ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಹಿಳೆಯರನ್ನು ಕೆಣಕಿದರೆ ಮಹಾಭಾರತದಂತೆ ಯುದ್ಧ ನಡೆಯುತ್ತದೆ, ಆದರೆ ಮಹಿಳೆಯರು ದ್ರೌಪದಿ ಹೇಳಿದ ಈ ಮಾತುಗಳನ್ನು ಮರೆಯಲೇಬಾರದು. ಯಾವ್ಯಾವು ಗೊತ್ತೇ??

29

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಂದು ಸಂಸಾರ ಚೆನ್ನಾಗಿರಬೇಕೆಂದರೆ ಆ ಸಂಸಾರದ ಹೆಣ್ಣುಮಗಳು ಅಂದರೆ ಹೆಂಡತಿ ಸಾಕಷ್ಟು ಗುಣವಂತ ಹಾಗೂ ಎಲ್ಲಾ ವಿಚಾರದಲ್ಲಿ ಕೂಡಾ ಸದ್ಗುಣ ಸಂಪನ್ನೆ ಆಗಿರಬೇಕು. ಇನ್ನು ಒಂದು ಸಂಸಾರದಲ್ಲಿ ಹೇಗಿರಬೇಕು ಎಂಬುದಾಗಿ ಮಹಾಭಾರತ ಸಮಯದಲ್ಲಿ ದ್ರೌಪದಿ ಸತ್ಯಭಾಮೆಗೆ ಹೇಳಿದ್ದಾರೆ. ಅದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ಇದನ್ನು ಪ್ರತಿಯೊಬ್ಬ ಗ್ರಹಸ್ಥ ಮಹಿಳೆ ಅನುಸರಿಸಲೇಬೇಕು. ಇದನ್ನು ಅನುಸರಿಸಿದರೆ ಖಂಡಿತವಾಗಿ ನಿಮ್ಮ ಸಂಸಾರ ಸುಖ ಸಂಸಾರ ಕ್ಕಿಂತ ಹೆಚ್ಚಾಗಿ ಸ್ವರ್ಗ ಸಂಸಾರ ಆಗಿರುತ್ತದೆ.

ಮೊದಲನೆಯದಾಗಿ ಮದುವೆಯಾದ ಮೇಲೆ ಮೊದಲಿಗೆ ನಮ್ಮ ಗಂಡನ ಮನೆಯ ಎಲ್ಲಾ ಸಂಬಂಧಿಕರ ಬಗ್ಗೆ ನಾವು ಸವಿವರವಾಗಿ ತಿಳಿದುಕೊಂಡಿರಬೇಕು. ಒಬ್ಬರ ವಿಚಾರವನ್ನು ಕೂಡ ಬಿಡಬಾರದು. ಹೀಗೆ ಗಂಡನ ಮನೆಯ ಎಲ್ಲ ಸಂಬಂಧಿಕರ ಕುರಿತಂತೆ ವಿವರವಾಗಿ ತಿಳಿದುಕೊಳ್ಳುವುದರಿಂದ ಮುಂದಿನ ದಿನದಲ್ಲಿ ನಾವು ಅವರು ಬಂದಾಗ ಆದರಾತಿಥ್ಯವನ್ನು ಮಾಡಬಹುದಾಗಿದೆ. ಇದರಿಂದಾಗಿ ಸಂಸಾರದಲ್ಲಿ ಎಲ್ಲರಿಗೂ ಕೂಡ ಸಂತೋಷವಾಗುತ್ತದೆ.

2 ಮುಖ್ಯವಾಗಿ ಸಂಬಂಧದಲ್ಲಿ ಎಲ್ಲರಿಗೂ ಇಷ್ಟವಾಗುವ ಮಾತುಗಳನ್ನು ಆಡಬೇಕು. ಬದಲಾಗಿ ಅವರಿಗೆ ದುಃಖವಾಗುತ್ತಿದೆ ಎಂದು ಅನಿಸಿದರೆ ಆ ಮಾತನ್ನು ಖಂಡಿತವಾಗಿ ಎಂದಿಗೂ ಕೂಡ ಆಡಲು ಹೋಗಬೇಡಿ. ಒಂದು ವೇಳೆ ಆಡಿದರೆ ಸಂಬಂಧದಲ್ಲಿ ಬಿರುಕು ಮೂಡುವ ಎಲ್ಲಾ ಸಾಧ್ಯತೆಗಳು ಕೂಡ ದಟ್ಟವಾಗಿರುತ್ತದೆ. ಮೂರನೆಯದಾಗಿ ತಮ್ಮ ಪತಿಯನ್ನು ತಮ್ಮ ವರ್ಷವನ್ನಾಗಿ ಮಾಡಿಕೊಳ್ಳಲು ತಂತ್ರ ಮಂತ್ರ ಹಾಗೂ ಮದ್ದುಗಳನ್ನು ಉಪಯೋಗಿಸುತ್ತಾರೆ ಕೆಲವು ಮಹಿಳೆಯರು. ಎಂದಿಗೂ ಹೀಗೆ ಮಾಡಬೇಡಿ ಯಾಕೆಂದರೆ ಒಂದುವೇಳೆ ನಿಮ್ಮ ಪತಿಗೆ ತಿಳಿದರೆ ಸಂಸಾರವೊಂದು ಹಾಳಾಗಿ ಹೋಗುತ್ತದೆ ಅದರ ಜೊತೆಗೆ ಇದರ ಪಾಪವು ಕೂಡ ನಿಮ್ಮ ಮೇಲೆ ಬರುತ್ತದೆ.

