ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತನಗೆ ಎರಡು ಮಕ್ಕಳಿದ್ದರೂ ಮೈದುನನನ್ನು ಪ್ರೀತಿ ಮಾಡಿದಳು, ತಿಳಿದ ತಕ್ಷಣ ಆಕೆಯ ಗಂಡ ಆಕೆಗಿಂತ ಒಂದು ಹೆಜ್ಜೆ ಮಂದಿಟ್ಟ ಮಾಡಿದ್ದೇನು ಗೊತ್ತೇ??

34

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳು ಎಷ್ಟು ಒಳ್ಳೆಯದಾಗಿರುತ್ತದೆಯೋ ಅಷ್ಟೇ ಮಟ್ಟದಲ್ಲಿ ತನ್ನೊಳಗೆ ಕೆಟ್ಟದ್ದನ್ನು ಕೂಡ ಹುದುಗಿಸಿಕೊಂಡಿರುತ್ತದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಸಾಮಾಜಿಕ ಜಾಲತಾಣಗಳನ್ನು ಹೇಗೆ ಉಪಯೋಗಿಸುತ್ತಾರೆ ಅದೇ ರೀತಿ ಅವರಿಗೆ ಪರಿಣಾಮವನ್ನು ಕೂಡ ಬೀರುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ರೀತಿ ಸರಿಯಾಗಿರಬೇಕು. ಹೌದು ಗೆಳೆಯರೇ ಇಂದು ನಾವು ಹೇಳಲು ಹೊರಟಿರುವ ವಿಚಾರ ನಡೆದಿರುವುದು ಉತ್ತರ ಭಾರತದ ಜಾರ್ಖಂಡ್ನಲ್ಲಿ.

ಈ ವಿಚಾರವನ್ನು ಕೇಳಿದರೆ ನೀವು ಕೂಡ ಹೈರಾಣಾಗೋದು ಗ್ಯಾರಂಟಿ. ಆಕೆ ಆತನನ್ನು ಮದುವೆಯಾಗಿ ಎರಡು ಮಕ್ಕಳನ್ನು ಕೂಡ ಪಡೆದಿದ್ದಳು. ಆತ ಕೆಲಸಕ್ಕಾಗಿ ಗುಜರಾತ್ ನ ಸೂರತ್ ನಲ್ಲಿ ತನ್ನ ತಮ್ಮನೊಂದಿಗೆ ಕೆಲಸ ಮಾಡಿಕೊಂಡಿರುತ್ತಾನೆ. ಕೆಲವು ಸಮಯಗಳ ನಂತರ ಆಕೆಯೇ ಗುಜರಾತಿನ ಸೂರತ್ ಗೆ ಬಂದಿರುತ್ತಾಳೆ. ಆದರೆ ನೀವು ಅಂದುಕೊಂಡಿರಬಹುದು ಅವಳು ಅಲ್ಲಿಗೆ ಬಂದಾಕ್ಷಣ ಸೀದ ಹೋಗುವುದು ತನ್ನ ಗಂಡನನ್ನು ನೋಡಲು ಎಂಬುದಾಗಿ.

ಆದರೆ ಆಕೆ ಹೋಗಿದ್ದು ಗಂಡನ ತಮ್ಮ ಅಂದರೆ ಮೈದುನನ ಬಳಿಗೆ. ಮೈದುನನ ಮೇಲೆ ಆಕೆಗೆ ಪ್ರೀತಿ ಮೂಡಲು ಪ್ರಾರಂಭವಾಗಿತ್ತು. ಅದಕ್ಕಾಗಿಯೇ ಅವನೊಂದಿಗೆ ಆಕೆ ಕೂಡಲು ಪ್ರಾರಂಭಿಸುತ್ತಾಳೆ. ಇನ್ನು ಇವರಿಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಗಂಡ ನೋಡಿ ದಿಗ್ಬ್ರಾಂತ ನಾಗುತ್ತಾನೆ. ಆದರೆ ಅದಾದ ನಂತರ ಆತ ಅವರಿಬ್ಬರ ಬಳಿ ಹೋಗಿ ಮಾಡಿರುವ ಘಟನೆ ಅಥವಾ ಕಾರ್ಯ ನೋಡಿದರೆ ಖಂಡಿತವಾಗಿಯೂ ನೀವೇ ಒಂದು ಕ್ಷಣ ಅವಕ್ಕಾಗುತ್ತೀರಿ. ನೀವು ಕನಸಿನಲ್ಲಿ ಕೂಡ ಊಹಿಸಲಾಗದಂತಹ ಕೆಲಸವನ್ನು ಆತ ಮಾಡಿರುತ್ತಾನೆ.

