ಎಲ್ಲವೂ ಚೆನ್ನಾಗಿದೆ ಎಂದು ಕೊಳ್ಳುವಾಗ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಮತ್ತೊಂದು ಶಾಕ್, ಕೋಟಿ ಕೋಟಿ ಬಾಚುವಾಗ ನಡೆದ್ದದೇನು ಗೊತ್ತೇ??

ಎಲ್ಲವೂ ಚೆನ್ನಾಗಿದೆ ಎಂದು ಕೊಳ್ಳುವಾಗ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಮತ್ತೊಂದು ಶಾಕ್, ಕೋಟಿ ಕೋಟಿ ಬಾಚುವಾಗ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ನವೆಂಬರ್ ತಿಂಗಳು 19 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡು ಉತ್ತಮ ಮೆಚ್ಚುಗೆ ಪಡೆದುಕೊಂಡಿರುವ ರಾಜ್.ಬಿ.ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭ ವಾಹನ ಸಿನಿಮಾ ತಂಡಕ್ಕೆ ಇದೀಗ ಕಾನೂನಿನ ಕಂಟಕ ಎದುರಾಗಿದೆ. ಹೌದು ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಕಾಣಬಹುದಾಗಿರುತ್ತದೆ. ಆದರೆ ಈ ಹೊಸ ಪ್ರಯೋಗಾತ್ಮಕ ಚಿತ್ರಗಳಲ್ಲಿ ಅರಿಯದೆ ಒಂದಷ್ಟು ವಿವಾದಾತ್ಮಕ ಅಂಶಗಳು ಕೂಡ ಸೇರಿಕೊಂಡಿರುತ್ತವೆ.

ಯಾವುದೇ ನಿರ್ದೇಶಕರು ಉದ್ದೇಶಪೂರಿತವಾಗಿ ಕೆಲವು ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡಬೇಕು ಎಂದು ಕೆಲವು ದೃಶ್ಯ ಸನ್ನಿವೇಶಗಳನ್ನು ಎಣೆಯುವುದಿಲ್ಲ. ಆದು ಆ ಪಾತ್ರಕ್ಕೆ ಆ ಸಂಧರ್ಭಕ್ಕೆ ಅಗತ್ಯ ಎಂದಷ್ಟೇ ಪೂರ್ವ ಯೋಜನೆಯಾಗಿ ದೃಶ್ಯಗಳನ್ನ ಅಥವಾ ಸಾಹಿತ್ಯ, ಸಂಭಾಷಣೆಗಳನ್ನು ಬಳಸಿಕೊಳ್ಳಲಾಗಿರುತ್ತದೆ. ಅಂತೆಯೇ ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಗರುಡ ಗಮನ ವೃಷಭ ವಾಹನ ಎಂಬ ಪ್ರಾದೇಶಿಕ ಗ್ಯಾಂಗ್ ಸ್ಟರ್ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಸಿನಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿದೆ.

ಆದರೂ ಕೂಡ ರಾಜ್ ಬಿ ಶೆಟ್ಟಿ ನಿರ್ವಹಿಸಿರುವ ಶಿವ ಎಂಬ ಪಾತ್ರ ಒಬ್ಬರನ್ನು ಮುಗಿಸಿ ವಿಕೃತವಾಗಿ ಡಾನ್ಸ್ ಮೇರೆಯುವ ದೃಶ್ಯವೊಂದರಲ್ಲಿ ಜಾನಪದ ಮಹದೇಶ್ವರ ಸ್ವಾಮಿಯ ಸೋಜುಗಾದ ಸೂಜಿ ಮಲ್ಲಿಗೆ ಹಾಡನ್ನ ಹಿನ್ನೆಲೆಯಾಗಿ ಬಳಸಿದ್ದಾರೆ. ಇದು ಮಹದೇಶ್ವರ ಸ್ವಾಮಿಯ ಭಕ್ತರ ಭಾವನೆಗೆ ದಕ್ಕೆ ಉಂಟು ಮಾಡಿದೆ ಎಂದು ದೂರು ಗರುಡ ಗಮನ ವೃಷಭ ವಾಹನ ಚಿತ್ರತಂಡದ ಮೇಲೆ ದೂರು ದಾಖಲಾಗಿದೆ. ಜೊತೆಗೆ ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ ಹಾಡು ಕೂಡ ಶಿವ ಭಕ್ತರ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂಬ ಅಪಸ್ವರ ಕೂಡ ಕೇಳಿ ಬಂದಿದೆ. ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಮಾದೇವ ಮಾದೇವ ಹಿನ್ನೆಲೆ ಸಂಗೀತದಲ್ಲಿ ರಾಜ್ ಬಿ ಶೆಟ್ಟಿ ಮೈ ಮರೆತು ನೃತ್ಯ ಮಾಡುತ್ತಿರುವ ದೃಶ್ಯ ಸನ್ನಿವೇಶ ಹೊಂದಿದ ಹಾಡು ಯೂ ಟ್ಯೂಬ್ ನಲ್ಲಿ ದಾಖಲೆ ಮಟ್ಟದಲ್ಲಿ ವೀಕ್ಷಣೆ ಕಂಡು ಜನಪ್ರಿಯವಾಗಿತ್ತು.

ಈ ದೃಶ್ಯಗಳಲ್ಲಿ ಶಿವನ ಗೀತೆಗಳನ್ನ ಬಳಸಿಕೊಂಡಿರುವುದು ತಪ್ಪು ಎಂದು ಸಾಲೂರು ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ವಿಜಯ್ ಕುಮಾರ್ ಅವರು ಬೆಂಗಳೂರಿನ ಸಿಟಿ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಈ ಗರುಡ ಗಮನ ವೃಶಭ ವಾಹನ ಸಿನಿಮಾದ ಮಹದೇಶ್ವರ ಸ್ವಾಮಿಯ ಜಾನಪದ ಹಾಡಾಗಿರುವ ಸೋಜುಗಾದ ಸೂಜಿಮಲ್ಲಿಗೆ ಹಾಡನ್ನ ಬಳಸಿ ಕೌರ್ಯ ಮೆರೆದು ನೃತ್ಯ ಮಾಡುತ್ತಿರುವ ದೃಶ್ಯವನ್ನು ತೆಗೆದಾಕಬೇಕು ಅಥವಾ ಹಿನ್ನೆಲೆ ಸಾಹಿತ್ಯ ಸಂಗೀತವನ್ನು ಮ್ಯೂಟ್ ಮಾಡಬೇಕು ಎಂದು ಸೂಚಿಸಿ ಚಿತ್ರತಂಡದ ವಿರುದ್ದ ದಾಖಲಿಸಿದ್ದರು.