ನೂರು ಕೋಟಿ ಬಾಚಿದರೂ ಕೂಡ ಪುಷ್ಪಾ ಗೆದ್ದಿಲ್ಲ, ಪುಷ್ಪ ನಿಜಕ್ಕೂ ಸೋತಿದೆ. ಅದಕ್ಕೆ ಬಹುಮುಖ್ಯ ಕಾರಣವೇನು ಗೊತ್ತೇ??

ನೂರು ಕೋಟಿ ಬಾಚಿದರೂ ಕೂಡ ಪುಷ್ಪಾ ಗೆದ್ದಿಲ್ಲ, ಪುಷ್ಪ ನಿಜಕ್ಕೂ ಸೋತಿದೆ. ಅದಕ್ಕೆ ಬಹುಮುಖ್ಯ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಹಲವಾರು ತಿಂಗಳುಗಳಿಂದ ಸದಾ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡಿ ಬಹುನಿರೀಕ್ಷಿತ ಚಿತ್ರಗಳ ಸಾಲಿಗೆ ಸೇರಿ ಕೊಂಡಿದ್ದ ಪುಷ್ಪ ಸಿನಿಮಾ ಅದ್ದೂರಿಯಾಗಿ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾಗುವವರೆಗೂ ಹಲವಾರು ರೀತಿಯಲ್ಲಿ ಸದ್ದು ಮಾಡಿದ್ದ ಪುಷ್ಪ ಸಿನಿಮಾ ಟ್ರೈಲರ್ ಹಾಗೂ ಹಾಡುಗಳನ್ನು ನೋಡಿದರೆ ಖಂಡಿತ ಇದು ಒಂದು ದಾಖಲೆ ಸೃಷ್ಟಿಸುವಂತಹ ಸಿನಿಮಾ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕೇಳಿಬಂದಿದ್ದ ಎಲ್ಲ ಮಾತುಗಳು ಕೇವಲ ಹುಸಿಯಾಗಿದ್ದು ಎಷ್ಟೆಲ್ಲ ನಿರೀಕ್ಷೆಗೆ ಇಟ್ಟರೂ ಕೂಡ ಪ್ರೇಕ್ಷಕ ಮಹಾಪ್ರಭುಗಳು ಪುಷ್ಪ ಸಿನಿಮಾಗೆ ಮಾರ್ಕ್ಸ್ ನೀಡಿಲ್ಲ.

ಪುಷ್ಪ ಆರಂಭದ ದಿನಗಳಿಂದಲೂ ಕೂಡ ಅದ್ಭುತ ಟ್ರೈಲರ್ ಗಳಿಂದ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿದ್ದದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಕಳೆದ ಎರಡು ವಾರಗಳಿಂದ ಪುಷ್ಪ ಚಿತ್ರತಂಡ ಮಾಡಿಕೊಂಡ ಯಡವಟ್ಟುಗಳು ಅಷ್ಟಿಷ್ಟಲ್ಲ. ಒಂದು ಕಡೆ ಚಿತ್ರದಲ್ಲಿ ಕಥೆಯ ಮೇಲೆ ಹೆಚ್ಚಿನ ಹಿಡಿತ ಇಲ್ಲದೆ ಇರುವುದು ಸೋಲಿಗೆ ಕಾರಣವಾದರೇ ಅದಕ್ಕಿಂತ ಪ್ರಮುಖವಾಗಿ ಹಲವಾರು ಕಾರಣಗಳು ಪುಷ್ಪ ಚಿತ್ರದ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಬಹುತೇಕರ ಬಾಯಲ್ಲಿ ಕೇವಲ ಒಂದು ಕಾರಣ ಕೇಳಿ ಬರುತ್ತಿದ್ದು ಆ ಕಾರಣ ಏನು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಕೇಳಿ

