ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ವಿರಾಟ್ ಗೆ ಮತ್ತೊಂದು ಶಾಕ್, ಕೊಹ್ಲಿ ನಿರ್ಮಿಸಿದ್ದ ನಿಯಮವನ್ನು ಬದಲಾಯಿಸಿದ ದ್ರಾವಿಡ್. ಏನು ಗೊತ್ತೇ??

ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ವಿರಾಟ್ ಗೆ ಮತ್ತೊಂದು ಶಾಕ್, ಕೊಹ್ಲಿ ನಿರ್ಮಿಸಿದ್ದ ನಿಯಮವನ್ನು ಬದಲಾಯಿಸಿದ ದ್ರಾವಿಡ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆದ ನಂತರ ಭಾರತ ತಂಡದಲ್ಲಿ ಹಲವಾರು ಬದಲಾವಣೆಗಳು ಕಾಣಿಸುತ್ತಿವೆ. ಈ ಹಿಂದೆ ಕೋಚ್ ಆಗಿದ್ದ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿ, ಹಿಂದಿನ ಕೋಚ್ ಅನಿಲ್ ಕುಂಬ್ಳೆ ಜಾರಿಗೆ ತಂದಿದ್ದ ಒಂದು ನಿಯಮವನ್ನ ಕಡೆಗಣಿಸಿತ್ತು. ಆ ನಿಯಮದ ಪ್ರಕಾರ, ಅನರ್ಹ ಅಥವಾ ಕಳಪೆ ಫಾರ್ಮ್ ಹೊಂದಿರುವ ಆಟಗಾರ ದೇಶಿ ಕ್ರಿಕೇಟ್ ಗೆ ತೆರಳಿ, ಅಲ್ಲಿ ಆಡಿ ಫಾರ್ಮ್ ಸಾಬೀತುಪಡಿಸಬೇಕಿತ್ತು. ಆಗ ಮಾತ್ರ ಪುನಃ ರಾಷ್ಟ್ರೀಯ ತಂಡಕ್ಕೆ ಸೇರಬಹುದು ಎಂದು ನಿಯಮ ರೂಪಿಸಲಾಗಿತ್ತು. ಆದರೇ ರವಿಶಾಸ್ತ್ರಿ ಕೋಚ್ ಆದ ನಂತರ ಈ ನಿಯಮವನ್ನ ಸಂಪೂರ್ಣ ಗಾಳಿಗೆ ತೂರಲಾಗಿತ್ತು.

ರವಿಶಾಸ್ತ್ರಿ-ವಿರಾಟ್ ಜೋಡಿ ಕ್ರಿಕೇಟ್ ನಲ್ಲಿ ಯಶಸ್ವಿಯಾದರೂ, ಕೆಲವು ಆಟಗಾರರಿಗೆ ಹೆಚ್ಚು ಅವಕಾಶ ನೀಡಿದ್ದರು. ಉದಾಹರಣೆಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಐಪಿಎಲ್ ವೇಳೆ ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ರಣಜಿ ಕ್ರಿಕೇಟ್ ಆಡದೇ ತಮ್ಮ ಪೂರ್ವ ದಾಖಲೆಗಳೊಂದಿಗೆ ರಾಷ್ಟ್ರೀಯ ತಂಡ ಸೇರಿಕೊಂಡರೂ, ಅವರು ಕಳಪೆ ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನ ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ಕೈ ಬಿಡಲಾಗಿತ್ತು.

ಹಾಗಾಗಿ ಈಗ ಕುಂಬ್ಳೆ ನಿಯಮವನ್ನ ಮತ್ತೆ ಜಾರಿಗೆ ತಂದಿರುವ ರಾಹುಲ್ ದ್ರಾವಿಡ್, ಕಳಪೆ ಫಾರ್ಮ್ ನಿಂದ ತಂಡದಿಂದ ಹೊರ ಹೋಗಿರುವ ಆಟಗಾರರು, ದೇಶಿಯ ಕ್ರಿಕೇಟ್ ನಲ್ಲಿ ಆಡಿ ಮತ್ತೆ ತಮ್ಮ ಫಾರ್ಮ್ ಹಾಗೂ ಫಿಟ್ ನೆಸ್ ನ್ನು ಖಚಿತಪಡಿಸಬೇಕು. ಹಾಗಾದಾಗ ಮಾತ್ರ ಪುನಃ ರಾಷ್ಟ್ರೀಯ ತಂಡಕ್ಕೆ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಹಾಗಾಗಿ ಇನ್ಮುಂದೆ ಭಾರತ ತಂಡದಲ್ಲಿ ಸ್ಥಾನಗಳಿಸಬೇಕೆಂದರೇ ಆಟಗಾರರು ಉತ್ತಮ ಫಾರ್ಮ್ ನಲ್ಲಿರಬೇಕು ಹಾಗೂ ಕಡ್ಡಾಯವಾಗಿ ಫಿಟ್ ಆಗಿರಬೇಕು. ಹಾಗಾಗಿ ಭಾರತ ತಂಡದಲ್ಲಿ ಇನ್ಮುಂದೆ ನಾಮಬಲದೊಂದಿಗೆ ತಂಡದಲ್ಲಿ ಸ್ಥಾನ ಗಳಿಸುವುದು ಕಷ್ಟವಾಗಬಹುದು. ರಾಹುಲ್ ದ್ರಾವಿಡ್ ತಂದಿರುವ ಈ ನಿಯಮದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.