ಮೇಜರ್ ಸರ್ಜರಿಗೆ ಕೈ ಹಾಕಿದ ದ್ರಾವಿಡ್, ಮೂವರಿಗೆ ಕೊನೆಯ ಅವಕಾಶ ನೀಡಲು ಸಿದ್ದವಾದ ಕೋಚ್, ವಿಫಲವಾದರೆ ಗೇಟ್ ಪಾಸ್ ಪಕ್ಕ. ಯಾರ್ಯಾರು ಗೊತ್ತೇ??

ಮೇಜರ್ ಸರ್ಜರಿಗೆ ಕೈ ಹಾಕಿದ ದ್ರಾವಿಡ್, ಮೂವರಿಗೆ ಕೊನೆಯ ಅವಕಾಶ ನೀಡಲು ಸಿದ್ದವಾದ ಕೋಚ್, ವಿಫಲವಾದರೆ ಗೇಟ್ ಪಾಸ್ ಪಕ್ಕ. ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆದ ನಂತರ ಹಲವಾರು ಬದಲಾವಣೆಗಳು ಕಾಣುತ್ತಿವೆ. ಟೀಮ್ ಇಂಡಿಯಾದಲ್ಲಿ ನಿಮಗೆ ಸ್ಥಾನ ಸಿಗಬೇಕೆಂದರೇ, ನೀವು ದೈಹಿಕವಾಗಿ ಸಮರ್ಥರಾಗಿರಬೇಕು ಹಾಗೂ ಅತ್ಯುತ್ತಮ ಫಾರ್ಮ್ ನಲ್ಲಿರಬೇಕು. ಕೇವಲ ನಾಮಬಲ, ಹಿಂದಿನ ದಾಖಲೆಗಳೊಂದಿಗೆ ಹೆಚ್ಚು ಪಂದ್ಯಗಳಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬ ಸ್ಪಷ್ಠ ಸಂದೇಶ ರವಾನೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದು, ಡಿಸೆಂಬರ್ 26 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ.ಟೀಮ್ ಇಂಡಿಯಾದ ಮೂವರು ಆಟಗಾರರಿಗೆ ಈ ಕೊನೆಯ ಅವಕಾಶವಾಗಿದ್ದು, ಇಲ್ಲಿ ಮಿಂಚದಿದ್ದರೇ, ಮುಂದೆ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ ಎಂದು ಹೇಳಲಾಗಿದೆ. ಆ ಮೂವರು ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಮೊದಲನೆಯದಾಗಿ ಅಜಿಂಕ್ಯಾ ರಹಾನೆ – ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ರಹಾನೆ, ಸದ್ಯ ಉಪನಾಯಕನ ಸ್ಥಾನದಿಂದ ಹೊರಗೆ ಬಿದ್ದಿದ್ದಾರೆ. ಅವರ ಬ್ಯಾಟ್ ನಿಂದ ದೊಡ್ಡ ಇನ್ನಿಂಗ್ಸ್ ಬಂದಿಲ್ಲ. ತಂಡ ಪ್ರವೇಶಿಸಲು ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಸೂರ್ಯ ಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಿ ಅವಕಾಶಕ್ಕಾಗಿ ಕಾಯುತ್ತಿರುವ ಕಾರಣ, ರಹಾನೆ ಇಲ್ಲಿ ವಿಫಲರಾದರೇ, ಮತ್ತೆ ಅವಕಾಶ ಸಿಗುವುದು ಕಷ್ಟವಾಗಲಿದೆ.

ಎರಡನೆಯದಾಗಿ ಚೇತೇಶ್ವರ ಪೂಜಾರ – ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಸಹ ಮಂಕಾಗಿದ್ದಾರೆ‌. ಭಾರತದ ಪಿಚ್ ಗಳಲ್ಲಿಯೂ ಸಹ ಪೂಜಾರ ಬ್ಯಾಟ್ ರನ್ ಮಾಡುತ್ತಿಲ್ಲ. ಹೀಗಾಗಿ ಪೂಜಾರ ಪಾಲಿಗೆ ಇದೇ ಕೊನೆ ಅವಕಾಶವಾಗಲಿದ್ದು, ಯಶಸ್ವಿಯಾಗದಿದ್ದಲ್ಲಿ, ತಂಡದಿಂದ ಗೇಟ್ ಪಾಸ್ ಪಡೆಯುವುದು ಬಹುತೇಖ ಖಚಿತವಾಗಲಿದೆ.

ಮೂರನೆಯದಾಗಿ ಇಶಾಂತ್ ಶರ್ಮಾ – ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಅಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ದೀರ್ಘಾವಧಿ ಸ್ಪೆಲ್ ಸಹ ಮಾಡಲಾಗುತ್ತಿಲ್ಲ.ಪದೇ ಪದೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಲು ಯುವ ಬೌಲರ್ ಗಳಾದ ಸಿರಾಜ್, ಶಾರ್ದೂಲ್, ಉಮೇಶ್ ಇರುವ ಕಾರಣ, ಇಶಾಂತ್ ಗೆ ಸಹ ಇದೇ ಕೊನೆ ಸರಣಿ ಆಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.