೂಡ ಅವರಿಗೆ ಬಂದು ತಲುಪಿದೆ. ಪದೇ ಪದೇ ವಿರಾಟ್ ಕೊಹ್ಲಿ ಅದೇ ತಪ್ಪನ್ನು ಮಾಡುತ್ತಿದ್ದು ಯಾವಾಗ ಸರಿ ಮಾಡಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದನ್ನು ಕಂಡ ನೆಟ್ಟಿಗರು ಕೂಡಲೇ, ದ್ರಾವಿಡ್ ರವರ ಸಲಹೆ ಇವರಿಗೆ ಅಗತ್ಯವಿದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ.