ಸತ್ಯ ಹೇಳಿದ್ದಕ್ಕಾಗಿ ಕೊಹ್ಲಿ ಗೆ ಸಂಕಷ್ಟ ಶುರು, ಕೊಹ್ಲಿ ಗೆ ಶಾಕ್ ನೀಡಲು ಮುಂದಾದ ಗಂಗೂಲಿ. ಏನು ಗೊತ್ತೇ??

ಸತ್ಯ ಹೇಳಿದ್ದಕ್ಕಾಗಿ ಕೊಹ್ಲಿ ಗೆ ಸಂಕಷ್ಟ ಶುರು, ಕೊಹ್ಲಿ ಗೆ ಶಾಕ್ ನೀಡಲು ಮುಂದಾದ ಗಂಗೂಲಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ರಂಗದಲ್ಲಿ ಕೂಡ ಸಾಕಷ್ಟು ಡ್ರಾಮಗಳು ನಡೆಯುತ್ತಿವೆ. ವಿರಾಟ್ ಕೊಹ್ಲಿ ರವರು ಟಿ-ಟ್ವೆಂಟಿ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಕೆಲವೇ ದಿನಗಳಲ್ಲಿ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಲಾಯಿತು. ಇದರ ಕುರಿತಂತೆ ನಿನ್ನೆಯಷ್ಟೇ ವಿರಾಟ್ ಕೊಹ್ಲಿ ರವರು ಸುದ್ದಿಗೋಷ್ಠಿಯಲ್ಲಿ ಸಾಕಷ್ಟು ವಿಚಾರಗಳನ್ನು ಹೊರಗೆಳೆದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ರವರ ಮುಂದಿನ ದಿನಗಳಲ್ಲಿ ಬಿಸಿಸಿಐನಿಂದ ಸಾಕಷ್ಟು ಅಡೆತಡೆಗಳು ಉಂಟಾಗಬಹುದಾದ ಅಂತಹ ಸಾಧ್ಯತೆಗಳು ಕೂಡ ಇವೆ. ಯಾಕೆಂದರೆ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ನಾನು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಇಲ್ಲದಿದ್ದರೂ ಕೂಡ ಬಿಸಿಸಿಐ ನನ್ನನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿದೆ ಎಂಬುದಾಗಿ ಹೇಳಿದ್ದಾರೆ.

ಇನ್ನು ಸೌರವ್ ಗಂಗುಲಿ ರವರ ಅಧ್ಯಕ್ಷತೆಯಲ್ಲಿ ಇರುವಂತಹ ಬಿಸಿಸಿಐ ನಾವು ವಿರಾಟ್ ಕೊಹ್ಲಿ ರವರ ಬಳಿ ನಾಯಕನ ಸ್ಥಾನದಿಂದ ಕೆಳಗಿಳಿಯುವಂತೆ ಮನವಿ ಮಾಡಿಕೊಂಡಿದ್ದೆವು ಎಂಬುದಾಗಿ ಹೇಳಿದ್ದಾರೆ. ಆದರೆ ಇದನ್ನು ವಿರಾಟ್ ಕೊಹ್ಲಿ ರವರ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಇನ್ನು ಬಿಸಿಸಿಐ ಇದನ್ನು ಹೇಗೆ ಬಿಂಬಿಸಿದೆ ಎಂದರೆ ಒಂದು ವೇಳೆ ವಿರಾಟ್ ಕೊಹ್ಲಿ ಇರುವವರು ಟಿ-ಟ್ವೆಂಟಿ ನಾಯಕನ ಸ್ಥಾನದಿಂದ ಕೆಳಗಿಳಿದರೆ ಏಕದಿನ ಸ್ಥಾನದಿಂದ ಕೂಡ ಕೆಳಗಿಳಿಯ ಬೇಕಾಗುತ್ತದೆ ಎಂಬುದಾಗಿ ಹೇಳಿದ್ದಾರಂತೆ.

ಆದರೆ ವಿರಾಟ್ ಕೊಹ್ಲಿ ರವರಿಗೆ ಏಕದಿನ ನಾಯಕನ ಸ್ಥಾನದಿಂದ ಕೆಳಗಿಳಿಯುವಂತೆ ಯಾವ ಇಚ್ಛೆ ಕೂಡ ಇರಲಿಲ್ಲ ಅವರು ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲು ಇಷ್ಟಪಟ್ಟಿದ್ದರು. ಇತ್ತೀಚಿಗಷ್ಟೇ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿರುವ ಚೇತನ್ ಶರ್ಮಾ ರವರು ಕರೆ ಮಾಡಿ ಈ ವಿಚಾರ ಕುರಿತಂತೆ ವಿರಾಟ್ ಕೊಹ್ಲಿ ಅವರಿಗೆ ತಿಳಿಸಿದಾಗ ವಿರಾಟ್ ಕೊಹ್ಲಿ ಅವರು ಸರಿ ಪರವಾಗಿಲ್ಲ ಎಂಬುದಾಗಿ ಹೇಳಿದ್ದಾರಂತೆ. ಆದರೆ ಈಗ ವಿರಾಟ್ ಕೊಹ್ಲಿ ಅವರು ಬಿಸಿಸಿಐ ಮುಚ್ಚಿಟ್ಟಿರುವಂತಹ ಎಲ್ಲ ಸತ್ಯಗಳನ್ನು ಕೂಡ ಪ್ರಶ್ನಿಸುವಂತೆ ನಡೆಸಿರುವ ಸುದ್ದಿಗೋಷ್ಠಿಯ ವಿರುದ್ಧವಾಗಿ ಬಿಸಿಸಿಐ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ವಿರಾಟ್ ಕೊಹ್ಲಿ ರವರನ್ನು ಟೆಸ್ಟ್ ನಾಯಕನ ಸ್ಥಾನದ ಕೂಡ ಕೆಳಗಿಳಿಸುವ ಸಾಧ್ಯತೆ ಇದೆ. ಒಂದು ವೇಳೆ ಹೀಗೆ ಮಾಡಿದ್ದೆ ಆದಲ್ಲಿ ಖಂಡಿತವಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ವಿರುದ್ಧ ರೊಚ್ಚಿಗೇಳೋದು ಗ್ಯಾರಂಟಿ.