ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತಿರುಪತಿಗೆ ಬಂದ ಮಹಾಶಿವ ಸುದರ್ಶನ ಚಕ್ರದಲ್ಲಿ ಐಕ್ಯನಾಗಿದ್ದು ಯಾಕೆ ಗೊತ್ತೇ?? ಶಿವ ಕೇಶವರ ಬಾಂಧವ್ಯಕ್ಕೆ ತಿರುಪತಿಯಲ್ಲಿದೆ ಮಹಾಸಾಕ್ಷಿ, ನೀವರಿಯದ ಮಾಹಿತಿ.

59

ನಮಸ್ಕಾರ ಸ್ನೇಹಿತರೇ ನಾವೆಲ್ಲ ಬದುಕಿರುವುದೇ ದೇವರು ನಮ್ಮೊಂದಿಗಿದ್ದಾನೆ ಎಂಬ ನಂಬಿಕೆಯ ಮೇಲೆ. ಕೆಲವರು ಅವರು ಮಾಡುವ ಕೆಲಸದಲ್ಲಿಯೇ ದೇವರನ್ನು ಕಂಡರೆ ಇನ್ನೂ ಕೆಲವರು ತಪ್ಪದೇ ಗುಡಿಯಲ್ಲಿರುವ ದೇವರನ್ನು ಆರಾಧಿಸುತ್ತಾರೆ. ನಾವು ಶ್ರದ್ಧೆ, ಭಕ್ತಿಯಿಂದ ದೇವರನ್ನು ನೆನೆದರೆ ಅಥವಾ ಆರಾಧಿಸಿದರೆ ಆತ ನಮಗೆ ಸದಾ ಒಳಿತನ್ನೇ ಮಾಡುತ್ತಾನೆ ಎಂಬ ನಂಬಿಕೆಯಿದೆ. ಇನ್ನು ಭೂಲೋಕದಲ್ಲಿ ಅದೆಷ್ಟು ದೇವಾಲಯಗಳಿವೆಯೋ ಲೆಕ್ಕಕ್ಕಿಲ್ಲ.

ಅಂಥ ದೇವಾಲಯಗಳಲ್ಲಿ ಕೆಲವು ಪ್ರಮುಖ ದೇವಾಲಯಗಳಲ್ಲಿ ದೇವರು ಬಂದು ನೆಲೆಸಿರುವುದಕ್ಕೂ ಕೂಡ ಅದರದ್ದೇ ಆದ ಕಥೆಗಳಿವೆ, ನಂಬಿಕೆಗಳಿವೆ. ಸ್ನೇಹಿತರೆ, ನೀವು ತಿರುಪತಿ ತಿರುಮಲ ದೇವರ ಬಗ್ಗೆ ಕೇಳಿರಬಹುದು ಅಥವಾ ಸ್ವತಃ ನೀವೇ ಭೇಟಿ ನೀಡಿರಬಹುದು. ಇಲ್ಲಿ ಶಿವ ಹಾಗೂ ವಿಷ್ಣು ಇಬ್ಬರೂ ಬಂದು ನೆಲೆಸಿದ್ದಾರೆ ಎನ್ನಲಾಗುತ್ತದೆ ಹಾಗಾದರೆ ಈ ಎರಡು ಶಕ್ತಿ ದೇವತೆಗಳು ಒಂದೇ ಕಡೆ ನೆಲೆಸಲು ಕಾರಣವೇನು ಮುಂದೆ ಓದಿ.

ಸ್ನೇಹಿತರೆ, ಹಲವರು ಹರ ಹರಿಯಲ್ಲಿ ಭೇದವನ್ನು ಮಾಡುತ್ತಾರೆ. ನಾವು ಶಿವನ ಆರಾಧಕರು ಎಂತಲೋ ಅಥವಾ ನಾವು ವಿಷ್ಣುವಿನ ಆರಾಧಕರು ಎಂತಲೋ ಹೇಳಿ ಕೊಳ್ಳುತ್ತಾ ತಮ್ಮನ್ನು ತಾವು ಶ್ರೇಷ್ಠರು ಎಂದು ಕೊಳ್ಳುತ್ತಾರೆ. ಆದರೆ ಅದೆಷ್ಟೋ ಜನರಿಗೆ ಗೊತ್ತಿಲ್ಲ ಶಿವ ಕೇಶವರು ಅಭೇದ್ಯ ಶಕ್ತಿ ಎಂದು. ಹರ ಹರಿ ಇಬ್ಬರೂ ಒಂದೇ. ಶಿವನ ಅರ್ಧಾಂಗಿಯಾಗಿರುವ ಉಮೆ ಮತ್ಯಾರು ಅಲ್ಲ, ಸ್ವತಃ ನಾರಾಯಣನೇ ಆಗಿರುವ ನಾರಾಯಣಿ. ಇನ್ನು ದುಷ್ಟರ ನಾಶಕ್ಕಾಗಿ ಇಬ್ಬರು ಶಕ್ತಿ ದೇವತೆಗಳು ತಮ್ಮ ತಮ್ಮ ಆಯುಧಗಳನ್ನು ಬದಲಾಯಿಸಿಕೊಳ್ಳುತ್ತಾರೆ ಎಂದರೆ ಅದು ಹರ ಹರಿಯರು ಮಾತ್ರ.

