ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪು ಗಾಗಿ ವಿಶೇಷ ಕಾರ್ಯ ಮಾಡಲು ಮುಂದಾದ ರೈತ, ನಾನು ಯಾರನ್ನು ಕೇಳುವಂತಿಲ್ಲ, ಇದು ನನ್ನದು ಅಪ್ಪುಗಾಗಿ ಕೊಡುತ್ತೇನೆ ಎಂದು ಮಾಡಿದ ಘೋಷಣೆ ಏನು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನು ಕಳೆದುಕೊಂಡು ಈಗಾಗಲೇ ತಿಂಗಳು ಪೂರ್ತಿ ಆಗಿದ್ದರೂ ಕೂಡ ಅವರನ್ನು ಇಂದಿಗೂ ಕೂಡ ಕಳೆದು ಕೊಂಡಿದ್ದೇವೆ ಎನ್ನುವ ಸತ್ಯವನ್ನು ಯಾರಿಂದಲೂ ಕೂಡ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಮಕ್ಕಳಿಂದ ಹಿರಿಯ ವರೆಗೂ ಎಲ್ಲರ ಮನಸ್ಸನ್ನು ಕೂಡ ಗೆದ್ದಿದ್ದರು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು. ಕರ್ನಾಟಕ ಕಂಡಂತಹ ಶ್ರೇಷ್ಠ ವ್ಯಕ್ತಿಯಾಗಿರುವ ಅಣ್ಣಾವ್ರ ಕಿರಿಯ ಮಗನಾಗಿ ಅವರಂತೆಯೆ ಎಲ್ಲಾ ಗುಣಗಳನ್ನು ಕೂಡ ಹೊಂದಿದ್ದರು.

ಆದರೆ ಆ ವಿಧಿ ಯವರಿಗೆ ಆಯಸ್ಸು ಮಾತ್ರ ಜಾಸ್ತಿ ನೀಡಲಿಲ್ಲ. ಇನ್ನು ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸಮಾಧಿಯ ಮುಂದೆ ಸಾವಿರಾರು ಜನರು ಅವರನ್ನು ನೋಡಲು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಇಂದಿಗೂ ಕೂಡ ಅವರ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸಿಕೊಳ್ಳುತ್ತಲೇ ಇದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿ ತನ್ನ ಒಂದು ಎಕರೆ ಭೂಮಿಯನ್ನು ಅಪ್ಪು ಅವರಿಗಾಗಿ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೌದು, ಅಪ್ಪು ಟ್ರಸ್ಟ್ ಗೆ 1 ಎಕರೆ ನೀಡುತ್ತೇನೆ ಎಂದಿದ್ದಾರೆ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಅರೆಗೊಪ್ಪ ಪ್ರದೇಶದ ಚೆಲುವಯ್ಯ ಎಂಬ ರೈತ ಈ ಮಾತನ್ನು ಹೇಳಿದವರು. ಪುನೀತ್ ರಾಜಕುಮಾರ್ ರವರನ್ನು ನನ್ನ ತಮ್ಮನಂತೆ ಎಂದು ಭಾವಿಸಿ ನನ್ನ ಒಂದು ಎಕರೆ ನೀಡಲು ಮುಂದಾಗಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಒಬ್ಬರಿಗೆ ಮದುವೆಯಾಗಿದ್ದರೆ ಇನ್ನೊಬ್ಬರು ಬಿಎಡ್ ಮಾಡುತ್ತಿದ್ದಾರೆ. ಯಾರ ಬಳಿಯೂ ಕೇಳಬೇಕಾಗಿಲ್ಲ ಯಾರು ಹೇಳೂ ಇಲ್ಲ ನನ್ನ ಮನಸ್ಸಿನಲ್ಲಿ ನಾನೇ ಒಪ್ಪಿಕೊಂಡು ಒಂದು ಎಕರೆ ಜಮೀನನ್ನು ಕೊಡಲು ಮುಂದಾಗಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇವರ ಅಭಿಮಾನಕ್ಕೆ ನೀವು ಏನು ಹೇಳುತ್ತೀರಿ ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.