ಬುಮ್ರಾ ಅಲ್ಲ, ಈತನೇ ವಿಶ್ವದ ಉತ್ತಮ ಬೌಲರ್ ಆಗುತ್ತಾನೆ ಎಂದು ಯುವ ಬೌಲರ್ ಅನ್ನು ಹಾಡಿಹೊಗಳಿದ ಲಕ್ಷಣ್, ಯಾರಂತೆ ಗೊತ್ತೇ??

ಬುಮ್ರಾ ಅಲ್ಲ, ಈತನೇ ವಿಶ್ವದ ಉತ್ತಮ ಬೌಲರ್ ಆಗುತ್ತಾನೆ ಎಂದು ಯುವ ಬೌಲರ್ ಅನ್ನು ಹಾಡಿಹೊಗಳಿದ ಲಕ್ಷಣ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಸರಣಿ ಮುಕ್ತಾಯಗೊಂಡಿದೆ. ಭರ್ಜರಿ ಜಯಗಳಿಸಿರುವ ಭಾರತ ತಂಡ ಈಗ ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ಸಿದ್ದವಾಗುತ್ತಿದೆ. ಒಂದೆರೆಡು ದಿನಗಳೊಳಗೆ ಮಹತ್ವದ ಸರಣಿಗೆ ಭಾರತ ತಂಡ ಪ್ರಕಟಗೊಳ್ಳಲಿದೆ. ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ತಂಡ ಆಡಲಿದೆ. ಈ ನಡುವೆ ಹೈದರಾಬಾದ್ ನ ಕಲಾತ್ಮಕ ಬ್ಯಾಟ್ಸಮನ್ ವಿ.ವಿ.ಎಸ್.ಲಕ್ಷ್ಮಣ್ ಭಾರತ ತಂಡದ ಯುವ ವೇಗಿಯನ್ನು ಮನಸಾರೆ ಹೊಗಳಿದ್ದು, ಆತ ಭಾರತ ತಂಡದ ಭವಿಷ್ಯ, ಆಸ್ತಿ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಲಕ್ಷ್ಮಣ್ ರಿಂದ ಹೊಗಳಿಕೆ ಸ್ವೀಕರಿಸಿದ ಬೌಲರ್ ಬೇರಾರೂ ಅಲ್ಲ. ಅದು ಹೈದರಾಬಾದ್ ನ ಮತ್ತೊಬ್ಬ ವೇಗಿ ಮಹಮದ್ ಸಿರಾಜ್. ಸಿರಾಜ್ ಮುಂಬೈ ಟೆಸ್ಟ್ ನಲ್ಲಿ ಸ್ಪಿನ್ನರ್ ಗಳಿಗೆ ಪಿಚ್ ಸಹಕರಿಸುತ್ತಿದ್ದರು, ತಮ್ಮ ವೇಗದ ಹಾಗೂ ಬುದ್ದಿವಂತಿಕೆ ಬೌಲಿಂಗ್ ನಿಂದ ನ್ಯೂಜಿಲೆಂಡ್ ತಂಡದ ಬೆನ್ನೆಲುಬನ್ನ ಮುರಿದಿದ್ದರು. ಲಾಥಮ್, ಯಂಗ್,ರಾಸ್ ಟೇಲರ್ ರಂತಹ ಪ್ರಮುಖ ವಿಕೇಟ್ ಕಬಳಿಸಿ ಭಾರತ ತಂಡಕ್ಕೆ ಪ್ರಮುಖ ಮುನ್ನಡೆ ತಂದು ಕೊಟ್ಟರು. ತಮ್ಮ ಸುಂದರ ಶಾರ್ಟ್ ಪಿಚ್ ಎಸೆತದಿಂದ ಲಾಥಮ್ ವಿಕೇಟ್ ಪಡೆದರು. ಇದು ಆ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದರು.

ಸಿರಾಜ್ ವೇಗವಾಗಿ ಪಿಚ್ ಬಳಿ ಓಡಿ ಬಂದು ಉತ್ತಮ ಲೈನ್ ನಲ್ಲಿ ಬೌಲಿಂಗ್ ಮಾಡುತ್ತಾರೆ. ಅದಲ್ಲದೇ ಆಡುವ ಅವಕಾಶ ಸಿಗುವುದೇ ಕಡಿಮೆ. ಸಿಕ್ಕಾಗಲೆಲ್ಲಾ ತಾವೆಷ್ಟು ಪರಿಣಾಮಕಾರಿ ಎಂದು ರೂಪಿಸಿದ್ದಾರೆ. ಶಮಿ, ಬುಮ್ರಾ, ಇಶಾಂತ್ ರ ಅನುಪಸ್ಥಿತಿಯಲ್ಲಿ ಕಳೆದ ಭಾರಿ ಆಸ್ಟ್ರೇಲಿಯಾದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದರು. ಇದರಿಂದ ಭಾರತ ಐತಿಹಾಸಿಕ ಟೆಸ್ಟ್ ಜಯಿಸುವುದಕ್ಕೆ ಕಾರಣವಾಯಿತು ಎಂದು ಹೇಳಿದರು. ಭಾರತ ತಂಡದಲ್ಲಿ ಯುವ ವೇಗಿಗೆ ಇನ್ನಷ್ಟು ಅವಕಾಶ ನೀಡಬೇಕು. ಆಗ ಮಾತ್ರವೇ ಮಹಮದ್ ಸಿರಾಜ್ ಸಹ ಜಸಪ್ರಿತ್ ಬುಮ್ರಾರಂತೆ ಉತ್ತಮ ವೇಗದ ಬೌಲರ್ ಆಗಿ ಬೆಳೆಯುತ್ತಾರೆ ಎಂದು ಹೇಳಿದರು. ಸದ್ಯ ಇಶಾಂತ್, ಉಮೇಶ್,ಶಮಿ ರವರ ವಯಸ್ಸು ಮೂವತ್ತರ ಮೇಲಿರುವುದರಿಂದ ಇಶಾಂತ್ ಬದಲು ಹೆಚ್ಚು ಅವಕಾಶ ಸಿರಾಜ್ ಗೆ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.