ದೂರದ ಪಂಜಾಬ್ ದಲ್ಲಿ ಐಪಿಎಲ್ ಕೆಲಸದಲ್ಲಿ ಬ್ಯುಸಿ ಆಗಿದ್ದರೂ ಶಿವರಾಂ ರವರ ಕುರಿತಂತೆ ಅಪರೂಪದ ಮಾಹಿತಿಯನ್ನು ಹಂಚಿಕೊಂಡ ಅನಿಲ್ ಕುಂಬ್ಳೆ. ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೇ ಕನ್ನಡ ಚಿತ್ರರಂಗ ಹಲವಾರು ಮರಣದ ವಾರ್ತೆಗಳನ್ನು ಕೇಳಿ ಸುಸ್ತಾಗಿದ್ದ ಸಂದರ್ಭದಲ್ಲಿ ಮತ್ತೊಂದು ಮರಣದ ವಾರ್ತೆ ಕೇಳಿ ಬಂದಿದೆ. ಹೌದು ಮೊನ್ನೆಯಷ್ಟೇ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಶಿವರಾಂ ರವರನ್ನು ನಾವು ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾಗಿದ್ದ ಶಿವರಾಂ ಅವರು ಮೊನ್ನೆಯಷ್ಟೇ ಅಯ್ಯಪ್ಪನ ಪೂಜೆ ಮಾಡುತ್ತಿರಬೇಕಾದರೆ ಕುಸಿದುಬಿದ್ದು ನಿಧನರಾಗಿದ್ದರು.

ಇನ್ನು ಈಗಾಗಲೇ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಇಂದ ಹಾಗೂ ರಾಜ್ಯದ ಹಲವಾರು ಗಣ್ಯರಿಂದ ಶಿವರಾಮ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇನ್ನು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಹಲವಾರು ಗಣ್ಯರು ತಮ್ಮ ಸಂತಾಪವನ್ನು ಕೂಡ ಸೂಚಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಆದಂತಹ ಅನಿಲ್ ಕುಂಬ್ಳೆ ಅವರು ಕೂಡ ಶಿವರಾಂ ರವರನ್ನು ಸ್ಮರಿಸಿದ್ದಾರೆ. ಇನ್ನು ಅನಿಲ್ ಕುಂಬ್ಳೆ ಅವರು ಶಿವರಾಂ ರವರೊಂದಿಗೆ ಇದ್ದ ಸಂಬಂಧವನ್ನು ಕೂಡ ಹಾಗೂ ಅವರು ಸಿಕ್ಕಾಗಲೆಲ್ಲ ತೋರಿಸುತ್ತಿದ್ದ ಪ್ರೀತಿಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಶಿವರಾಂ ಅವರಿಗಿದ್ದ ಸ್ಟಾಂಪ್ ಕಲೆಕ್ಷನ್ ಗ್ರಂಥಾಲಯ ಪುಸ್ತಕಗಳು ಫೋಟೋಗ್ರಫಿ ಮೇಲೆ ಇರುವಂತಹ ಅತೀವವಾದ ಪ್ರೀತಿಯ ಹುರಿದಂತೆ ಈ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಅವರು ಹಂಚಿಕೊಂಡಿದ್ದು ಮಾತ್ರವಲ್ಲದೆ ನಮ್ಮ ಕುಟುಂಬಕ್ಕೆ ಬಹಳಷ್ಟು ಬೇಕಾದವರು ಶಿವರಾಂ ರವರು ಎಂಬುದಾಗಿ ಕೂಡ ಹೇಳಿದ್ದಾರೆ. ನಾನು ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಕೂಡ ನಮ್ಮನ ಸಾಕಷ್ಟು ಹುರಿದುಂಬಿಸುತ್ತಿದ್ದರು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ನನ್ನ ಬಳಿ ಅರಣ್ಯಕ್ಕೆ ಹೋಗಿ ಫೋಟೋಗ್ರಫಿ ಮಾಡೋಣ ಎಂಬುದಾಗಿ ಹೇಳಿದ್ದರಾದರೂ ಅವರ ಆಸೆ ಕೊನೆಗೂ ಕೂಡ ಈಡೇರಲೇ ಇಲ್ಲ ಎಂಬುದಾಗಿ ಕೂಡಾ ದುಃಖವನ್ನು ಹೊರಹಾಕಿದ್ದಾರೆ. ಶಿವರಾಂ ರವರ ಅಗಲಿಕೆ ಯಿಂದಾಗಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎದುರಾಗಿದೆ ಎಂಬುದನ್ನು ಕೂಡ ಇಲ್ಲಿ ವ್ಯಕ್ತಪಡಿಸಿದ್ದಾರೆ.

Post Author: Ravi Yadav