ಟೀಕಾಕಾರಿಗೆ ಹಾಗೂ ಗೊಂದಲಗಳಿಗೆಲ್ಲಾ ಒಂದೇ ಶಬ್ದದಲ್ಲಿ ಉತ್ತರ ಕೊಟ್ಟ ರವೀಂದ್ರ ಜಡೇಜಾ, ಖಡಕ್ ಉತ್ತರ ಕೊಟ್ಟ ಜಡೇಜಾ. ಏನು ಗೊತ್ತೇ??

ಟೀಕಾಕಾರಿಗೆ ಹಾಗೂ ಗೊಂದಲಗಳಿಗೆಲ್ಲಾ ಒಂದೇ ಶಬ್ದದಲ್ಲಿ ಉತ್ತರ ಕೊಟ್ಟ ರವೀಂದ್ರ ಜಡೇಜಾ, ಖಡಕ್ ಉತ್ತರ ಕೊಟ್ಟ ಜಡೇಜಾ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಗಳಿಗಿಂತ ಸುಳ್ಸುದ್ದಿಗಳೇ ಹೆಚ್ಚು ವೇಗ ಪಡೆದುಕೊಳ್ಳುತ್ತೇವೆ. ಉದಾಹರಣೆಗೆಂದರೇ ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೇಟ್ ಗೆ ನಿವೃತ್ತಿ ಘೋಷಿಸುತ್ತಾರೆ, ಗಾಯದ ಸಮಸ್ಯೆಗಳಿಂದ ಕಾರಣ ಅವರು ಟೆಸ್ಟ್ ಕ್ರಿಕೇಟ್ ನಿಂದ ನಿವೃತ್ತಿ ಘೋಷಿಸಿ, ಕೇವಲ ಇನ್ಮುಂದೆ ಏಕದಿನ ಹಾಗೂ ಟಿ 20 ಕ್ರಿಕೇಟ್ ಗಳಲ್ಲಿ ಮಾತ್ರ ಮುಂದುವರಿಯುತ್ತಾರೆ ಎಂಬ ಸುದ್ದಿ ಹೊರಬಂದಿತ್ತು.

ಕೆಲವರ ಪ್ರಕಾರ ಇದು ಸತ್ಯ ಎಂಬ ಸುದ್ದಿ ಸಹ ಬಂದಿತ್ತು. ಕಾಕತಾಳೀಯವೆಂಬಂತೆ ರವೀಂದ್ರ ಜಡೇಜಾ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಸರಣಿಯ ಟೆಸ್ಟ್ ಕ್ರಿಕೇಟ್ ತಂಡದಿಂದಲೇ ಹೊರ ಬಿದ್ದಿದ್ದರು. ಹೀಗಾಗಿ ಮುಂದಿನ ಏಕದಿನ ಹಾಗೂ ಟಿ 20 ಕ್ರಿಕೇಟ್ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೇಟ್ ಗೆ ಶೀಘ್ರದಲ್ಲಿಯೇ ನಿವೃತ್ತಿ ಘೋಷಿಸುತ್ತಾರೆಂದು ಹೇಳಲಾಗಿತ್ತು. ಆದರೇ ಇದಕ್ಕೆಲ್ಲಾ ಫುಲ್ ಸ್ಟಾಪ್ ಎಂಬಂತೆ ರವೀಂದ್ರ ಜಡೇಜಾ ಇಂದು ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ಹೌದು ಇಷ್ಟು ದಿನ ಮೌನಕ್ಕೆ ಶರಣಾಗಿದ್ದ ರವೀಂದ್ರ ಜಡೇಜಾ, ಇಂದು ಟ್ವೀಟ್ ವೊಂದನ್ನ ಮಾಡಿದ್ದು, ಲಾಂಗ್ ವೇ ಟು ಗೋ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಇನ್ನು ಸಾಕಷ್ಟು ಫಿಟ್ ಆಗಿದ್ದು, ನನ್ನಲ್ಲಿ ಇನ್ನು ಹೆಚ್ಚಿನ ಕ್ರಿಕೇಟ್ ಉಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಾವು ಯಾವುದೇ ರೀತಿಯ ಕ್ರಿಕೇಟ್ ಮಾದರಿಗೆ ನಿವೃತ್ತಿ ಘೋಷಿಸುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ. ಹೀಗಾಗಿ ಸರ್ ರವೀಂದ್ರ ಜಡೇಜಾ ಇನ್ನು ಸಾಕಷ್ಟು ವರ್ಷಗಳ ಕಾಲ ಟೆಸ್ಟ್, ಏಕದಿನ, ಟಿ 20 ಕ್ರಿಕೇಟ್ ನಲ್ಲಿ ಮುಂದುವರಿಯಲಿದ್ದಾರೆ. ಎಲ್ಲಾ ಊಹಾಪೋಹಗಳಿಗೂ ಜಡೇಜಾ ತೆರೆ ಎಳೆದಿದ್ದಾರೆ. ಸದ್ಯ ಟೆಸ್ಟ್ ಸರಣಿ ತಪ್ಪಿಸಿಕೊಂಡಿರುವ ರವೀಂದ್ರ ಜಡೇಜಾ, ಏಕದಿನ ಸರಣಿಗೆ ಫಿಟ್ ಆಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ಸರಣಿ ಭಾರತಕ್ಕೆ ಅತಿಮುಖ್ಯವಾಗಿದ್ದು, ಅಲ್ಲಿಯೂ ಜಯಿಸಿದರೇ, ಟೆಸ್ಟ್ ಆಡುವ ಎಲ್ಲಾ ದೇಶಗಳ ಮೇಲೆ ಅವರದ್ದೇ ನೆಲದಲ್ಲಿ ಸರಣಿ ಗೆಲ್ಲುವ ಭಾರತದ ಕ್ರಿಕೇಟ್ ಅಭಿಮಾನಿಗಳ ಕನಸು ನನಸಾಗುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.