ಶಿವ ಕೇಶವರ ಬಾಂಧವ್ಯವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವೇ ಇಲ್ಲ. ಇವರಿಬ್ಬರ ದೈವತ್ವದ ಬಗ್ಗೆ ಹಲವಾರು ಪುರಾಣಗಳಲ್ಲಿ ಉಲ್ಲೇಖಗಳಿವೆ. ಇನ್ನು ಶಿವ ಕೇಶವರ ಬಾಂಧವ್ಯಕ್ಕೆ ತಿರುಮಲ ಹೇಗೆ ಸಾಕ್ಷಿಯಾಗಿದೆ, ಇಲ್ಲಿನ ಚಕ್ರ ತೀರ್ಥ ಹಾಗೂ ಕುಮಾರ ತೀರ್ಥದ ಮಹತ್ವವೇನು ಎಂಬುದನ್ನು ನಾವಿಲ್ಲಿ ನೋಡೋಣ.. ತಿರುಮಲ ಬೆಟ್ಟದಲ್ಲಿರುವ ಕಪಿಲ ತೀರ್ಥ ಶಿವನೇ ಕಣಿವೆಯಲ್ಲಿ ಹರಿದು ವೆಂಕಟೇಶ್ವರನನ್ನು ಸೇರುತ್ತಾನೆ ಎನ್ನಲಾಗುತ್ತದೆ. ಇನ್ನು ಇಷ್ಟೇ ಪ್ರಮುಖವಾದ ಇನ್ನೆರಡು ತೀರ್ಥ ಪ್ರದೇಶಗಳು ಕುಮಾರ ತೀರ್ಥ ಹಾಗೂ ಚಕ್ರ ತೀರ್ಥ. ಈ ಎರಡೂ ಪವಿತ್ರ ಸ್ಥಳಗಳ ಬಗ್ಗೆ ಪೌರಾಣಿಕ ಕಥೆಗಳೂ ಕೂಡ ಇವೆ.

ಈ ಮಹಾ ತೀರ್ಥ ಸ್ಥಾನ ಗಳಲ್ಲಿ ಚಕ್ರ ತೀರ್ಥ, ಸುದರ್ಶನ ಚಕ್ರ ಶಿವನದ್ದೋ ಅಥವಾ ವಿಷ್ಣುವಿನದ್ದೋ ಎಂಬ ಪ್ರಶ್ನೆಗೆ ಉತ್ತರದಂತಿದೆ. ಸುದರ್ಶನ ಚಕ್ರವನ್ನು ಶ್ರೀ ಹರಿಗೆ ಕೊಟ್ತವನು ಮಹಾದೇವ. ಶ್ರಿ ಹರಿಯ ತಪಸ್ಸಿಗೆ ಮೆಚ್ಚಿ ದುಷ್ಟರ ಸಂಹಾರಕ್ಕಾಗಿ ಶಿವನು ವಿಷ್ಣುವಿಗೆ ಕರುಣಿಸಿದ್ದು ಎಂದು ಹೇಳುತ್ತವೆ ಪುರಾಣಗಳು. ಇದಕ್ಕೆ ಒಂದು ಪೂರಕ ಉಪಕಥೆಯೂ ಇದೆ. ವಾಮನ ಪುರಾಣದಲ್ಲಿ ಉಲ್ಲೇಖದಂತೆ, ತಾರಕಾಸುರನ ವಧೆಯಾಗುತ್ತದೆ. ಈತನನ್ನು ವಧೆ ಮಾಡಿದ ಸುಬ್ರಹ್ಮಣ್ಯ ಸ್ವಾಮಿಗೆ ಬ್ರಹ್ಮ ಹತ್ಯಾ ದೋಷ ತಗುಲಿರುತ್ತದೆ. ದೋಷದ ತೀವ್ರತೆ ಎಷ್ಟಿರುತ್ತದೆ ಎಂದರೆ, ಇದು ಷಣ್ಮುಖನನ್ನೂ ಸಹ ಬಿಡಲಿಲ್ಲ.

