ಕೊಹ್ಲಿ ಯನ್ನು ಏಕದಿನ ಕ್ಯಾಪ್ಟನ್ ನಿಂದ ವಜಾ ಗೊಳಿಸಲು ತೆರೆ ಹಿಂದೆ ಕೆಲಸ ಮಾಡಿದ್ದ ಮೂರು ತ್ರಿಮೂತಿಗಳು ಯಾರ್ಯಾರು ಗೊತ್ತೇ?? ಎಷ್ಟೆಲ್ಲ ಪ್ಲಾನ್ ಆಗಿದೆ ಗೊತ್ತೇ??

ಕೊಹ್ಲಿ ಯನ್ನು ಏಕದಿನ ಕ್ಯಾಪ್ಟನ್ ನಿಂದ ವಜಾ ಗೊಳಿಸಲು ತೆರೆ ಹಿಂದೆ ಕೆಲಸ ಮಾಡಿದ್ದ ಮೂರು ತ್ರಿಮೂತಿಗಳು ಯಾರ್ಯಾರು ಗೊತ್ತೇ?? ಎಷ್ಟೆಲ್ಲ ಪ್ಲಾನ್ ಆಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡದಲ್ಲಿ ನಾಯಕತ್ವ ಬದಲಾದ ಬೆಳವಣಿಗೆಯಲ್ಲಿಯೇ ಈಗ ಆ ಹಿಂದಿನ ಒಂದೊಂದೆ ಕಾರಣಗಳು ಹೊರಬರುತ್ತಿವೆ. ವಿರಾಟ್ ಕೊಹ್ಲಿಯನ್ನ ಏಕದಿನ ನಾಯಕತ್ವದಿಂದ ಕೆಳಗಿಳಿಸಿ, ಆ ಜಾಗಕ್ಕೆ ರೋಹಿತ್ ಶರ್ಮಾ ನೇಮಿಸಿರುವುದು, ಕೇವಲ ಬಿಸಿಸಿಐ ನಿರ್ಧಾರವಲ್ಲ, ಅದರ ಹಿಂದೆ ತ್ರಿಮೂರ್ತಿಗಳು ಸಹ ಕೆಲಸ ಮಾಡಿರುವ ಸತ್ಯ ಈಗ ಹೊರಗೆ ಬಂದಿದೆ.

ಟೀಮ್ ಇಂಡಿಯಾದ ಒಳಗಡೆ ಬಣಗಳಿವೆ, ಗುಂಪುಗಾರಿಕೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಾಗ ಸಚಿನ್ ತೆಂಡೂಲ್ಕರ್ ಒಂದು ಮಾತು ಹೇಳಿದ್ದರು.ರೋಹಿತ್ ಒಬ್ಬ ಉತ್ತಮ ಕ್ರಿಕೇಟರ್. ಎಂತಹದೇ ಒತ್ತಡವಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ತಾಳ್ಮೆ ಹಾಗೂ ಸಮಾಧಾನ ಆತನಿಗಿರುವ ಅತ್ಯುತ್ತಮ ಗುಣಗಳು ಎಂದು. ಸಚಿನ ಪರೋಕ್ಷವಾಗಿ ಅಂದೇ ರೋಹಿತ್ ಪರ ಬ್ಯಾಟ್ ಬೀಸಿದ್ದರು.

ಇನ್ನು ರಾಹುಲ್ ದ್ರಾವಿಡ್ ಸಹ ಕೋಚ್ ಆಗುವ ಮುನ್ನವೇ ವಿರಾಟ್ ಕೊಹ್ಲಿಯ ನಾಯಕತ್ವ ಇರುವ ಕಾರಣ ಹಿಂದೇಟು ಹಾಕಿದ್ದರು. ವಿರಾಟ್ ಹಾಗೂ ಹಿಂದಿನ ಕೋಚ್ ಅನಿಲ್ ಕುಂಬ್ಳೆ ನಡುವೆ ನಡೆದಿದದ್ದ ಮನಸ್ತಾಪಗಳ ಬಗ್ಗೆ ಅರಿವಿದ್ದ ರಾಹುಲ್, ವಿರಾಟ್ ಏಕಪಕ್ಷೀಯ ನಿರ್ಧಾರಗಳು ತಂಡದ ಸಮತೋಲನದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದ್ದರು. ಹಾಗಾಗಿ ನಾಯಕತ್ವ ಬದಲಾವಣೆ ಪರ ದ್ರಾವಿಡ್ ಸಹ ಒಲವು ವ್ಯಕ್ತಪಡಿಸಿದ್ದರಂತೆ.

ಇನ್ನು ಬಿಸಿಸಿಐ ಸಹ ನಾಯಕ ವಿರಾಟ್ ಕೊಹ್ಲಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತಂತೆ. ತಂಡದ ಹಿರಿಯ ಆಟಗಾರರು ದೂರು ನೀಡಿದಾಗಲೇ ನಾಯಕತ್ವ ಇಳಿಸಲು ನಿರ್ಧರಿಸಿತ್ತಂತೆ. ಈ ಸಮಯಕ್ಕೆ ಸರಿಯಾಗಿ ನಾಯಕ ವಿರಾಟ್ ಟಿ 20 ತಂಡದ ನಾಯಕತ್ವ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಆಗ ನಿಮ್ಮ ನಿರ್ಧಾರ ಮರು ಪರೀಶಿಲಿಸಿ ಎಂದು ಬಿಸಿಸಿಐ ವಿನಂತಿಸಿಕೊಂಡರೂ, ವಿರಾಟ್ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಹಾಗಾಗಿ ಬಿಸಿಸಿಐ ಈಗ ವಿರಾಟ್ ಗೆ ಬುದ್ದಿ ಕಲಿಸಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.