ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪುಷ್ಪ ಸಿನೆಮಾ ಮೇಲೆ ಬಾರಿ ನಿರೀಕ್ಷೆ ಇಟ್ಟಿದ್ದ ಅಭಿಮಾನಿಗಳಿಗೆ ಒಮ್ಮೆಲೇ ಶಾಕ್ ನೀಡಿದ ನಿರ್ಮಾಪಕರು. ಒಮ್ಮೆಲೇ ಬಾರಿ ನಿರಾಸೆ. ಏನು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾಗಳಲ್ಲಿ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಕೂಡ ಒಂದಾಗಿದೆ. ಸ್ಟೈಲೀಶ್ ಸ್ಟಾರ್ ಯೂಥ್ ಐಕಾನ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಈಗಾಗಲೇ ಲಿರಿಕಲ್ ಸಾಂಗ್ ಮತ್ತು ಟ್ರೇಲರ್ ನಿಂದ ಸಖತ್ ಸೌಂಡ್ ಮಾಡುತ್ತಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಪುಷ್ಪ ಸಿನಿಮಾದ ಬಗ್ಗೆ ಒಳ್ಳೆ ಟಾಕ್ ಕ್ರಿಯೆಟ್ ಆಗಿದ್ದು, ಇನ್ಸ್ಟಾ ರೀಲ್ಸ್ ನಲ್ಲಿ ಎಂಗ್ ಸ್ಟರ್ಸ್ ಗಳು ಪು಼ಷ್ಪ ಚಿತ್ರದ ಶ್ರೀ ವಲ್ಲಿ ಸಾಂಗ್ ಗೆ ಡ್ಯುಯಟ್ ಕೂಡ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪುಷ್ಪ ಸಿನಿಮಾ ಹವಾ ಕ್ರಿಯೆಟ್ ಮಾಡಿದೆ. ಇತ್ತೀಚೆಗೆ ಪುಷ್ಪ ಸಿನಿಮಾ ಒಂದಲ್ಲ ಒಂದು ವಿಚಾರವಾಗಿ ಭಾರಿ ಸುದ್ದಿ ಮಾಡುತ್ತಿದೆ. ಮೊದಲು ಅಲ್ಲು ಅರ್ಜುನ್ ಲುಕ್ ಮತ್ತು ರಶ್ಮಿಕಾ ಮಂದಣ್ಣ ಅವರ ಡಿ ಗ್ಲಾಮರಸ್ ಲುಕ್ ಕಂಡು ಸಿನಿ ಪ್ರೇಕ್ಷಕರು ಬೋಲ್ಡ್ ಆಗಿದ್ದರು.

ಪುಷ್ಪ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರಡಿಯಲ್ಲಿ ನವೀನ್ ಏರ್ನೇನಿ ವೈ ರವಿಶಂಕರ್ ಅವರು ಬರೋಬ್ಬರಿ 250 ಕೋಟಿ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಕನ್ನಡಿಗ ಜನಪ್ರಿಯ ನಟ ಡಾಲಿ ಧನಂಜಯ್,ಮಲೆಯಾಳಂನ ಖ್ಯಾತ ನಟ ಫಹಾದ್ ಫಾಸಿಲ್,ತೆಲುಗಿನ ಜಗಪತಿ ಬಾಬು,ತಮಿಳಿನ ನಟ ಸುನೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು,ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಮಾಡಿದ್ದಾರೆ.

ಇದೇ ಡಿಸೆಂಬರ್ ತಿಂಗಳ 17 ರಂದು ತೆಲುಗು ಕನ್ನಡ, ತಮಿಳು,ಮಲೆಯಾಳಂ ಮತ್ತು ಹಿಂದಿ ಭಾಷೆ ಸೇರೀದಂತೆ ಪಂಚ ಭಾಷೆಗಳಲ್ಲಿ ಪುಷ್ಪ ಸಿನಿಮಾ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.ಇದೀಗ ಪುಷ್ಪ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಡಿಸೆಂಬರ್ 12 ರಂದು ಹೈದರಾಬಾದಿನ ಯೂಸಫ್ ಘಡ ಪೊಲೀಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಮಾಡಲಾಗುತ್ತದೆ.

ಈ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್, ಮೆಗಾ ಸ್ಟಾರ್ ಚಿರಂಜೀವಿ, ಬಾಲಕೃಷ್ಣ ಅಂತಹ ದಿಗ್ಗಜ ನಟರು ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬಂದಿತ್ತು‌. ಆದರೆ ಇದೀಗ ಪುಷ್ಪ ಸಿನಿಮಾದ ನಿರ್ಮಾಪಕರು ಸುದ್ದಿಗೋಷ್ಠಿ ನಡೆಸಿ ಪುಷ್ಪ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅಂದುಕೊಂಡಂತೆ ಡಿಸೆಂಬರ್ 12 ರಂದು ನಡೆಯಲಿದೆ.

ಆದರೆ ಪ್ರೀ ರಿಲೀಸ್ ಇವೆಂಟ್ ಗೆ ನಮ್ಮ ಪುಷ್ಪ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಹೊರತು ಪಡಿಸಿ ಬೇರೆ ಯಾವ ಸ್ಟಾರ್ ನಟ ಬರುವುದಿಲ್ಲ ಎಂದು ತಿಳಿಸಿದ್ದಾರೆ. ನಮ್ಮ ಪುಷ್ಪ ಚಿತ್ರದ ಪ್ರಮೋಶನ್ ಗೆ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರೊಬ್ಬರೆ ಸಾಕು. ಪುಷ್ಪ ಸಿನಿಮಾ ಗೆಲ್ಲಿಸುವುದಕ್ಕೆ ಅದರ ಪ್ರಮೋಶನ್ ಸ್ಟಾರ್ ಢಮ್ ಅವರಿಗಿದೆ ಎಂದು ಮೈತ್ರಿ ಮೂವಿ ಮೇಕರ್ಸ್ ತಿಳಿಸಿದೆ.

Get real time updates directly on you device, subscribe now.