10 ಕೆಜಿಎಫ್ ಗೆ ಸಮ ಎಂದು ಬಿಲ್ಡಪ್ ಕೊಟ್ಟ ಪುಷ್ಪ ಸಿನಿಮಾದ ಕಥೆ ಬಿಡುಗಡೆಯಾದ ಮೊದಲ ದಿನವೇ ಏನಾಗಿದೆ ಗೊತ್ತಾ??

10 ಕೆಜಿಎಫ್ ಗೆ ಸಮ ಎಂದು ಬಿಲ್ಡಪ್ ಕೊಟ್ಟ ಪುಷ್ಪ ಸಿನಿಮಾದ ಕಥೆ ಬಿಡುಗಡೆಯಾದ ಮೊದಲ ದಿನವೇ ಏನಾಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಎಂದು ಖ್ಯಾತರಾಗಿರುವ ಅಲ್ಲು ಅರ್ಜುನ್ ನಟನೆಯ ಪಂಚಭಾಷಾ ಚಿತ್ರ ಪುಷ್ಪ ಇಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ ರಕ್ತಚಂದನದ ಸಾಗಾಣಿಕೆಯ ಹಿಂದೆ ಹೆಣೆದಿರುವ ಕಥೆಯಾಗಿದೆ. ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಸೇರಿದಂತೆ ಭಾರತದಾದ್ಯಂತ ಸಾಕಷ್ಟು ಹೈಪ್ ಕ್ರಿಯೇಟ್ ಆಗಿತ್ತು. ಇಷ್ಟು ಮಾತ್ರವಲ್ಲದೆ ಕನ್ನಡದ ಹೆಮ್ಮೆಯ ಕೆಜಿಎಫ್ ಚಿತ್ರದ ಹತ್ತುಪಟ್ಟು ಈ ಚಿತ್ರ ಇದೆ ಎಂಬುದಾಗಿ ಬಿಲ್ಡಪ್ ನೀಡಲಾಗಿತ್ತು.

ಆದರೆ ಈಗ ಚಿತ್ರವನ್ನು ನೋಡಿರುವ ಸಿನಿಮಾ ಪ್ರೇಕ್ಷಕರು ಚಿತ್ರದ ಕುರಿತಂತೆ ನಿರಾಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಥೆಯಲ್ಲಿ ಕೇವಲ ಅಲ್ಲು ಅರ್ಜುನ್ ರವರನ್ನು ಹೈಲೈಟ್ ಮಾಡಲಾಗಿದ್ದು ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಈ ಸಿನಿಮಾ ಮಾತ್ರ ರುಚಿಸಲಿದೆ ಎಂದು ಹೇಳಲಾಗುತ್ತಿದೆ. ಬೇರೆ ಎಲ್ಲ ಪಾತ್ರೆಗಳಿಗೂ ಕೂಡ ಅಷ್ಟೊಂದು ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿಲ್ಲ. ದೇವಿಪ್ರಸಾದ್ ರವರ ಮ್ಯೂಸಿಕ್ ಕೂಡ ಸಿನಿಮಾದಲ್ಲಿ ಮ್ಯಾಜಿಕ್ ಮಾಡಲು ಕೊಂಚಮಟ್ಟಿಗೆ ವಿಫಲವಾಗಿದೆ ಎಂದು ಹೇಳಬಹುದಾಗಿದೆ.

ಪುಷ್ಪ ಚಿತ್ರವನ್ನು ನೋಡಿರುವ ನ್ಯೂಟ್ರಲ್ ಆಡಿಯನ್ಸ್ ಚಿತ್ರ ಹೇಳಿಕೊಳ್ಳುವಂತಹ ಎಕ್ಸ್ಟ್ರಾರ್ಡಿನರಿ ಕಥೆಯನ್ನು ಹೇಳಿಲ್ಲ ಎಂಬುದಾಗಿ ಚಿತ್ರದ ಕುರಿತಂತೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಹ ಕಥೆಯ ಗಟ್ಟಿತನ ಇಲ್ಲ ಎಂಬುದಾಗಿ ಕೂಡಾ ಇಲ್ಲಿ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಸುಕುಮಾರ್ ರವರ ನಿರ್ದೇಶನದ ಕೂಡ ಇಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸೋತಿದೆ ಎನ್ನಬಹುದಾಗಿದೆ. ಕಥೆ ಸಾಕಷ್ಟು ದೀರ್ಘವಾಗಿ ಹೇಳಿಕೊಂಡು ಹೋಗುವಂತೆ ಭಾಸವಾಗುತ್ತದೆ. ಸಾಕಷ್ಟು ಕಡೆಗಳಲ್ಲಿ ಕತ್ತರಿ ಹಾಕಿ ಕಥೆಯನ್ನು ಟ್ರಿಮ್ ಮಾಡಬಹುದಾದ ಸಾಧ್ಯತೆ ಇದ್ದರೂ ಕೂಡ ಚಿತ್ರತಂಡ ಪ್ರಯತ್ನಪಟ್ಟಿಲ್ಲ ಎಂಬಂತೆ ಕಾಣುತ್ತದೆ. ಒಟ್ಟಾರೆಯಾಗಿ ಚಿತ್ರಕ್ಕೆ ರೇಟಿಂಗ್ ನೀಡುವುದಾದರೆ 5 ರಲ್ಲಿ 3 ಕೊಟ್ಟರು ಕೂಡ ಜಾಸ್ತಿ ಎನ್ನಬಹುದು. ಪುಷ್ಪ ಚಿತ್ರ ನೋಡಿ ನಿಮ್ಮ ಅನಿಸಿಕೆ ಏನು ಎಂಬುದನ್ನು ಕೂಡ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.