ನಿಜಕ್ಕೂ ಗೂಳಿ ತರ ಇರುವ ಹೊಸ ಟಿವಿಎಸ್ ಅಪಾಚೆಯ ವಿಶೇಷತೆಗಳು ಏನು ಗೊತ್ತಾ?? ಬೆಲೆ ಹಾಗೂ ಹೊಸ ಫೀಚರ್ಸ್ ಏನು ಗೊತ್ತೇ??

ನಿಜಕ್ಕೂ ಗೂಳಿ ತರ ಇರುವ ಹೊಸ ಟಿವಿಎಸ್ ಅಪಾಚೆಯ ವಿಶೇಷತೆಗಳು ಏನು ಗೊತ್ತಾ?? ಬೆಲೆ ಹಾಗೂ ಹೊಸ ಫೀಚರ್ಸ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬೈಕ್ ಪ್ರಿಯರಿಗೆ ಹೊಸ ಹೊಸ ಫೀಚರ್ಸ್ ಇರುವ ಬೈಕುಗಳು ಮಾರುಕಟ್ಟೆಯಲ್ಲಿ ಬರುತ್ತಿರುತ್ತವೆ. ಆದರೇ ಒಂದು ಕಾಲದ ಯುವಕರ ಹಾಟ್ ಫೇವರೇಟ್ ಬೈಕ್ ಟಿವಿಎಸ್ ಅಪಾಚೆ ಈಗ ಹೊಸ ಫೀಚರ್ಸ್ನೊಂದಿಗೆ ಮತ್ತೆ ಮಾರುಕಟ್ಟೆಗೆ ಬಂದಿದೆ. ಒಂದು ಕಾಲದ ಯುವಕರ ಡ್ರೀಮ್ ಬೈಕ್ ಈಗ ಮತ್ತೊಂದಿಷ್ಟು ಆಧುನಿಕ ಫೀಚರ್ಸ್ ಜೊತೆ ಬಂದಿದ್ದು, ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡುವುದಂತೂ ಪಕ್ಕಾ. ಬನ್ನಿ ಆ ವಿಶೇಷತೆಗಳನ್ನ ತಿಳಿಯೋಣ.

ಹೊಸ ಅಪಾಚೆ RTR 165 RP ಬೈಕು ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿರುವ ಬೈಕು ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ. ಇದರ ಎಕ್ಸ್ ಶೋರೂಂ ಬೆಲೆ ಕೊಂಚ ದುಬಾರಿ ಎನಿಸಿದರೂ, ಸದ್ಯ ಭಾರತದಲ್ಲಿ 1.45 ಲಕ್ಷ ರೂಪಾಯಿಗೆ ಈ ಬೈಕ್ ದೊರೆಯುತ್ತಿದೆ. ಈ ಬೈಕ್ ನ ವಿಶೇಷತೆ ಎಂದರೇ ಸಿಂಗಲ್-ಸಿಲಿಂಡರ್ ಹಾಗೂ ನಾಲ್ಕು-ವಾಲ್ವ್ ಎಂಜಿನ್‌ನಿಂದ ರೂಪಿತವಾಗಿದ್ದು 10,000 rpm ನಲ್ಲಿ 19 bhp ಮತ್ತು 8,750 rpm ನಲ್ಲಿ 14 Nm ಅನ್ನು ಹೊರಹಾಕಲಿದೆ. ಇಂಜಿನ್ ಗೆ ಹೊಸ ಸಿಲಿಂಡರ್ ಹೆಡ್ ಅಳವಡಿಸಿರುವ ಕಾರಣ ಶೇಕಡಾ 35 ರಷ್ಟು ಉತ್ತಮ ಪರ್ಫಾಮೆನ್ಸ್ ಕಂಡುಬರಲಿದೆ ಎಂದು ಟಿವಿಎಸ್ ಕಂಪನಿ ತಿಳಿಸಿದೆ.

ಇನ್ನು ಈ ಬೈಕ್ ನಲ್ಲಿ ಐದು ವೇಗದ ಗೇರ್ ಬಾಕ್ಸ್ ಇರಲಿದ್ದು, ಇದರ ಜೊತೆ 240 mm ಗಾತ್ರದ ಡಿಸ್ಕ್ ಬ್ರೇಕ್ ಹಿಂದಿನ ಚಕ್ರಕ್ಕಿದ್ದರೇ, 270mm ಗಾತ್ರದ ಡಿಸ್ಕ್ ಬ್ರೇಕ್ ಮುಂದಿನ ಚಕ್ರಕ್ಕಿದೆ. ಇದು ರೇಸ್ ಪ್ರಿಯರಿಗೆ ಬಹು ಇಷ್ಟವಾಗಲಿದೆ ಎಂದು ಟಿವಿಎಸ್ ಕಂಪನಿಯ ಬ್ಯುಸಿನೆಸ್ ಹೆಡ್ ಮೇಘಶ್ಯಾಮ್ ತಿಳಿಸಿದ್ದಾರೆ. ಇನ್ನು ಈ ಬೈಕ್ ನಲ್ಲಿ ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಬ್ರೇಕ್ ಲಿವರ್‌ ಗಳು ಇವೆ.ಕೆಂಪು ಬಣ್ಣದ ಲೋಹ ಮಿಶ್ರಿತ ಚಕ್ರಗಳು ಇವೆ. ಹೀಗಾಗಿ ಹೊಸ ಟಿವಿಎಸ್ ಅಪಾಚೆ RTR 165 ಮತ್ತಷ್ಟು ಆಕರ್ಷಕವಾಗಿ ಕಾಣಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.