ಬಿಗ್ ನ್ಯೂಸ್: ಏರ್ಟೇಲ್, ವೋಡಾಫೋನ್, ಜಿಯೋಗೆ ಶಾಕ್ ನೀಡಿದ ಬಿ.ಎಸ್.ಎನ್.ಎಲ್ ಹೊಸ ಪ್ಯಾಕ್, ಎಲ್ಲರೂ ಬಿ.ಎಸ್.ಎನ್.ಎಲ್ ಗೆ ಹೋಗುವುದು ಖಚಿತವೇ??

ಬಿಗ್ ನ್ಯೂಸ್: ಏರ್ಟೇಲ್, ವೋಡಾಫೋನ್, ಜಿಯೋಗೆ ಶಾಕ್ ನೀಡಿದ ಬಿ.ಎಸ್.ಎನ್.ಎಲ್ ಹೊಸ ಪ್ಯಾಕ್, ಎಲ್ಲರೂ ಬಿ.ಎಸ್.ಎನ್.ಎಲ್ ಗೆ ಹೋಗುವುದು ಖಚಿತವೇ??

ನಮಸ್ಕಾರ ಸ್ನೇಹಿತರೇ ಬಿ.ಎಸ್.ಎನ್.ಎಲ್ ಕನೆಕ್ಟಿಂಗ್ ಇಂಡಿಯಾ ಎಂಬ ಜಾಹೀರಾತಿನೊಂದಿಗೆ ಭಾರತೀಯರದ್ದು ಅವಿನಾಭಾವ ಸಂಭಂಧ. ಭಾರತದ ಹಲವಾರು ಗ್ರಾಮೀಣ ಪ್ರದೇಶಗಳಿಗೆ ಇಂದಿಗೂ ಬಿ.ಎಸ್.ಎನ್.ಎಲ್ ನೆಟವರ್ಕ್ ಬಹಳ ಬಳಸುತ್ತಿದ್ದಾರೆ. ಎರ್ಟೇಲ್ ಹಾಗೂ ಜಿಯೋ ಬಂದ ಮೇಲೆ ಬಿ.ಎಸ್.ಎನ್.ಎಲ್ ಬಳಕೆದಾರರು ಕಡಿಮೆಯಾದರು. ನಷ್ಟದ ಸುಳಿಯಲ್ಲಿದ್ದ ಬಿ.ಎಸ್.ಎನ್.ಎಲ್ ಮುಚ್ಚಿಬಿಡುತ್ತದೆ ಎಂಬ ಮಾತುಗಳ ನಡುವೆಯೂ ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಅತ್ಯುತ್ತಮ ಆಫರ್ ಗಳನ್ನ ನೀಡುತ್ತಾ ದಿಗ್ಗಜ ಕಂಪನಿಗಳಾದ ಎರ್ಟೇಲ್ ಹಾಗೂ ಜಿಯೋಗೆ ಶಾಕ್ ನೀಡಿದೆ.

ಹೌದು ಪ್ಲಾನ್ ಗಳಲ್ಲಿ ಧೀಡಿರ್ ಅಂತ ಬೆಲೆ ಏರಿಕೆ ಮಾಡಿದ್ದ ಟೆಲಿಕಾಂ ಕಂಪನಿಗಳಾದ ಎರ್ಟೇಲ್ ಹಾಗೂ ಜಿಯೋ ಕಂಪನಿಗಳ ವಿರುದ್ದ ಅವರ ಗ್ರಾಹಕರೇ ತಿರುಗಿ ಬಿದ್ದಿದ್ದರು. ಇದನ್ನ ಗಮನಿಸಿದ ಬಿ.ಎಸ್.ಎನ್.ಎಲ್ ಹೊಸ ಪ್ಲಾನ್ ಒಂದನ್ನು ಬಿಡುಗಡೆಗೊಳಿಸಿದ್ದು, ಬೇರೆ ಯಾವ ಟೆಲಿಕಾಂ ಕಂಪನಿಗಳು ಸಹ ಆ ರೀತಿಯ ಆಫರ್ ಬಿಟ್ಟಿಲ್ಲ. ಇದು ಉಳಿದೆಲ್ಲಾ ಟೆಲಿಕಾಂ ಕಂಪನಿಗಳಿಗೆ ನಿದ್ದೆಗೆಡಿಸಿದೆ.

ಅಷ್ಟಕ್ಕೂ ಬಿ.ಎಸ್.ಎನ್.ಎಲ್ ಬಿಡುಗಡೆಗೊಳಿಸಿರುವ ಹೊಸ ಪ್ಲಾನ್ ದೀರ್ಘಾವಧಿಯಾಗಿದ್ದು ಒಟ್ಟು 425 ದಿನಗಳ ವ್ಯಾಲಿಡಿಟಿ ಹೊಂದಿದೆ. ಬೇರೆ ಕಂಪನಿಗಳು ಗರಿಷ್ಠ ಅಂದರೇ 365 ದಿನಗಳ ವ್ಯಾಲಿಡಿಟಿ ಹೊಂದಿರುತ್ತವೆ. ವಾರ್ಷಿಕ 2399 ರೂಪಾಯಿಗಳ ರೀಚಾರ್ಜ್ ನ್ನು ಈ ಡಿಸೆಂಬರ್ 31ರ ಒಳಗೆ ಮಾಡಿಸಿದರೇ, 60 ದಿನಗಳ ಉಚಿತ ವ್ಯಾಲಿಡಿಟಿಯನ್ನ ಪಡೆಯಬಹುದು ಎಂದು ತಿಳಿಸಿದೆ. ಇದರ ಜೊತೆ ಬಿ.ಎಸ್.ಎನ್.ಎಲ್ ಗೆ ಹೋಲಿಸಿದರೇ, ಬೇರೆ ಟೆಲಿಕಾಂ ಕಂಪನಿಗಳ ವಾರ್ಷಿಕ ರೀಚಾರ್ಜ್ ದರ ಜಾಸ್ತಿ ಇದೆ. ಹಾಗಾಗಿ ಗ್ರಾಹಕರು ಬಿ.ಎಸ್.ಎನ್.ಎಲ್ ಕಡೆ ಆಕರ್ಷಿತರಾಗುವ ಸಾಧ್ಯತೆ ಜಾಸ್ತಿ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.