ಸ್ನೇಹಿತರೆ ಕಥೆಯ ಮೇಲೆ ಹಿಡಿತ ಇಲ್ಲದೆ ಚಿತ್ರ ಸೋಲುತ್ತಿದೆ ಎನ್ನುವವರ ನಡುವೆ ಹಲವಾರು ಜನ ಅದರಲ್ಲಿ ಪ್ರಮುಖವಾಗಿ ಕರ್ನಾಟಕದಲ್ಲಿ ಪುಷ್ಪ ಸಿನಿಮಾ ಸೋಲನ್ನು ಕಾಣಲು ಚಿತ್ರದ ನಟಿ ರಶ್ಮಿಕಾ ರವರೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಯಾಕಪ್ಪಾ ಹೀಗೆ ಪುಷ್ಪ ಸಿನಿಮಾದ ಸೋಲಿಗೆ ರಶ್ಮಿಕಾ ಹೇಗೆ ಕಾರಣವಾಗುತ್ತಾರೇ ಎಂದುಕೊಂಡರೆ ಬನ್ನಿ ನಾವು ಇಲ್ಲಿ ಉತ್ತರ ನೀಡುತ್ತೇವೆ

ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಸದಾ ವಿವಾದಗಳ ಗೂಡಾಗಿರುವ ರಶ್ಮಿಕಾ ರವರು ಹಲವಾರು ಬಾರಿ ಕನ್ನಡವನ್ನು ತಿರಸ್ಕಾರ ಮಾಡುವಂತೆ ನೋಡಿದ್ದಾರೆ. ಇನ್ನು ಪುಷ್ಪ ಸಿನಿಮಾದಲ್ಲಿ ಕೂಡ ತಮಗೆ ತಿಳಿಯದ ತೆಲುಗು ಭಾಷೆಯಲ್ಲಿ ವಾಯ್ಸ್ ನೀಡಿ ಕನ್ನಡ ಭಾಷೆಯಲ್ಲಿ ವಾಯ್ಸ್ ನೀಡಲು ಸಮಯವಿಲ್ಲ ಎಂದು ಬಿಟ್ಟಿದ್ದರು. ಮೊದಲೇ ಕನ್ನಡದಲ್ಲಿ ಪುಷ್ಪ ಸಿನಿಮಾ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲಿ ರಶ್ಮಿಕ ರವರು ನೀಡಿದ ಈ ಒಂದು ಹೇಳಿಕೆ ಕರ್ನಾಟಕದ ಹಲವಾರು ಜನ ಸಿನಿಮಾ ನೋಡುವುದನ್ನು ತಡೆದು ಬಿಟ್ಟಿತು. ಒಂದು ಕಡೆ ಕಥೆಯಲ್ಲಿ ಹಿಡಿತ ಇಲ್ಲದೆ ಇರುವ ಸಮಯದಲ್ಲಿ ಅಭಿಮಾನಕ್ಕೆ ಆದರೂ ಹಲವಾರು ಜನ ಥಿಯೇಟರ್ ಗಳಿಗೆ ಹೋಗುತ್ತಿದ್ದರು. ಆದರೆ ಇಂತಹ ಸಮಯದಲ್ಲಿ ಸೃಷ್ಟಿಸಿಕೊಂಡ ವಿವಾದ ಜನ ಥಿಯೇಟರ್ ಗಳಿಗೆ ಹೋಗದಂತೆ ತಡೆದು ಬಿಟ್ಟಿತು ಎಂದರೆ ತಪ್ಪಾಗಲಾರದು. ಕಾಲೇಷನ್ ಮಾಡಿರಬಹುದು ಇಲ್ಲ ಎನ್ನುತ್ತಿಲ್ಲ ಆದರೆ ಪ್ರೇಕ್ಷಕರಿಂದ ಯಾವ ಪ್ರದೇಶದಲ್ಲಿಯೂ ಕೂಡ ಫುಲ್ ಮಾರ್ಕ್ಸ್ ತೆಗೆದುಕೊಂಡಿಲ್ಲ.