ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪೂಜಾರ ರನ್ ಗಳಿಸುತ್ತಿಲ್ಲ, ಆತನ ಬದಲು ಈ ಕನ್ನಡಿಗನನ್ನು ಆಯ್ಕೆ ಮಾಡಿ ಎಂದು ಬೇಡಿಕೆ ಇತ್ತ ಮಾಜಿ ಕ್ರಿಕೆಟಿಗ. ಪೂಜಾರ ಸ್ಥಾನ ತುಂಬುವವರು ಯಾರಂತೆ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಭಾರತಕ್ಕೆ ಈ ಭಾರಿ ಸರಣಿ ಗೆಲ್ಲುವ ಅವಕಾಶಗಳು ಹೆಚ್ಚು ಇವೆಯಾದರೂ, ಭಾರತ ತಂಡದ ಬ್ಯಾಟ್ಸಮನ್ ಗಳ ಅಸ್ಥಿರ ನಿರ್ವಹಣೆ ತಂಡದ ಮ್ಯಾನೇಜ್ ಮೆಂಟ್ ಚಿಂತೆಗೆ ಕಾರಣವಾಗಿದೆ. ಮುಖ್ಯವಾಗಿ 3 ನೇ ಕ್ರಮಾಂಕದ ಚೇತೇಶ್ವರ ಪೂಜಾರ ಹಾಗೂ ಐದನೇ ಕ್ರಮಾಂಕದ ಅಜಿಂಕ್ಯಾ ರಹಾನೆ ಬ್ಯಾಟ್ ನಿಂದ ರನ್ನುಗಳೇ ಬರುತ್ತಿಲ್ಲ. ಇದು ತಂಡದ ಕೆಳಕ್ರಮಾಂಕದ ಬ್ಯಾಟ್ಸಮನ್ ಗಳ ಅತ್ಯಧಿಕ ಒತ್ತಡವನ್ನು ತರುತ್ತಿದೆ.

ಒಂದು ವೇಳೆ ಎದುರಾಳಿ ಬೌಲಿಂಗ್ ಅಟ್ಯಾಕ್ ಅತ್ಯುತ್ತಮವಾಗಿದ್ದರೇ ಕೆಳಕ್ರಮಾಂಕದ ಬ್ಯಾಟರ್ ಗಳು ರನ್ ಗಳಿಸಲು ಆಗುವುದಿಲ್ಲ. ಇದು ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸಾಬಾ ಕರೀಂ ತಂಡಕ್ಕೆ ಒಂದೀ ಉಪಯುಕ್ತ ಸಲಹೆ ನೀಡಿದ್ದಾರೆ. ಪೂಜಾರ ಹಾಗೂ ರಹಾನೆ ಕಳೆದೊಂದು ವರ್ಷದಿಂದಲೂ ರನ್ ಬರ ಎದುರಿಸುತ್ತಿದ್ದಾರೆ..ತೀರಾ ಭಾಲತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿಯೂ ಅವರ ಬ್ಯಾಟ್ ರನ್ ನೋಡಲಿಲ್ಲ.

ಹಾಗಾಗಿ ಪೂಜಾರ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ರನ್ನ ಮೂರನೇ ಕ್ರಮಾಂಖದಲ್ಲಿ ಆಡಿಸಬೇಕು. ರೋಹಿತ್ ಮತ್ತು ರಾಹುಲ್ ಒಂದು ವೇಳೆ ಇನ್ನಿಂಗ್ಸ್ ಆರಂಭಿಸಿದರೇ, ಆಗ ಮಯಾಂಕ್ ಮೂರನೇ.ಕ್ರಮಾಂಕಕ್ಕೆ ಉತ್ತಮ ಆಯ್ಕೆಯಾಗುತ್ತಾರೆ. ಅವರು ಹೊಸ ಚೆಂಡನ್ನು ಎದುರಿಸಿದ ಅನುಭವ ಇದೆ. ಜೊತೆಗೆ ಸತತವಾಗಿ ದೇಶಿಯ ಕ್ರಿಕೇಟ್ ಆಡಿದ್ದಾರೆ. ಹಾಗಾಗಿ ಸ್ಪಿನ್ ಮತ್ತು ವೇಗ ಎರಡು ದಾಳಿಯನ್ನ ಸಮರ್ಥವಾಗಿ ಎದುರಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನು ಭಾರತ ತಂಡ ಸರಣಿ ಗೆಲ್ಲಬೇಕೆಂದರೇ ಕಳಪೆ ಫಾರ್ಮ್ ನಲ್ಲಿರುವ ಆಟಗಾರರನ್ನ ಕೈ ಬಿಟ್ಟು ಅತ್ಯುತ್ತಮ ಫಾರ್ಮ್ ನಲ್ಲಿರುವ ಆಟಗಾರರಿಗೆ ಅವಕಾಶ ನೀಡಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ ಎಂದು ಹೇಳುವ ಮೂಲಕ, ಆಫ್ರಿಕಾ ವಿರುದ್ದದ ಟೆಸ್ಟ್ ನಲ್ಲಿ ರಹಾನೆ ಹಾಗೂ ಪೂಜಾರರನ್ನ ಕೈ ಬಿಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.