ಮೋಹಕ ತಾರೆ ರಮ್ಯಾ ರವರಿಗೆ ಹುಟ್ಟು ಹಬ್ಬದ ಸಂಭ್ರಮ, ಮತ್ತೊಂದು ವರ್ಷ ವಯಸ್ಸಾಯಿತು. ಇವರ ನಿಜವಾದ ವಯಸ್ಸೆಷ್ಟು ಗೊತ್ತೇ?? ತಿಳಿದರೆ ನೀವು ನಂಬುವುದಿಲ್ಲ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿ ಎಂದು ಯಾರೇ ಏನೇ ಹೇಳಿದರೂ ಕೂಡ ಅದಕ್ಕೆ ಸಿಗುವ ಒಂದೇ ಒಂದು ಉತ್ತರವೆಂದರೆ ರಮ್ಯ ಎಂದರೆ ಎಲ್ಲರೂ ಒಪ್ಪುವಂತಹ ಮಾತು. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳ ಕಾಲ ನಟಿಸಿಕೊಂಡು ಬಂದ ರಮ್ಯಾರವರು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಕನ್ನಡಿಗರಿಗೆ ಅವರ ಮೇಲಿರುವ ಪ್ರೀತಿ ಇನ್ನೂ ಕೂಡ ಕಡಿಮೆಯಾಗಿಲ್ಲ.

ಮತ್ತೊಮ್ಮೆ ರಮ್ಯಾರವರು ಕನ್ನಡ ಚಿತ್ರರಂಗದಲ್ಲಿ ಬಂದು ನಟಿಸಿ ತಮ್ಮ ರಾಣಿಯ ಪಟ್ಟವನ್ನು ಮತ್ತೆ ಪಡೆದುಕೊಳ್ಳಲಿ ಎಂಬುದೇ ಕನ್ನಡದ ಅಭಿಮಾನಿಗಳ ಆಸೆ. ಇನ್ನು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾದಲ್ಲಿ ಮಾಡಲು ಯೋಚಿಸಿದ್ದರಂತೆ. ಆದರೆ ಮುಂದಿನ ದಿನಗಳಲ್ಲಿ ರಮ್ಯಾರವರು ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸಾಗುವುದು ಬಹುತೇಕ ಸಾಧ್ಯವಿಲ್ಲ ಎಂಬ ಅನುಮಾನ ಮೂಡಿದೆ. ಇನ್ನು ರಮ್ಯಾರವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು ಅವರ ವಯಸ್ಸು ಎಷ್ಟು ಗೊತ್ತೆ.

25ರ ಹರೆಯದ ಚಂದುಳ್ಳಿ ಚೆಲುವೆ ಯಂತಿರುವ ರಮ್ಯಾರವರ ನಿಜವಾದ ವಯಸ್ಸು 39 ವರ್ಷ. ಇನ್ನು ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ಕೋರಿದ ಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತಾ ಸ್ನೇಹಿತರೊಂದಿಗೆ ಅಂಟಾರ್ಟಿಕ್ ಸಮುದ್ರದ ತೀರದಲ್ಲಿ ಜನ್ಮ ದಿನವನ್ನು ಆಚರಿಸಿ ಕೊಳ್ಳುತ್ತಿದ್ದೇನೆ ಎಂಬುದಾಗಿ ಬರೆದು ಕೊಂಡಿದ್ದಾರೆ. ನಟಿ ರಮ್ಯಾ ರವರು ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗಬೇಕೆಂಬ ನಿರೀಕ್ಷೆಯಲ್ಲಿ ಇರುವ ಲಕ್ಷಾಂತರ ಅಭಿಮಾನಿಗಳಲ್ಲಿ ನೀವು ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆ ಗಳನ್ನು ತಪ್ಪದೇ ಹಂಚಿಕೊಳ್ಳಿ.

Post Author: Ravi Yadav