ಹೌದು ಗೆಳೆಯರೇ ಆತ ಅವರಿಬ್ಬರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ನಂತರ ಅವರಿಬ್ಬರ ಬಳಿ ಹೋಗಿ ನೀವಿಬ್ಬರೂ ಪ್ರೀತಿಸುತ್ತೀರಾ ಎಂಬುದಾಗಿ ಹಾಗಿದ್ದರೆ ತಕ್ಷಣವೇ ಹೇಳಿಬಿಡಿ ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಅವರಿಬ್ಬರೂ ಕೂಡ ಹೌದು ನಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂಬುದನ್ನು ಇರುವುದನ್ನು ಇದ್ದಹಾಗೆ ನಿಜವಾಗಿ ಹೇಳಿಬಿಡುತ್ತಾರೆ. ಬೇರೆ ಯಾರಾದರೂ ಆಗಿದ್ದರೆ ಕೋಪಗೊಂಡು ಅವರಿಬ್ಬರನ್ನು ಮುಗಿಸಿ ಬಿಡುತ್ತಿದ್ದರು. ಆದರೆ ಆತ ಮಾಡಿರುವ ಕೆಲಸವೇ ಬೇರೆ. ಇಬ್ಬರಿಗೂ ಕೂಡ ತನ್ನ ಖರ್ಚಿನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಸಿ ಬಿಡುತ್ತಾನೆ.

ಇದರ ಕುರಿತಂತೆ ಬೇರೆ ಯಾರಾದರೂ ಅವರ ಬಳಿ ಕೇಳಿದಾಗ ಅವರಿಬ್ಬರ ಪ್ರೀತಿಯ ನಡುವೆ ನಾನು ಹೋಗಲು ಇಷ್ಟಪಡಲಿಲ್ಲ ಅದಕ್ಕಾಗಿ ಇಬ್ಬರಿಗೂ ಕೂಡ ಅವರ ಇಚ್ಛೆಯಂತೆ ಮದುವೆ ಮಾಡಿಸಿದ್ದೇನೆ ಎಂಬುದಾಗಿ ಸಂತೋಷವಾಗಿ ಹೇಳುತ್ತಾನೆ. ತಮ್ಮ ಹಾಗೂ ಆತನ ಹೆಂಡತಿಯ ಪ್ರೀತಿಯನ್ನು ಅರಿತು ಅವರಿಬ್ಬರಿಗೆ ತನ್ನ ಸ್ವಂತ ಖರ್ಚಿನಲ್ಲಿ ಮದುವೆ ಮಾಡಿಸಿರುವ ಈತನ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಇಂತಹ ಕಲಿಯುಗದಲ್ಲಿ ಈ ತರಹದ ಜನರು ಕೂಡ ಇರುತ್ತಾರೆ ಎನ್ನುವುದು ಈ ನೈಜ ಘಟನೆಯನ್ನು ಕೇಳಿದ ನಂತರವೇ ನಮಗೆ ಗೊತ್ತಾಗುವುದು. ಒಂದು ವೇಳೆ ನೀವು ಆ ಗಂಡನ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೀರಿ ಎಂಬುದನ್ನು ಕೂಡ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಇನ್ನು ಅಷ್ಟೊಂದು ಪ್ರೀತಿಸುವ ಗಂಡನನ್ನು ಬಿಟ್ಟು ಆತನ ತಮ್ಮನನ್ನು ಪ್ರೀತಿಸಿ ಮದುವೆಯಾಗಲು ಕೂಡ ರೆಡಿಯಾಗಿದ್ದ ಎರಡು ಮಕ್ಕಳ ತಾಯಿಯ ಕುರಿತಂತೆ ಕೂಡ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಇಂತಹ ಘಟನೆಗಳು ನಾವು ನೋಡಲು ಸಾಧ್ಯವಾಗುವುದು ಇದೇ ಸೋಶಿಯಲ್ ಮೀಡಿಯಾದಲ್ಲಿ ಅನ್ನೋದನ್ನು ಕೂಡ ನಾವು ನೆನಪಿಸಿಕೊಳ್ಳಬೇಕು.

Get real time updates directly on you device, subscribe now.