ಕನ್ನಡದಲ್ಲಿ ಒಂದು ಕಾಲದಲಿ ಮಿಂಚಿದ್ದ ನಟಿ ಈಗ ಕನ್ನಡದಲ್ಲಿ ನಟಿಸುತ್ತಿಲ್ಲ ಯಾಕೆ ಗೊತ್ತಾ?? ಅಸಲಿ ಕಾರಣ ಅವರೇ ತಿಳಿಸಿದ್ದಾರೆ.

ಕನ್ನಡದಲ್ಲಿ ಒಂದು ಕಾಲದಲಿ ಮಿಂಚಿದ್ದ ನಟಿ ಈಗ ಕನ್ನಡದಲ್ಲಿ ನಟಿಸುತ್ತಿಲ್ಲ ಯಾಕೆ ಗೊತ್ತಾ?? ಅಸಲಿ ಕಾರಣ ಅವರೇ ತಿಳಿಸಿದ್ದಾರೆ.

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ೨-೩ ದಶಕಗಳ ಹಿಂದೆ ಮಿಂಚುತ್ತಿದ್ದ ನಟಿಯರನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ, ಇಂದು ಪೋಷಕ ಪಾತ್ರದಲ್ಲಿ ನಟಿಸುತ್ತಿರುವ ಕೆಲವು ನಟಿಯರು ಒಂದು ಕಾಲದ ಅದ್ಭುತ ನಾಯಕಿಯರೂ ಹೌದು. ಅಂಥ ಒಬ್ಬ ಅದ್ಭುತ ಕಲಾವಿದೆಯ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ಅವರೇ ನಟಿ ಗೀತಾ.

ನಟಿ ಗೀತಾ, ಅವರ ಅದ್ಭುತ ರೂಪ, ಮಾತು, ಆ ಭಾವನಾತ್ಮಕ ನಟನೆ ಯಾರಿಗೆ ತಾನೇ ಮರೆಯಲು ಸಾಧ್ಯ ಹೇಳಿ? ಅಂದು ನಾಯಕಿಯಾಗಿ ಶಂಕರ್ ನಾಗ್, ಅನಂತ ನಾಗ್, ಡಾ, ರಾಜ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮುಂತಾದ ಮಹಾನ್ ಕಲಾವಿದರಿಗೆ ಸಾಥ್ ಕೊಟ್ಟಿದ್ದ ನಟಿ ಗೀತಾ ಈಗಲೂ ಕನ್ನಡದಲ್ಲಿ ತಮ್ಮದೇ ಆದ ಛಾಪನ್ನು ಉಳಿಸಿದ್ದಾರೆ.

ಒಂದು ಕಾಲದಲ್ಲಿ ನಟಿ ಗೀತಾ ಕನ್ನಡದಲ್ಲಿ ಬಹು ಬೇಡಿಕೆಯ ನಟಿ. ಅಷ್ಟೇ ಅಲ್ಲ, ಕನ್ನಡದ ಜೊತೆಗೆ ಇತರ ಭಾಷೆಗಳಲ್ಲಿಯೂ ಮುಂಚಿದವರು ಈ ಅಭಿನೇತ್ರಿ. ಕನ್ನಡದಲ್ಲಿ ದಿಗ್ಗಜರ ಜೊತೆ ನಟಿಸಿರುವ ಗೀತಾ, ಕ್ರಮೇಣ ಚಿತ್ರರಂಗದಿಂದ ಕಣ್ಮರೆಯಾದರು. ಆಗೊಂದು ಈಗೊಂದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಹೆಚ್ಚಾಗಿ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಎಷ್ಟೋ ಜನರಿಗೆ ಮದುವೆಯಾಗಿ ಅಮೇರಿಕಾದಲ್ಲಿ ಸೆಟಲ್ ಆಗಿದ್ಡಾರೆ. ಹಾಗಾಗಿ ನಟನೆಯ ಬಗ್ಗೆಆಸಕ್ತಿ ಇಲ್ಲದಿರಬಹುದು ಎಂದುಕೊಂಡಿದ್ದಾರೆ. ಆದರೆ ಇದು ಖಂಡಿತವಾಗಿಯೂ ತಪ್ಪು, ಸಂದರ್ಶನವೊಂದರಲ್ಲಿ, ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಏಕೆ ಎನ್ನುವ ಪ್ರಶ್ನೆಗೆ ಗೀತಾ ಉತ್ತರ ನೀಡಿದ್ದು ಹೀಗೆ.

ಹೌದು, ನಟಿ ಗೀತಾ ಈಗಲೂ ನಟನೆಯ ಬಗ್ಗೆ ಒಲವನ್ನು ಹೊಂದಿದ್ದಾರೆ ಕನ್ನಡ ನಿರ್ದೇಶಕರು ಉತ್ತಮ ಕಥೆಯನ್ನು ಹೇಳಿದರೆ, ನಿರ್ಮಾಪಕರು ನನ್ನನ್ನು ಕರೆಸಿಕೊಂಡರೆ, ನಾನೇ ಫ್ಲೈಟ್ ಟಿಕೇಟ್ ವೆಚ್ಚ ಭರಿಸಿಕೊಂಡು ಭಾರತಕ್ಕೆ ಬರುತ್ತೇನೆ, ಅಂದಿದ್ದಾರೆ. ಇಂಥ ಮಹಾನ್ ನಟಿಯನ್ನು ಪೋಷಕ ಪಾತ್ರಕ್ಕೂ ಸೈ ಎನಿಸುವ ನಟನೆ ಮಾಡಬಲ್ಲ ನಟಿಯನ್ನು ಇದುವರೆಗೂ ಕನ್ನಡ ಚಿತ್ರರಂಗ ಮತ್ತೆ ಕರೆಸಿಕೊಳ್ಳುವ ಬಗ್ಗೆ ಯಾಕೆ ಯೋಚಿಸುತ್ತಿಲ್ಲ ಎನ್ನುವುದೇ ಕೌತುಕದ ಸಂಗತಿ.