ನಾಲ್ಕನೆಯದಾಗಿ ಒಂದು ಸಂಸಾರದ ಮುಕುಟ ವಾಗಿ ಮನೆಯ ಸೊಸೆ ಸಮಾಜದಲ್ಲಿ ಕಂಡುಬರುತ್ತಾಳೆ. ಹೀಗಾಗಿ ಮನೆಯ ಸೊಸೆ ಅಪರಿಚಿತರೊಂದಿಗೆ ಎಂದಿಗೂ ಕೂಡ ಮಾತನಾಡಬಾರದು. ಐದನೆಯದಾಗಿ ಗಂಡನ ಮನೆಯಲ್ಲಿ ಗಂಡನನ್ನು ಹೊರತುಪಡಿಸಿ ಮನೆಯವರೆಲ್ಲರನ್ನೂ ಕೂಡ ಮೆಚ್ಚಿಸಬೇಕಾಗುತ್ತದೆ. ಇನ್ನು ಇಷ್ಟು ಮಾತ್ರವಲ್ಲದೆ ಗಂಡನ ಮನೆಯವರನ್ನು ಕೂಡ ನಿಂದಿಸಬಾರದು ಇದರಿಂದಾಗಿ ನಿಮ್ಮ ಮರ್ಯಾದೆ ಅನ್ನುವುದು ಆ ಮನೆಯಲ್ಲಿ ಕ್ಷಣಿಸಿ ಹೋಗುತ್ತದೆ.

ಆರನೆಯದಾಗಿ ಎಲ್ಲದಕ್ಕಿಂತ ಹೆಚ್ಚಿನದಾಗಿ ಮಹಿಳೆಯರು ಕೆಟ್ಟ ಆಚರಣೆಯನ್ನು ಹಾಗೂ ಧೋರಣೆಯನ್ನು ಹೊಂದಿರುವ ಮಹಿಳೆಯರ ಸಂಗವನ್ನು ಮಾಡಲೇಬಾರದು. ಇದರಿಂದಾಗಿ ನಿಮ್ಮ ಮನೆಯ ಪರಿಸರವೂ ಕೂಡ ಕಲುಷಿತಗೊಳ್ಳುತ್ತದೆ. ಹೀಗಾಗಿ ಇಂತಹ ಚರಿತ್ರಹೀನ ಮಹಿಳೆಯರಿಂದ ದೂರವಿರಿ. ಏಳನೆಯದಾಗಿ ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಯಾವತ್ತೂ ಕೂಡ ಆಲಸ್ಯದಿಂದ ಹಾಗೂ ನಿರ್ಲಕ್ಷದಿಂದ ಇಂದಿಗೂ ಕೂಡ ಇರಬಾರದು. ಒಂದು ವೇಳೆ ಹೀಗೆ ಇದ್ದರೆ ಮನೆಯಲ್ಲಿ ಅನ್ನ ಹಾಗೂ ಧನದ ಅಭಾವ ಎದ್ದು ಬರುತ್ತದೆ.

ಎಂಟನೆಯದಾಗಿ ಇನ್ನು ಮನೆಯ ಸೊಸೆ ಎಂದಿಗೂ ಕೂಡ ಮನೆಯ ಬಾಗಿಲಿನಿಂದ ಅಥವಾ ಕಿಟಕಿಯಿಂದ ಹೊರಗೆ ನೋಡುವುದನ್ನು ಮಾಡಲೇಬಾರದು ಇದರಿಂದ ಸಮಾಜದಲ್ಲಿ ಆಕೆಯ ಕುರಿತಂತೆ ಸಮಾಚಾರಗಳು ಹರಡುತ್ತದೆ. ಈ ಎಲ್ಲ ವಿಚಾರಗಳನ್ನು ಮನೆಯ ಸೊಸೆಯಾದವಳು ಖಂಡಿತವಾಗಿಯೂ ಆಚರಿಸಿಕೊಂಡು ಹೋಗಬೇಕು ಇಲ್ಲವಾದರೆ ಮನೆ ಸುಖ ಸಂತೋಷ ನೆಮ್ಮದಿ ಇಲ್ಲದೆ ಬರಿದಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.