ಇಡ್ಲಿ ಮಾಡಿದ್ದು ಉಳಿದು ಬಿಟ್ಟಿದೆಯೇ? ಇಡ್ಲಿಯಿಂದ ಮಂಚೂರಿಯನ್ ಮಾಡುವುದು ಹೇಗೆ ಗೊತ್ತೇ??

ಇಡ್ಲಿ ಮಾಡಿದ್ದು ಉಳಿದು ಬಿಟ್ಟಿದೆಯೇ? ಇಡ್ಲಿಯಿಂದ ಮಂಚೂರಿಯನ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಂತೂ ಚಳಿಗಾಲ, ಸಂಜೆ ಟೈಮ್ ನಲ್ಲಿ ಏನಾದ್ರೂ ಬಿಸಿ ಬಿಸಿ ತಿನ್ನೋದಕ್ಕೆ ಇದ್ರೆ ಎಷ್ಟು ಚಂದ ಅಲ್ವಾ? ಅಂದಹಾಗೆ ಬೆಳಗ್ಗಿನ ಇಡ್ಲಿ ಮಿಕ್ಕಿದೆಯಾ? ನಾಳೆ ಇಟ್ರೆ ಹುಳಿ ಆಗಿ ಹೋಗತ್ತೆ. ಅದರ ಬದಲು ಹೀಗೆ ಒಂದು ತಿನಿಸನ್ನು ಮಾಡಿ ನೋಡಿ, ಮತ್ತೆ ಇದನ್ನು ಮಾಡಲಿಕ್ಕಾಗಿಯೇ ಇಡ್ಲಿ ಮಾಡ್ತಿರಾ!

ಇಡ್ಲಿ ಮಂಚೂರಿ ಮಾಡಲು ಬೇಕಾಗುವ ಸಾಮಗ್ರಿಗಳು: ಬೇಕಾಗುವ ಸಾಮಾಗ್ರಿಗಳು: 5 ಇಡ್ಲಿ. ಅಥವಾ ನಿಮಗೆ ಬೇಕಾಗುವಷ್ಟನ್ನು ತೆಗೆದುಕೊಳ್ಳಿ. ಅರ್ಧ ಕಪ್ ಮೈದಾ ಹಿಟ್ಟು, ಕಾಲು ಕಪ್ ಕಾರ್ನ್ ಫ್ಲೋರ್ ರುಚಿಗೆ ತಕ್ಕಷ್ಟು ಉಪ್ಪು ಒಂದು ಚಮಚ ಕೆಂಪು ಮೆಣಸಿನ ಪುಡಿ, ಕಾಲು ಚಮಚ ಕರಿಮೆಣಸಿನ ಹುಡಿ, ಸೋಯಾ ಸಾಸ್ ಸ್ವಲ್ಪ, ಹುರಿಯಲು ಎಣ್ಣೆ. ಅರ್ಧ ಈರುಳ್ಳಿ, ಶುಂಠಿ ಸ್ಪಲ್ವ, ಬೆಳ್ಳುಳ್ಳಿ ೩-೪ ಎಸಳುಗಳು. ಲವಂಗ ೨, ಕ್ಯಾಪ್ಸಿಕಂ ಅರ್ಧ, ಸ್ಪ್ರಿಂಗ್ ಆನಿಯನ್ ಕಾಲು ಕಪ್, ಟೊಮೆಟೊ ಸಾಸ್ ಒಂದು ಚಮಚ, ಚಿಲ್ಲಿ ಸಾಸ್ 2 ಚಮಚ, ವಿನೆಗರ್ 2 ಚಮಚ,

ಮಾಡುವ ವಿಧಾನ: ಮೊದಲಿಗೆ ಇಡ್ಲಿಗಳನ್ನು 4 ತುಂಡುಗಳನ್ನಾಗಿ ಮಾಡಿಕೊಳ್ಳಿ. ಈಗ ಒಂದು ದೊಡ್ಡ ಪಾತ್ರಕ್ಕೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಉಪ್ಪು, ಮೆಣಸಿನ ಪುಡಿ, ಕರಿಮೆಣಸಿನ ಹುಡಿ ಮತ್ತು ಸೋಯಾ ಸಾಸ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ನಯವಾಗಿರಲಿ. ಕೈಯಿಂದ ಹಿಟ್ಟು ಬೀಳುವಷ್ಟು ತೆಳ್ಳಗಿರಬೇಕು. ಇಡ್ಲಿ ತುಂಡುಗಳನ್ನು ಈ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಕೊಳ್ಳಿ.

ಗೋಬಿ ಮಂಚೂರಿಯ ಹಾಗೆ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ, ತೆಗೆದಿಡಿ. ಈಗ ಒಂದು ದೊಡ್ಡ ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ಹೆಚ್ಚಿಟ್ಟ ಈರುಳ್ಳಿಯನ್ನು ಸೇರಿಸಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ, ಹುರಿಯಿರಿ. ನಂತರ, ಕ್ಯಾಪ್ಸಿಕಂ ಹಾಕಿ ಹುರಿಯಿರಿ. ಇದಕ್ಕೆ ಟೊಮೆಟೊ ಸಾಸ್, ಚಿಲ್ಲಿ ಸಾಸ್, ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ. ನಂತರ ಸ್ವಲ್ಪ ಹುರಿದು ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ, ಮತ್ತೆ ಒಂದು ನಿಮಿಷ ಬೇಯಿಸಿ. ಈಗ ಹುರಿದ ತೆಗೆದಿಟ್ಟುಕೊಂಡ ಇಡ್ಲಿಗಳನ್ನು ಈ ಮಸಾಲೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಸ್ವಲ್ಪ ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಉದುರಿಸಿದರೆ ಇಡ್ಲಿ ಮಂಚೂರಿ ಸವಿಯಲು ಸಿದ್ದ. ಮಕ್ಕಳಿಗೂ ಕೂಡ ಇಷ್ಟವಾಗುವ ಈ ಸ್ನಾಕ್ಸ್ ನ್ನು ಒಮ್ಮೆ ಮಾಡಿ ನೋಡಿ.