ಇದರ ಪರಿಣಾಮವಾಗಿ ಸಾಕಷ್ಟು ಹಸಿವು ಬಾಯಾರಿಕೆಯಾಗುತ್ತೆ ಷಣ್ಮುಖನಿಗೆ. ಇದರಿಂದ ಭಯಗೊಂಡ ಮಾತೆ ಪಾರ್ವತಿ ಶಿವನಲ್ಲಿ ಪರಿಹಾರವನ್ನು ಕೇಳುತ್ತಾನೆ. ನಂತರ ಮಹಾದೇವನು ತಾರಕ ಮಂತ್ರವನ್ನು ಸುಬ್ರಹ್ಮಣ್ಯನಿಗೆ ಬೋಧಿಸುತ್ತಾನೆ. ನಂತರ ವೆಂಕಟಾಚಲಕ್ಕೆ ತೆರಳಿ ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಲು ಸೂಚಿಸುತ್ತಾನೆ. ಹೀಗೆ ಷಣ್ಮುಖ ತಪಸ್ಸು ಮಾಡಿದ ಜಾಗವೇ ಕುಮಾರ ತೀರ್ಥ. ಇನ್ನು ತಿರುಮಲದಲ್ಲಿರುವ ಇನ್ನೊಂದು ಮಹಾ ಶಕ್ತಿ ತೀರ್ಥ ಎಂದು ಕರೆಸಿಕೊಂಡಿದ್ದು ಚಕ್ರ ತೀರ್ಥ. ಕಾಲಚಕ್ರ ಎಂದರೆ ಬೇರೆಯಾವುದೂ ಅಲ್ಲ ಅದುವೇ ಸುದರ್ಶನ ಚಕ್ರ. ಕಾಲಚಕ್ರ ತಪಸ್ಸು ಮಾಡಿ, ಶಿವನನ್ನು ತಿರುಮಲಕ್ಕೆ ಬರಮಾಡಿಕೊಳ್ಳುತ್ತದೆ.

ಶಿವನಿಗೆ ತನ್ನ ಪರಮ ಆಪ್ತ ಮಹಾವಿಷ್ಣುವಿನ ಜೊತೆಗೂ ಇರುವುದಕ್ಕಾಗಿ ತಾನು ಸುದರ್ಶನ ಚಕ್ರದಲ್ಲಿ ಒಂದು ಅಂಶವಾಗಿ ಈ ಚಕ್ರದಲ್ಲಿ ಐಕ್ಯನಾಗುತ್ತಾನೆ. ಇದರಿಂದ ಸುದರ್ಶನ ಚಕ್ರಕ್ಕೆ ಶಿವನೊಂದಿಗಿರುವ ಬಯಕೆಯೂ ಶಿವನಿಗೆ ಮಹಾವಿಷ್ಣುವಿನೊಂದಿಗಿರುವ ಇಚ್ಛೆಯೂ ಪೂರೈಸಿಕೊಂಡಂತಾಗುತ್ತದೆ. ಹಾಗಾಗಿ ತಿರುಮಲ ಕ್ಷೇತ್ರ ಎಷ್ಟು ಪವಿತ್ರವೋ ಅಷ್ಟೇ ಅಲ್ಲಿನ ತೀರ್ಥ ಕ್ಷೇತ್ರಕ್ಕೂ ಅಷ್ಟೇ ಪವಿತ್ರವೆ. ಇಲ್ಲಿ ಬರುವ ಭಕ್ತಾದಿಗಳು ತಮ್ಮ ಪಾಪ ನಿವಾರಣೆಗಾಗಿ ಕುಮಾರ ತೀರ್ಥವನ್ನೂ ಪುಣ್ಯ ಸಂಪಾದನೆಗಾಗಿ ಚಕ್ರ ತೀರ್ಥವನ್ನು ಭಕ್ತಾದಿಗಳು ತಪ್ಪದೇ ಭೇಟಿ ನೀಡಿ ಕ್ರತಾರ್ಥರಾಗುತ್ತಾರೆ. ಸ್ನೇಹಿತರೆ ಇಂಥ ಮಹಾ ಮಹಿಮೆಯನ್ನು ಹೊಂದಿರುವ ಈ ತಿರುಮಲ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ.