ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪರೋಕ್ಷವಾಗಿ ತನ್ನ ಹಾಗೂ ಸಮಂತಾ ರವರ ವಿಚ್ಚೇದನಕ್ಕೆ ಮೊದಲ ಬಾರಿಗೆ ಕಾರಣ ನೀಡಿದ ನಾಗ ಚೈತನ್ಯ. ಸಮಂತಾ ಮಾಡಿದ್ದೇನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಸೂಪರ್ ಜೋಡಿಗಳು ಆಗಿರುವ ನಾಗಚೈತನ್ಯ ಹಾಗೂ ಸಮಂತ ಇಬ್ಬರು ಕೂಡ ವಿವಾಹ ವಿಚ್ಛೇದನವನ್ನು ನೀಡಿ ಈಗಾಗಲೇ ಹಲವಾರು ಸಮಯಗಳು ಕಳೆದು ಹೋಗಿವೆ. ಇಬ್ಬರು ಕೂಡ ಹಲವಾರು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ನಂತರ ಮನೆಯವರ ಒಪ್ಪಿಗೆ ಮೇರೆಗೆ ಎರಡು ಧರ್ಮಗಳ ಪ್ರಕಾರ ಅದ್ದೂರಿಯಾಗಿ 2017 ರಲ್ಲಿ ವಿವಾಹವಾಗಿದ್ದರು. ಸಮಂತ ರವರು ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಜನಪ್ರಿಯತೆಯನ್ನು ಕಂಡುಕೊಂಡಿದ್ದಾರೆ.

ಇನ್ನು ಇತ್ತ ನಾಗಚೈತನ್ಯ ರವರು ಕೂಡ ತೆಲುಗು ಚಿತ್ರರಂಗದ ಪ್ರತಿಷ್ಠಿತ ಮನೆತನ ವಾಗಿರುವ ಅಕ್ಕಿನೇನಿ ವಂಶದ ಕುಡಿಯಾಗಿ ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿದ್ದಾರೆ. ಇನ್ನು ಇವರಿಬ್ಬರು ವಿವಾಹ ವಿಚ್ಛೇದನ ಪಡೆದುಕೊಂಡಿರುವುದಕ್ಕೆ ಯಾವುದೇ ಸೂಕ್ತವಾದ ಕಾರಣಗಳು ಕೂಡ ಅಧಿಕೃತವಾಗಿ ದೃಢಗೊಂಡಿಲ್ಲ. ಇನ್ನು ವಿವಾಹ ವಿಚ್ಛೇದನದ ಕುರಿತಂತೆ ನಾಗಚೈತನ್ಯ ಇದುವರೆಗೂ ಕೂಡ ಮೌನವನ್ನೆ ವಹಿಸಿದ್ದರು. ಆದರೆ ಇತ್ತೀಚೆಗಷ್ಟೇ ಅವರು ಹೇಳಿರುವ ಮಾತು ಈ ಕುರಿತಂತೆ ನಿಜಾಂಶವನ್ನು ಬಿಚ್ಚಿಟ್ಟಂತಿದೆ.

ಸಂದರ್ಶನದಲ್ಲಿ ಸಂದರ್ಶಕರು ಒಬ್ಬರು ನಾಗಚೈತನ್ಯ ರವರಿಗೆ ನಿಮ್ಮ ಸ್ನೇಹದ ಪಾತ್ರವನ್ನು ಹೇಗೆ ಆಯ್ಕೆ ಮಾಡುತ್ತೀರಿ ಎಂದು ಕೇಳಿದಾಗ ನಾಗಚೈತನ್ಯ ರವರು ನಾನು ಮಾಡುವ ಪಾತ್ರದಿಂದ ನನ್ನ ಕುಟುಂಬಸ್ಥರು ಮುಜುಗರಕ್ಕೆ ಒಳಗಾಗಬಾರದು ಅವರ ಗೌರವಕ್ಕೆ ಧಕ್ಕೆ ಆಗಬಾರದು ಅಂತಹ ಪಾತ್ರಗಳನ್ನು ಆಯ್ಕೆ ಮಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇದರಿಂದ ಅರ್ಥವಾಗುವುದೇನೆಂದರೆ ಕೆಲವು ಸಮಯಗಳ ಹಿಂದಷ್ಟೇ ಸಮಂತಾ ರವರು ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ನಲ್ಲಿ ಬೋಲ್ಡ್ ದೃಶ್ಯವೊಂದರಲ್ಲಿ ನಟಿಸಿದ್ದರು., ಈಗಲೂ ಕೂಡ ಅದನ್ನೇ ಮುಂದುವರೆಸುತ್ತಿದ್ದಾರೆ. ಇದರಿಂದಾಗಿಯೇ ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟು ವಿವಾಹ ವಿಚ್ಛೇದನಕ್ಕೆ ಕಾರಣವಾಯಿತು ಎಂಬುದಾಗಿ ಈಗ ಎಲ್ಲರೂ ಮಾತನಾಡಿಕೊಳ್ಳುವಂತೆ ಆಗಿದೆ. ಇಷ್ಟು ಮಾತ್ರವಲ್ಲದೆ ಈ ಹೇಳಿಕೆ ಕೂಡ ನಾಗಚೈತನ್ಯ ರವರು ಪರೋಕ್ಷವಾಗಿ ಸಂಬಂಧ ಅವರನ್ನೇ ಗುರಿಯಾಗಿಟ್ಟುಕೊಂಡು ಹೇಳಿದಂತೆ ಎಲ್ಲರಿಗೂ ಅನಿಸುತ್ತಿದೆ. ಇದರ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.