ಬಿಗ್ ನ್ಯೂಸ್: ಟೆಸ್ಟ್ ತಂಡದಿಂದ ಕೊಹ್ಲಿ ಯನ್ನು ಹೊರಹಾಕಲು ನಡೆದಿತ್ತು ಮಹಾ ಪ್ಲಾನ್, ಆದರೆ ಆಮೇಲೆ ಏನಾಯ್ತು ಗೊತ್ತೇ??

ಬಿಗ್ ನ್ಯೂಸ್: ಟೆಸ್ಟ್ ತಂಡದಿಂದ ಕೊಹ್ಲಿ ಯನ್ನು ಹೊರಹಾಕಲು ನಡೆದಿತ್ತು ಮಹಾ ಪ್ಲಾನ್, ಆದರೆ ಆಮೇಲೆ ಏನಾಯ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಯಕತ್ವ ವಿಚಾರದಲ್ಲಿ ಟೀಮ್ ಇಂಡಿಯಾದಲ್ಲಿ ನಡೆದಿದ್ದ ಬೆಳವಣಿಗೆಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಏಕದಿನ ಕ್ರಿಕೇಟ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ವಹಿಸಿದ ಕಾರಣ, ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ದ ಮುನಿಸಿಕೊಂಡಿದ್ದರು. ಆಟಗಾರರ ಅಭ್ಯಾಸ ಶಿಬಿರಕ್ಕೂ ಸಹ ಗೈರಾಗಿದ್ದರು. ಈ ನಡುವೆ ಟೆಸ್ಟ್ ಕ್ರಿಕೇಟ್ ತಂಡದಿಃದಲೂ ವಿರಾಟ್ ಕೊಹ್ಲಿಯವರಿಗೆ ಕೋಕ್ ನೀಡಲು ಆಯ್ಕೆದಾರರು ಪ್ಲಾನ್ ಮಾಡಿದ್ದರಂತೆ.

ಆದರೇ ಏಕಾಏಕಿ ಹೀಗೆ ಮಾಡಿದರೇ, ಅದು ದಕ್ಷಿಣ ಆಫ್ರಿಕಾದಂತಹ ಮಹತ್ವದ ಪ್ರವಾಸದ ವೇಳೆ ಬೇಡ ಎಂದು ತೀರ್ಮಾನಿಸಿ ಸುಮ್ಮನಾದರಂತೆ. ಅಷ್ಟಕ್ಕೂ ನಡೆದದ್ದೇನು ಎಂಬುದನ್ನ ತಿಳಿಯೋಣ ಬನ್ನಿ. ಟೆಸ್ಟ್ ಕ್ರಿಕೇಟ್ ತಂಡದಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುವ ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ ಸದ್ಯ ಕಳಪೆ ಫಾರ್ಮ್ ನಲ್ಲಿದ್ದಾರೆ. ಇವರ ಜೊತೆ ನಾಯಕ ವಿರಾಟ್ ಕೊಹ್ಲಿ ಸಹ ಅದೇ ಫಾರ್ಮ್ ನಲ್ಲಿದ್ದಾರೆ. ವಿರಾಟ್ 2020 ರಿಂದ ಈಚೆಗೆ ಟೆಸ್ಟ್ ಕ್ರಿಕೇಟ್ ನಲ್ಲಿ ಒಂದೇ ಒಂದು ಶತಕವನ್ನು ಭಾರಿಸಿಲ್ಲ. ಈ ಜೊತೆಗೆ ಅಜಿಂಕ್ಯಾ 29 ಇನ್ನಿಂಗ್ಸ್ ನಿಂದ 24 ರ ಸರಾಸರಿಯಲ್ಲಿ 693 ರನ್ ಗಳಿಸಿದ್ದರೇ, ಇನ್ನು ಟೆಸ್ಟ್ ಪರಿಣಿತ ಪೂಜಾರ ಸಹ 32 ಇನ್ನಿಂಗ್ಸ್ ಗಳಲ್ಲಿ 27 ರ ಸರಾಸರಿಯಲ್ಲಿ 849 ರನ್ ಭಾರಿಸಿದ್ದಾರೆ.

ಇದರ ಜೊತೆ ವಿರಾಟ್ ಸಹ ಕಡಿಮೆ ಟೆಸ್ಟ್ ಆಡಿ 30 ಕ್ಕಿಂತ ಕಡಿಮೆ ಸರಾಸರಿ ಹೊಂದಿದ್ದಾರೆ. ಹಾಗಾಗಿ ಈ ಮೂವರು ತ್ರಿಮೂರ್ತಿಗಳಿಗೆ ಟೆಸ್ಟ್ ತಂಡದಿಂದ ಕೋಕ್ ನೀಡಲು ಆಯ್ಕೆ ಮಂಡಳಿ ತೀರ್ಮಾನಿಸಿತ್ತು. ಆದರೇ ದಕ್ಷಿಣ ಆಫ್ರಿಕಾದಂತಹ ವೇಗಿಗಳಿಗೆ ನೆರವಾಗುವ ಪಿಚ್ ನಲ್ಲಿ ಇಂತಹ ಪ್ರಯೋಗ ಬೇಡ ಎಂದು ನಿರ್ಧರಿಸಿದರಂತೆ. ನಾಯಕನಾಗಿ ವಿರಾಟ್ ಯಶಸ್ವಿಯಾಗುತ್ತಿದ್ದರೂ, ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಿಂದ ಹೆಚ್ಚು ರನ್ ಬರದಿರುವುದು ಮ್ಯಾನೇಜ್ ಮೆಂಟ್ ಗೆ ಚಿಂತೆಯಾಗಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸ, ಈ ಮೂವರು ತ್ರಿಮೂರ್ತಿಗಳಿಗೆ ಫಾರ್ಮ್ ಕಂಡುಕೊಳ್ಳಲು ನೆರವಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.