ಬಿಗ್ ಬ್ರೇಕಿಂಗ್ ನ್ಯೂಸ್: ಏಕದಿನ ಸರಣಿಗೆ ರೋಹಿತ್ ಅನುಮಾನ, ಭಾರತದ ಹೊಸ ನಾಯಕ ಯಾರು ಗೊತ್ತೇ?? ಯುವ ಆಟಗಾರನಿಗೆ ಕುಲಾಯಿಸಿದ ಅದೃಷ್ಟ.

ಬಿಗ್ ಬ್ರೇಕಿಂಗ್ ನ್ಯೂಸ್: ಏಕದಿನ ಸರಣಿಗೆ ರೋಹಿತ್ ಅನುಮಾನ, ಭಾರತದ ಹೊಸ ನಾಯಕ ಯಾರು ಗೊತ್ತೇ?? ಯುವ ಆಟಗಾರನಿಗೆ ಕುಲಾಯಿಸಿದ ಅದೃಷ್ಟ.

ನಮಸ್ಕಾರ ಸ್ನೇಹಿತರೇ ಭಾರತ ತಂಡ ದಕ್ಷಿಣ ಆಫ್ರಿಕಾ ಸರಣಿಯನ್ನ ಆಡುತ್ತಿರುವುದು ನಿಮಗೆ ತಿಳಿದಿರುವ ವಿಷಯವಾಗಿದೆ. ಈ ಸರಣಿಗೂ ಮುನ್ನ ಭಾರತ ತಂಡದಲ್ಲಿ ಮಹತ್ತರ ಬದಲಾವಣೆಯಾಗಿತ್ತು. ಭಾರತ ಏಕದಿನ ಕ್ರಿಕೇಟ್ ತಂಡದ ನಾಯಕರಾಗಿ ಪೂರ್ಣಾವಧಿಗೆ ರೋಹಿತ್ ಶರ್ಮಾರವರನ್ನ ನೇಮಿಸಿತ್ತು. ಇಂದು ತಂಡದಲ್ಲಿ ಕೆಲವು ಅಸಮಾಧಾನಗಳನ್ನ ಹುಟ್ಟಿಸಿತ್ತು. ಆದರೇ ಕೊನೆಗೆ ಎಲ್ಲವೂ ತಣ್ಣಗಾಯಿತು. ಈ ನಡುವೆ ನೆಟ್ಸ್ ನಲ್ಲಿ ಗಾಯಗೊಂಡ ರೋಹಿತ್ ಶರ್ಮಾ ಟೆಸ್ಟ್ ತಂಡದಿಂದ ಹೊರಬಿದ್ದರು.

ಏಕದಿನ ಸರಣಿ ಜನೇವರಿ 19 ರಿಂದ ನಡೆಯಲಿದ್ದು, ರೋಹಿತ್ ಶರ್ಮಾ ಇನ್ನು ಫಿಟ್ ಆಗದಿರುವ ಕಾರಣ ಏಕದಿನ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ರೋಹಿತ್ ಶರ್ಮಾ ಸದ್ಯ ಬೆಂಗಳೂರಿನ ಎನ್.ಸಿ.ಎ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೇ ರೋಹಿತ್ ಶರ್ಮಾ ಇನ್ನು ಸಂಪೂರ್ಣವಾಗಿ ಗುಣಮುಖರಾಗದ ಕಾರಣ, ಭಾರತ ತಂಡವನ್ನು ಇದುವರೆಗೂ ಬಿಸಿಸಿಐ ಪ್ರಕಟಿಸಿಲ್ಲ. ರೋಹಿತ್ ಗುಣಮುಖರಾಗುವುದನ್ನೇ ಬಿಸಿಸಿಐ ಕಾಯುತ್ತಿದೆ ಎಂದು ಹೇಳಲಾಗಿದೆ.

ರೋಹಿತ್ ಗುಣಮುಖರಾಗದಿದ್ದಲ್ಲಿ ಅವರನ್ನ ಏಕದಿನ ಸರಣಿಗೆ ಪರಿಗಣಿಸುವುದು ಅನುಮಾನ ಎಂದು ಹೇಳಲಾಗಿದೆ. ಮಂಡಿರಜ್ಜು ಗಾಯ ಗುಣಮುಖವಾಗಬೇಕೆಂದರೇ ಐದರಿಂದ ಆರು ವಾರ ವಿಶ್ರಾಂತಿ ಅಗತ್ಯ. ಹಾಗಾಗಿ ರೋಹಿತ್ ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಸದ್ಯ ಭಾರತ ತಂಡವನ್ನ ಮುನ್ನಡೆಸುವುರಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಮಾಜಿ ನಾಯಕ ವಿರಾಟ್ ಬದಲು, ತಂಡದ ಉಪನಾಯಕ ಕೆ.ಎಲ್.ರಾಹುಲ್ ನಾಯಕತ್ವ ವಹಿಸುವ ಸಾಧ್ಯತೆ ದಟ್ಟವಾಗಿದೆ. ರೋಹಿತ್ ಶರ್ಮಾ ಸ್ಥಾನಕ್ಕೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳ ಶತಕ ಭಾರಿಸಿದ ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆಯುವ ಸಾಧ್ಯತೆ. ಕೆ.ಎಲ್.ರಾಹುಲ್ ನಾಯಕರಾದರೇ ಭಾರತ ತಂಡದ ನೂತನ ನಾಯಕರಾಗುತ್ತಾರೆ. ರಾಹುಲ್ ದ್ರಾವಿಡ್ ನಂತರ ಕನ್ನಡಿಗನೊಬ್ಬ ಭಾರತ ತಂಡವನ್ನ ಮುನ್ನಡೆಸಿದ ಕೀರ್ತಿಗೆ ಪಾತ್ರರಾಗುತ್ತಾರೆ.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.