ಬಿಡುಗಡೆಯಾಯಿತು ಅಕ್ಟೋಬರ್ ಅಂಕಿ ಅಂಶ, ಸೆಪ್ಟೆಂಬರ್ ನಲ್ಲಿ ಕೋಟಿ ಗ್ರಾಹಕರನ್ನು ಕಳೆದುಕೊಂಡಿದ್ದ ಜಿಯೋ ಈ ಬಾರಿ ಪಡೆದುಕೊಂಡದ್ದು ಎಷ್ಟು ಗೊತ್ತೇ??

ಬಿಡುಗಡೆಯಾಯಿತು ಅಕ್ಟೋಬರ್ ಅಂಕಿ ಅಂಶ, ಸೆಪ್ಟೆಂಬರ್ ನಲ್ಲಿ ಕೋಟಿ ಗ್ರಾಹಕರನ್ನು ಕಳೆದುಕೊಂಡಿದ್ದ ಜಿಯೋ ಈ ಬಾರಿ ಪಡೆದುಕೊಂಡದ್ದು ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಟೆಲಿಕಾಂ ಸಂಸ್ಥೆಯಲ್ಲಿ ಪ್ರಸಿದ್ಧವಾಗಿರುವ ಹೆಸರುಗಳೆಂದರೆ ಜಿಯೋ ಏರ್ ಟೆಲ್ ಹಾಗೂ ಐಡಿಯಾ ವೊಡಾಫೋನ್ ಎಂದು ಹೇಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳು ಸೇವೆಗಳ ಮೇಲೆ ದರ ಹೆಚ್ಚು ಮಾಡಿರುವುದರಿಂದಾಗಿ ಪರಸ್ಪರ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡವು ಎಂದು ಹೇಳಬಹುದಾಗಿದೆ. ಆದರೆ ಇದರಲ್ಲಿ ಲಾಭ ಮಾಡಿಕೊಂಡಿರುವುದು ಜಿಯೋ ಸಂಸ್ಥೆಯೆಂದರೆ ಖಂಡಿತವಾಗಿ ತಪ್ಪಾಗಲಾರದು. ಸೆಪ್ಟೆಂಬರ್ ನಲ್ಲಿ ಜಿಯೋ ಸಂಸ್ಥೆಯ ಮಿಲಿಯನ್ ಗಟ್ಟಲೆ ಗ್ರಾಹಕರು ಏರ್ ಟೆಲ್ ಹಾಗೂ ಐಡಿಯಾ ಸಂಸ್ಥೆಗಳಿಗೆ ವರ್ಗಾವಣೆಯಾಗಿದ್ದರು.

ಆದರೆ ಈಗ ಸೆಪ್ಟೆಂಬರ್ ನಲ್ಲಿ ಹೋದ ಗ್ರಾಹಕರು ಅಕ್ಟೋಬರ್ ನಲ್ಲಿ ದೊಡ್ಡ ಮಟ್ಟದಲ್ಲಿ ಬಂದಿದ್ದಾರೆ ಎಂದು ಹೇಳಬಹುದಾಗಿದೆ. ಜಿಯೋ ಸಿಮ್ ಬಿಟ್ಟು ಏರ್ಟೆಲ್ ಗೆ ದೊಡ್ಡಮಟ್ಟದಲ್ಲಿ ಗ್ರಾಹಕರು ಬಂದಾಗ ಏರ್ಟೆಲ್ ಸಂಸ್ಥೆ ತನ್ನ ಸೇವೆಗಳನ್ನು ಹೆಚ್ಚು ಮಾಡಿತ್ತು. ಇದೇ ಕ್ರಮವನ್ನು ಐಡಿಯಾ ಸಂಸ್ಥೆ ಕೂಡ ಮಾಡಿಕೊಂಡಿತ್ತು. ಆದರೆ ಈಗ TRAI ಬಿಡುಗಡೆ ಮಾಡಿರುವ ಲಿಸ್ಟಿನಲ್ಲಿ ಜಿಯೋ ಲಾಟರಿ ಹೊಡೆದಿರುವುದು ಖಚಿತವಾಗಿದೆ. ಹಾಗಿದ್ದರೆ ಜಿಯೋ ಸಂಸ್ಥೆ ಅಕ್ಟೋಬರ್ ತಿಂಗಳಲ್ಲಿ ಪಡೆದುಕೊಂಡಿರುವ ಚಂದಾದಾರರ ಸಂಖ್ಯೆ ಎಷ್ಟು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಅಕ್ಟೋಬರ್ ತಿಂಗಳಲ್ಲಿ ಜಿಯೋ ಸಂಸ್ಥೆಯನ್ನು ಬರೋಬ್ಬರಿ 1.76 ಕೋಟಿ ಗ್ರಾಹಕರು ಸೇರಿಕೊಂಡಿದ್ದಾರೆ. ಇದು ದೊಡ್ಡ ಮಟ್ಟದ ಸಾಧನೆಯೇ ಸರಿ.

ಜಿಯೋ ಸಂಸ್ಥೆಯನ್ನು ಹೊಸ ಚಂದದಾರರು ಸೇರ್ಪಡೆಯಾಗಿರುವುದರಿಂದಾಗಿ ಭಾರತಿ ಏರ್ಟೆಲ್ ಸಂಸ್ಥೆ 48.9 ಲಕ್ಷ ಗ್ರಾಹಕರು ಹಾಗೂ ಐಡಿಯಾ ಸಂಸ್ಥೆ 96.4 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಈ ಹಿಂದೆ 27.4 ಲಕ್ಷ ಗ್ರಾಹಕರು ಏರ್ಟೆಲ್ಗೆ ಬಂದಿದ್ದರು. ಆದರೆ ಈಗ ಅಕ್ಟೋಬರ್ನಲ್ಲಿ ಅದರ ದುಪ್ಪಟ್ಟು ಪ್ರಮಾಣದಲ್ಲಿ ಚಂದಾದಾರರು ಏರ್ಟೆಲ್ ಸಂಸ್ಥೆಯನ್ನು ಬಿಟ್ಟು ಹೊರ ಹೋಗಿದ್ದಾರೆ. ಇನ್ನು ವೊಡಾಫೋನ್ ಸಂಸ್ಥೆ ಸೆಪ್ಟೆಂಬರ್ ನಲ್ಲಿ 10.77 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದರೆ ಅಕ್ಟೋಬರ್ನಲ್ಲಿ 9.64 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇನ್ನು ಅಕ್ಟೋಬರ್ 31ರ ವರೆಗಿನ ಸರ್ವೆಯ ಪ್ರಕಾರ ಜಿಯೋ ಬಳಿ 426 ಮಿಲಿಯನ್ ಚಂದದಾರರಿದ್ದಾರೆ. ಭಾರತಿ ಏರ್ಟೆಲ್ ಬಳಿ 204 ಮಿಲಿಯನ್ ಚಂದಾದಾರರು ಇದ್ದಾರೆ. ವೊಡಾಫೋನ್ ಐಡಿಯಾ ದ ಬಳಿ 122 ಮಿಲಿಯನ್ ಚಂದಾದಾರರು ಇದ್ದಾರೆ. ಸರಕಾರಿ ಹಿಡಿತದಲ್ಲಿರುವ ಬಿಎಸ್ಎನ್ಎಲ್ ಸಂಸ್ಥೆಯ ಬಳಿ 109 ಮಿಲಿಯನ್ ಚಂದದಾರರು ಇದ್ದಾರೆ.