ತಲಾ ಮೂವರು ಆಟಗಾರರನ್ನು ಫೈನಲ್ ಮಾಡಿದ ಹೊಸ ಅಹಮದಾಬಾದ್ ಹಾಗು ಲಕ್ನೌ ತಂಡಗಳು, ಆರ್ಸಿಬಿ ಬಾರಿ ನಿರಾಸೆ. ಆಯ್ಕೆಯಾದವರು ಯಾರ್ಯಾರು ಗೊತ್ತೇ??

ತಲಾ ಮೂವರು ಆಟಗಾರರನ್ನು ಫೈನಲ್ ಮಾಡಿದ ಹೊಸ ಅಹಮದಾಬಾದ್ ಹಾಗು ಲಕ್ನೌ ತಂಡಗಳು, ಆರ್ಸಿಬಿ ಬಾರಿ ನಿರಾಸೆ. ಆಯ್ಕೆಯಾದವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಭಾರಿ ಐಪಿಎಲ್ ನಲ್ಲಿ ಹೊಸದಾಗಿ ಸೇರಿಕೊಂಡಿರುವ ಅಹಮದಾಬಾದ್ ಹಾಗೂ ಲಕ್ನೋ ಫ್ರಾಂಚೈಸಿಗಳಿಗೆ , ಬಿಸಿಸಿಐ ಆಟಗಾರರ ಸಾರ್ವತ್ರಿಕ ಹರಾಜಿನೊಳಗಾಗಿ ಮೂವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ನೀಡಿ, ಗಡುವು ನೀಡಿತ್ತು. ಅದೇ ರೀತಿ ಈಗ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ತಾವು ಆಯ್ಕೆ ಮಾಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಲಕ್ನೋ ತಂಡದ ನಾಯಕತ್ವವನ್ನು ಕೆ.ಎಲ್.ರಾಹುಲ್ ನಿರ್ವಹಿಸುತ್ತಿದ್ದರೇ, ಅಹಮದಬಾದ್ ತಂಡದ ನಾಯಕತ್ವ ಶ್ರೇಯಸ್ ಅಯ್ಯರ್ ರವರ ಹೆಗಲಿಗೇರಿದೆ.

ಅಹಮದಾಬಾದ್ ತಂಡ ಶ್ರೇಯಸ್ ಅಯ್ಯರ್ ಜೊತೆ ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಸದ್ಯ ಅದ್ಭುತ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯಾದ ಬ್ಯಾಟ್ಸಮನ್ ಡೇವಿಡ್ ವಾರ್ನರ್ ರವರನ್ನು ಆಯ್ಕೆ ಮಾಡಿದೆ. ಈ ಮೂಲಕ ಬಲಿಷ್ಠ ತಂಡ ಕಟ್ಟಲು ಸಂಪೂರ್ಣ ಸಿದ್ದತೆ ನಡೆಸಿದೆ.

ಇನ್ನು ಇದೇ ವೇಳೆ ಲಕ್ನೋ ತಂಡ ಕನ್ನಡಿಗ, ಭಾರತ ತಂಡದ ಉಪನಾಯಕ ಕೆ.ಎಲ್.ರಾಹುಲ್ ಗೆ ನಾಯಕತ್ವದ ಮಣೆ ಹಾಕಿದೆ. ಇದರ ಜೊತೆ ಅಫಘಾನಿಸ್ತಾನ ತಂಡದ ಖ್ಯಾತ ಸ್ಪಿನ್ನರ್ ರಶೀದ್ ಖಾನ್ ರನ್ನು ಸಹ ಆರಿಸಿಕೊಂಡಿದೆ. ಇದರ ಜೊತೆ ಭಾರತ ತಂಡದ ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್ ರನ್ನು ಸಹ ಆಯ್ದುಕೊಂಡಿದೆ. ಇದೇ ಸಮಯದಲ್ಲಿ ಆರ್ಸಿಬಿ ತಂಡವು, ರಾಹುಲ್, ಡೇವಿಡ್ ವಾರ್ನರ್ ಹಾಗೂ ಶ್ರೇಯಸ್ ಅಯ್ಯರ್ ರವರಲ್ಲಿ ಕನಿಷ್ಠ ಇಬ್ಬರನ್ನು ಖರೀದಿ ಮಾಡಿ ಕ್ಯಾಪ್ಟನ್ ಮಾಡಲು ಕಣ್ಣಿಟ್ಟಿತ್ತು. ಆದರೆ ಎರಡು ತಂಡಗಳು ಆರ್ಸಿಬಿ ಕನಸಿಗೆ ತಣ್ಣೀರನ್ನು ಎರಚಿವೆ.

ಅಧೀಕೃತವಾದ ಪಟ್ಟಿ ಶೀಘ್ರದಲ್ಲೇ ಹೊರಬೀಳಲಿದ್ದು, ಈ ಆಯ್ಕೆಗಳೇ ಅಂತಿಮವಾಗಿವೆ ಎಂದು ಮೂಲಗಳು ತಿಳಿಸಿವೆ. ಲಕ್ನೋ ತಂಡದಲ್ಲಿ ನಾಯಕ, ಆರಂಭಿಕ ಬ್ಯಾಟ್ಸಮನ್ ಹಾಗೂ ವಿಕೇಟ್ ಕೀಪರ್ ಈ ಮೂರು ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ರಾಹುಲ್ ಇರುವ ಕಾರಣ, ಮತ್ತೊಬ್ಬ ವಿಕೇಟ್ ಕೀಪರ್ ಬದಲು , ವೇಗದ ಬೌಲರ್ ಆಯ್ಕೆ ಮಾಡಿಕೊಳ್ಳುವುದು ಉತ್ತಮವಾಗಿತ್ತು ಎಂಬ ಸಲಹೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.