ಇಯಾನ್ ಮಾರ್ಗನ್ ಅಲ್ಲ, ಡೇವಿಡ್ ವಾರ್ನರ್, ರಾಹುಲ್ ಅಲ್ಲ, ಆರ್ಸಿಬಿಯ ನಾಯಕನ ಸ್ಥಾನಕ್ಕೆ ಹೊಸ ಹೆಸರು, ಯಾರಂತೆ ಗೊತ್ತೇ??

ಇಯಾನ್ ಮಾರ್ಗನ್ ಅಲ್ಲ, ಡೇವಿಡ್ ವಾರ್ನರ್, ರಾಹುಲ್ ಅಲ್ಲ, ಆರ್ಸಿಬಿಯ ನಾಯಕನ ಸ್ಥಾನಕ್ಕೆ ಹೊಸ ಹೆಸರು, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ – 2022 ಅತ್ಯಂತ ರೋಚಕವಾಗಿರುವುದು ಈ ಭಾರಿ ಹೊಸ ಎರಡು ತಂಡ ಸೇರಿರುವದಕ್ಕೆ ಮಾತ್ರವಲ್ಲ. ಜೊತೆಗೆ ಆಟಗಾರರ ಸಾರ್ವತ್ರಿಕ ಹರಾಜು ಹಾಗೂ ಕೆಲವು ತಂಡಗಳು ಹೊಸ ನಾಯಕನನ್ನು ಘೋಷಣೆ ಮಾಡುತ್ತಿವೆ. ಅತ್ಯಂತ ಕುತೂಹಲವೆಂದರೇ ಆರ್ಸಿಬಿ ತಂಡದ ನಾಯಕರು ಯಾರು ಎಂದು. ವಿರಾಟ್ ಕೊಹ್ಲಿ ಈ ಭಾರಿ ನಾಯಕನಾಗುವುದಿಲ್ಲ ಎಂದು ಮೊದಲೇ ಘೋಷಿಸಿದ್ದರು. ಅವರ ಸ್ಥಾನ ತುಂಬಲೆಂದೇ, ಗ್ಲೆನ್ ಮ್ಯಾಕ್ಸವೆಲ್ ರನ್ನು ರಿಟೇನ್ ಮಾಡಲಾಗಿತ್ತು ಎಂದು ಹೇಳಲಾಗಿತ್ತು.

ನಂತರ ಡೇವಿಡ್ ವಾರ್ನರ್ ಅಥವಾ ಇಂಗ್ಲೆಂಡ್ ನ ಇಯಾನ್ ಮಾರ್ಗನ್ ಆಗಬಹುದು ಎಂದು ಹೇಳಲಾಗಿತ್ತು. ಆದರೇ ಈಗ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗು ಮಾಡುವಂತೆ, ಹೊಸ ನಾಯಕನೊಬ್ಬ ಆರ್ಸಿಬಿಗೆ ಬರಲಿದ್ದಾರೆ ಎಂಬ ಸುದ್ದಿ ಬಂದಿದೆ. ಅವರು ಯಾರು ಎಂಬುದನ್ನ ತಿಳಿಯೋಣ ಬನ್ನಿ. ಹೌದು ಆರ್ಸಿಬಿಯ ಮಾಜಿ ಆಟಗಾರನೇ ಈ ಭಾರಿಯ ನಾಯಕನಾಗುತ್ತಿದ್ದಾನೆ ಎಂದು ಹೇಳಲಾಗಿದೆ. ಆತ ಬೇರೆ ಯಾರೂ ಅಲ್ಲ, ಹೆಮ್ಮೆಯ ಕನ್ನಡಿಗ ಮನೀಶ್ ಪಾಂಡೆ.

ಮನೀಶ್ ಪಾಂಡೆ 2009ರಲ್ಲಿ ಆರ್ಸಿಬಿ ಪರ ಆಡಿ, ಶತಕ ಭಾರಿಸಿದ ಮೊದಲ ಅನ್ ಕ್ಯಾಪ್ಡ್ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರದ ದಿನಗಳಲ್ಲಿ ಕೆಕೆಆರ್ ಹಾಗೂ ಎಸ್.ಆರ್.ಹೆಚ್ ತಂಡ ಸೇರಿಕೊಂಡಿದ್ದರು. ಕರ್ನಾಟಕ ರಣಜಿ ತಂಡದ ನಾಯಕರಾಗಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಲೋಕಲ್ ಹುಡುಗ ಮನೀಶ್ ಪಾಂಡೆಯೇ ನಾಯಕನಾಗಿ ಆಯ್ಕೆಯಾಗುವುದು ಸೂಕ್ತ ಎಂದು ಹೇಳಲಾಗುತ್ತಿದೆ. ಇದಲ್ಲದೇ ಅಂಡರ್ 19 ತಂಡದಿಂದಲೂ ವಿರಾಟ್ ಹಾಗೂ ಮನೀಶ್ ಜೊತೆಗಿದ್ದವರು. ಹಾಗಾಗಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಆದ ಕಾರಣ ಆರ್ಸಿಬಿ ತಂಡಕ್ಕೆ ಮನೀಶ್ ಪಾಂಡೆಯೇ ಉತ್ತಮ ನಾಯಕನಾಗಬಲ್ಲರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.