ಬಿಗ್ ನ್ಯೂಸ್: ಬಿಪಿನ್ ರಾವತ್ ರವರ ಹೆಲಿಕ್ಯಾಪ್ಟರ್ ಪತನ ಪ್ರಕರಣದ ತನಿಖೆಯನ್ನು ಯಾರ ಹೆಗಲಿಗೆ ಹೊರಿಸಿದ್ದಾರೆ ಗೊತ್ತೇ??

ಬಿಗ್ ನ್ಯೂಸ್: ಬಿಪಿನ್ ರಾವತ್ ರವರ ಹೆಲಿಕ್ಯಾಪ್ಟರ್ ಪತನ ಪ್ರಕರಣದ ತನಿಖೆಯನ್ನು ಯಾರ ಹೆಗಲಿಗೆ ಹೊರಿಸಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿನ್ನೆಯ ದಿನ ಖಂಡಿತವಾಗಿಯೂ ಭಾರತೀಯ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಭಾರತೀಯ ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ರವರನ್ನು ಸೇರಿದಂತೆ 14 ಜನರನ್ನು ಹೊತ್ತುಕೊಂಡು ಗಗನದೆತ್ತರಕ್ಕೆ ಚಿಮ್ಮಿದ ಹೆಲಿಕಾಪ್ಟರ್ ಬೂದಿಯಾಗಿ ಮಣ್ಣನ್ನು ಸೇರಿತ್ತು ವೆಂದರೆ ಈಗಲೂ ಕೂಡ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ.

ಇನ್ನು ಈ ವಿಚಾರದ ಕುರಿತಂತೆ ಕೇಂದ್ರ ಗೃಹಮಂತ್ರಿ ಗಳಾಗಿರುವ ರಾಜನಾಥ್ ಸಿಂಗ್ ಅವರು ಕೂಡ ಲೋಕಸಭಾ ಕಲಾಪದಲ್ಲಿ ವಿವರ ನೀಡಿ ಮಾತನಾಡಿ ಶ್ರದ್ಧಾಂಜಲಿಯನ್ನು ಸೂಚಿಸಿದ್ದಾರೆ. ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 14 ಜನರನ್ನು ಹೊಂದಿದ್ದ ಹೆಲಿಕಾಪ್ಟರ್ ಸೂಲೂರು ವಾಯು ನೆಲೆಯಿಂದ ಟೇಕಾಫ್ ಆಗಿ ಕೂನೂರು ಬಳಿ ಪತನವಾಗಿದೆ. ಇನ್ನು 11:48ರ ಸುಮಾರಿಗೆ ಆಕಾಶದೆತ್ತರಕ್ಕೆ ಚಿಮ್ಮಿದ ಹೆಲಿಕಾಪ್ಟರ್ 12.08 ರ ಸುಮಾರಿಗೆ ನಿಯಂತ್ರಣವನ್ನು ಕಳೆದುಕೊಂಡು ನೆಲಕ್ಕಪ್ಪಳಿಸಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ಹೆಲಿಕಾಪ್ಟರ್ನಲ್ಲಿ ಇದ್ದಂತಹ 14 ಜನರಲ್ಲಿ 13 ಜನರು ಇಹಲೋಕ ತ್ಯಜಿಸಿದ್ದಾರೆ. ಇದರಲ್ಲಿ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಸೈನ್ಯದ ಹಲವಾರು ಅಧಿಕಾರಿಗಳು ಇದ್ದರು.

ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿದ ಕೂಡಲೇ ಅಲ್ಲಿದ್ದ ಸ್ಥಳೀಯರು ಎಲ್ಲಾ ಗಣ್ಯರನ್ನು ಕೂಡ ರಕ್ಷಿಸಿಕೊಳ್ಳುವ ಪ್ರಯತ್ನವಾಗಿ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆ ಗೆ ದಾಖಲಿಸಿದರು ಕೂಡ ಎಲ್ಲರನ್ನೂ ಉಳಿಸಿಕೊಳ್ಳಲು ಆಗಲಿಲ್ಲ. ಇನ್ನು ಸದ್ಯಕ್ಕೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದು ಅವರು ಕೂಡ ಗಂಭೀರ ಸ್ಥಿತಿಯಲ್ಲಿದ್ದಾರೆ. ಇನ್ನು ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಇದರ ತನಿಖೆ ಭೂಸೇನೆ ವಾಯುಸೇನೆ ಹಾಗೂ ನೌಕಾಸನ ಮೂರು ಸೇನೆಗಳಿಂದಲೂ ಕೂಡ ನಡೆಯಲಿದೆ ಎಂಬುದಾಗಿ ಸೂಚಿಸಿದೆ. ದೇಶ ಕಂಡಂತಹ ಅತ್ಯುತ್ತಮ ಸೇನಾ ನಾಯಕರಲ್ಲಿ ಒಬ್ಬರಾಗಿರುವ ಬಿಪಿನ್ ರಾವತ್ ರವರನ್ನು ಕಳೆದುಕೊಂಡಿರುವ ದುಃಖ ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯನಲ್ಲಿ ನಿನ್ನೆ ಕಂಡು ಬಂದಿತ್ತು.