ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವ ಕಿತ್ತುಕೊಂಡ ಕುರಿತು ಮೌನ ಮುರಿದ ದ್ರಾವಿಡ್, ಹೇಳಿದ್ದೇನು ಗೊತ್ತೇ??

ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವ ಕಿತ್ತುಕೊಂಡ ಕುರಿತು ಮೌನ ಮುರಿದ ದ್ರಾವಿಡ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡದಲ್ಲಿ ಕೋಚ್ ಬದಲಾವಣೆಯಾಗಿ ರಾಹುಲ್ ದ್ರಾವಿಡ್ ಬಂದ ನಂತರ ಸಾಕಷ್ಟು ಬದಲಾವಣೆಗಳು ಕಂಡು ಬಂದವು. ಮುಖ್ಯವಾಗಿ ಏಕಾಏಕಿ ಏಕದಿನ ಸ್ಥಾನದಿಂದ ವಿರಾಟ್ ಕೊಹ್ಲಿಯವರನ್ನ ಇಳಿಸಿ ರೋಹಿತ್ ಶರ್ಮಾರವರನ್ನ ನೇಮಕ ಮಾಡಿತ್ತು. ಇದು ವೈಟ್ ಬಾಲ್ ಕ್ರಿಕೇಟ್ ಗೊಂದು ನಾಯಕ ಹಾಗೂ ರೆಡ್ ಬಾಲ್ ಕ್ರಿಕೇಟ್ ಗೊಂದು ನಾಯಕ ಎಂಬ ತೀರ್ಮಾನ ಮಾಡಿತ್ತು.

ಆದರೇ ವಿರಾಟ್ ಕೊಹ್ಲಿಯವರನ್ನ ಏಕದಿನ ತಂಡದ ನಾಯಕತ್ವವನ್ನ ಇಳಿಸಿದ್ದರ ಹಿಂದೆ ರಾಹುಲ್ ದ್ರಾವಿಡ್ ಕೈವಾಡ ಇದೆ ಎಂದು ಹೇಳಲಾಗಿತ್ತು. ಆದರೇ ಈ ಬಗ್ಗೆ ಮೊದಲ ಭಾರಿ ಮೌನ ಮುರಿದಿರುವ ರಾಹುಲ್ ದ್ರಾವಿಡ್ , ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಹುಲ್ ದ್ರಾವಿಡ್, ನಾಯಕತ್ವ ಬದಲಾವಣೆ ಹಿಂದೆ ನನ್ನ ಪಾತ್ರವಿಲ್ಲ ಎಂದು ಸ್ಪಷ್ಠಪಡಿಸಿದ್ದಾರೆ. ಇದು ಸಂಪೂರ್ಣ ಆಯ್ಕೆಗಾರರ ತೀರ್ಮಾನವಾಗಿದ್ದು, ವೈಟ್ ಬಾಲ್ ಹಾಗೂ ರೆಡ್ ಬಾಲ್ ಕ್ರಿಕೇಟ್ ಗೆ ಬೇರೆ ಬೇರೆ ನಾಯಕರನ್ನ ನೇಮಿಸಲು ಯೋಚಿಸುತ್ತಿತ್ತು.

ಅದಲ್ಲದೇ ಟಿ 20 ತಂಡಕ್ಕೆ ರೋಹಿತ್ ಶರ್ಮಾ ಅದಾಗಲೇ ನಾಯಕನಾಗಿ ಘೋಷಿಸಲಾಗಿತ್ತು. ಒಂದೇ ಮಾದರಿಯ ಕ್ರಿಕೇಟ್ ಆದ ಕಾರಣ, ಏಕದಿನ ಕ್ರಿಕೇಟ್ ಗೂ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಿದ್ದಾರೆ. ಆದರೇ ಸರಿಯಾದ ಸಂವಹನ ಕೊರತೆಯಿಂದ ಕೆಲವೂ ಗೊಂದಲಗಳು ಉಂಟಾದವು. ಆದರೇ ಈಗ ಎಲ್ಲಾ ಗೊಂದಲಗಳು ಕೊನೆಯಾಗಿದ್ದು, ಸದ್ಯ ಭಾರತ, ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯನ್ನ ಗೆಲ್ಲುವತ್ತ ಮಾತ್ರ ತನ್ನ ಚಿತ್ತ ಹರಿಸಿದೆ ಎಂದು ಹೇಳಿದ್ದಾರೆ. ಅದಲ್ಲದೇ ವಿದೇಶಿ ನೆಲದಲ್ಲಿ ವಿರಾಟ್ ಕೊಹ್ಲಿಯವರ ಭರ್ಜರಿ ಯಶಸ್ಸಿನ ಕಾರಣವೇ, ಭಾರತ ಸರಣಿ ಜಯವನ್ನ ಸಾಧಿಸಿದೆ ಎಂದು ವಿರಾಟ್ ಕೊಹ್ಲಿಯನ್ನ ಹೊಗಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.