ಮೊನ್ನೆಯ ವರೆಗೂ ನ್ಯಾಷನಲ್ ಕೃಷ್ ಎನ್ನುತ್ತಿದ್ದ ನೆಟ್ಟಿಗರು, ರಶ್ಮಿಕಾಗೆ ಇಂದು ಹೇಗೆಲ್ಲ ಹೇಳುತ್ತಿದ್ದಾರೆ ಗೊತ್ತಾ?? ಹೀಗೆ ಯಾಕಯ್ತೋ ರಶ್ಮಿಕಾ ಪಾಡು.

ಮೊನ್ನೆಯ ವರೆಗೂ ನ್ಯಾಷನಲ್ ಕೃಷ್ ಎನ್ನುತ್ತಿದ್ದ ನೆಟ್ಟಿಗರು, ರಶ್ಮಿಕಾಗೆ ಇಂದು ಹೇಗೆಲ್ಲ ಹೇಳುತ್ತಿದ್ದಾರೆ ಗೊತ್ತಾ?? ಹೀಗೆ ಯಾಕಯ್ತೋ ರಶ್ಮಿಕಾ ಪಾಡು.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಿಂದ ತಮ್ಮ ಸಿನಿ ಜರ್ನಿ ಯನ್ನು ಪ್ರಾರಂಭಿಸಿ ರಶ್ಮಿಕಾ ಮಂದಣ್ಣನವರು ಈಗಾಗಲೇ ಭಾರತದ ಬಹುತೇಕ ಎಲ್ಲಾ ಪ್ರತಿಷ್ಠಿತ ಸಿನಿಮಾ ರಂಗಗಳಲ್ಲಿ ಜನಪ್ರಿಯತೆ ಯನ್ನು ಹೊಂದಿದ್ದಾರೆ. ಇನ್ನು ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ ಈಗಾಗಲೇ ಪಂಚ ಭಾಷೆಯಲ್ಲಿ ಬಿಡುಗಡೆಯಾಗಿದ್ದು ವಿಶ್ವಾದ್ಯಂತ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ ಎಂದರೆ ತಪ್ಪಾಗಲ್ಲ.

ಇನ್ನು ಪುಷ್ಪ ಚಿತ್ರಕ್ಕಾಗಿ ಬರೋಬ್ಬರಿ 1.55 ವರ್ಷಗಳಕಾಲ ರಶ್ಮಿಕಾ ಮಂದಣ್ಣ ನವರು ಚಿತ್ರೀಕರಣದಲ್ಲಿ ಮನೆಬಿಟ್ಟು ಭಾಗಿಯಾಗಿದ್ದಾರೆ. ಪುಷ್ಪ ಚಿತ್ರಕ್ಕಾಗಿ ಹಲವಾರು ಕಷ್ಟಗಳನ್ನು ಪಟ್ಟಿರುವ ರಶ್ಮಿಕ ಮಂದಣ್ಣ ನವರಿಗೆ ಈ ಚಿತ್ರದ ಗೆಲುವು ಎನ್ನುವುದು ಸಾಕಷ್ಟು ಪ್ರಮುಖವಾಗಿರುತ್ತದೆ. ಇದಕ್ಕಾಗಿ ರಶ್ಮಿಕ ಮಂದಣ್ಣ ದವರು ಪುಷ್ಪ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಕೂಡ ಅವಿರತವಾಗಿ ಭಾಗವಹಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಹಿಂದಿ ಪ್ರಮೋಷನ್ ಗಾಗಿ ಮುಂಬೈಗೆ ಕೂಡ ಚಿತ್ರದೊಂದಿಗೆ ಆಗಮಿಸಿ ಪ್ರಮೋಷನ್ ಮಾಡಿದ್ದರು. ಈ ಸಂದರ್ಭದಲ್ಲಿ ಪುಷ್ಪ ಚಿತ್ರದ ಹಿಂದಿ ಡೈಲಾಗನ್ನು ಕೂಡ ಹಿಂದಿಯಲ್ಲಿ ಹೇಳಿದ್ದರು. ಇದನ್ನು ವೈರಲ್ ಭಯನಿ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈಗ ಇದಕ್ಕೆ ಪ್ರೇಕ್ಷಕರು ನೀಡಿರುವ ಉತ್ತರ ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಬೆರಗಾಗುತ್ತೀರಿ.

ಹೌದು ಗೆಳೆಯರೆ ರಶ್ಮಿಕ ಮಂದಣ್ಣ ನವರು ಈ ವಿಡಿಯೋದಲ್ಲಿ ಹಸಿರು ಬಣ್ಣದ ಲೆಹಂಗಾ ದಲ್ಲಿ ಮಿಂಚುತ್ತಿದ್ದರು. ಇನ್ನು ಇವರ ವಿಡಿಯೋವನ್ನು ಶೇರ್ ಮಾಡಿರುವ ಪೋಸ್ಟ್ ನ ಕಮೆಂಟ್ ಬಾಕ್ಸ್ ನಲ್ಲಿ ಪ್ರೇಕ್ಷಕರು ಇವಳು ಯಾವ ಆಂಗಲ್ ನಲ್ಲಿ ನ್ಯಾಷನಲ್ ಕ್ರಶ್ ಆಗಿ ಕಾಣಿಸಿಕೊಳ್ಳುತ್ತಾಳೆ ಇವಳಿಗಿಂತ ಚೆನ್ನಾಗಿರುವ ನಟಿಯರು ನಮ್ಮಲ್ಲಿ ಇದ್ದಾರೆ ಎಂಬುದಾಗಿ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಒಂದು ಕಾಲದಲ್ಲಿ ನಮ್ಮ ನೆಚ್ಚಿನ ನ್ಯಾಷನಲ್ ಕ್ರಷ್ ಎಂದಿರುವ ಅಭಿಮಾನಿಗಳೇ ಹೀಗೆ ಹೇಳುತ್ತಿರುವುದು ಖಂಡಿತವಾಗಿ ವಿಷಾದನೀಯವಾಗಿದೆ. ಪ್ರೇಕ್ಷಕರು ಹೀಗೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕ ಮಂದಣ್ಣ ನವರನ್ನು ಟೀಕೆಗೆ ಒಳಪಡಿಸುತ್ತಿರುವುದು ನಿಮಗೇನನ್ನಿಸುತ್ತಿದೆ ಎಂದು ನಮ್ಮೊಂದಿಗೆ ಹಂಚಿಕೊಳ್ಳಿ.