ಮಕ್ಕಳು ಹೊರಗೆ ಹಾಕಿದರೂ ಸುದೀಪ್, ಯಶ್, ದರ್ಶನ್ ಸಹಾಯ ಬೇಡ ಎಂದಿದ್ದ ಸ್ವಾಭಿಮಾನಿ ಸದಾಶಿವ ರವರ ಜೀವನದಲ್ಲಿ ನಡೆದ್ದದೇನು ಗೊತ್ತೇ??

ಮಕ್ಕಳು ಹೊರಗೆ ಹಾಕಿದರೂ ಸುದೀಪ್, ಯಶ್, ದರ್ಶನ್ ಸಹಾಯ ಬೇಡ ಎಂದಿದ್ದ ಸ್ವಾಭಿಮಾನಿ ಸದಾಶಿವ ರವರ ಜೀವನದಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಲಾವಿದರು ಎಂದರೆ ನಮಗೆಲ್ಲಾ ಒಂದು ಕಲ್ಪನೆಯಿರತ್ತೆ. ಸಿನಿಮಾಗಳಲ್ಲಿ ಹೇಗೆ ಶ್ರೀಮಂತರ ಮಗನಾಗಿ ಮಗಳಾಗಿ, ಅಪ್ಪನಾಗಿ ಹೀಗೆ ನಾನಾ ಪಾತ್ರದಲ್ಲಿ ಅಭಿನಯಿಸುತ್ತಾರೋ ಹಾಗೆ ನಿಜ ಜೀವನದಲ್ಲಿಯೂ ಕೂಡ ಹೀಗೆ ಇರುತ್ತಾರೆ ಎಂದೇ ಭಾವಿಸಿಕೊಳ್ಳುತ್ತೇವೆ. ಆದ್ರೆ ಇದು ಎಷ್ಟರ ಮಟ್ಟಿಗೆ ನಿಜ? ಕೆಲವರ ಜೀವನದಲ್ಲಿ ನಡೆದ ಘಟನೆಗಳಿಗೂ ಅವರ ನಟನೆಗೂ ಸಂಬಂಧವೇ ಇರುವುದಿಲ್ಲ. ಪರದೆಯ ಮೇಲೆ ನಗುಮೊಗದ ನಟನೆ ಇದ್ದರೆ ನಿಜ ಜೀವನ ಕಣ್ಣೀರಿನ ಕಥೆಯಾಗಿರುತ್ತದೆ.

ಒಂದು ಕಾಲದಲ್ಲಿ ಸಾಕಷ್ಟು ಫೇಮಸ್ ಆಗಿದ್ದ ನಟ ನಟಿಯರೂ ಕೂಡ ಕೊನೆಗೆ ಕಾರಣಾಂತರಗಳಿಂದ ಬೀದಿಗೆ ಬಂದ ಉದಾಹರಣೆಗಳೂ ಇವೆ. ಇಂಥ ದುಃಖದ ಜೀವನ ಸಾಗಿಸಿದ್ದ ನಟರೊಬ್ಬರ ಬಗ್ಗೆ ನಾವಿಂದು ಹೇಳ್ತೇವೆ ಕೇಳಿ. ಸ್ನೇಹಿತರೆ, ಸುಮಾರು 70ರ ದಶಕದಿಂದ ಇತ್ತೀಚಿನ ವರೆಗಿನ ಸಿನಿಮಾಗಳಲ್ಲಿ ಒಬ್ಬ ಅರ್ಚಕನ ಪಾತ್ರ, ಮಾಸ್ತರರ ಪಾತ್ರ ಅಥವಾ ಇನ್ಯಾವುದೇ ಸಾದ್ವಿಕ ಪಾತ್ರಗಳಿದ್ದರೆ ಅದನ್ನು ನಿಭಾಯಿಸುತ್ತಿದ್ದವರು ಒಬ್ಬರೇ. ಅವರು ಯಾರು ಎಂಬುದು ನಿಮ್ಮ ಕಣ್ಮುಂದೆ ಬಂದಿರಬಹುದು ಅಲ್ವೇ? ಹೌದು ಅವರೇ ಸದಾಶಿವ ಬ್ರಹ್ಮಾವರ. ಮೂಲತಃ ಬೈಲುಹೊಂಗಲದವರಾದ ಇವರು ಜೀವನ ಕಳೆದಿದ್ದು ಉಡುಪಿಯ ಬ್ರಹ್ಮಾವರದಲ್ಲಿ. ತಮ್ಮ 40 ನೇ ವಯಸ್ಸಿನಲ್ಲಿ ಅಭಿನಯ ಮಾಡಲು ಶುರುಮಾಡಿದ ಇವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಪೋಷಕಪಾತ್ರಗಳಲ್ಲಿ ಅದರಲ್ಲೂ ಪಾಸಿಟಿವ್ ಪಾತ್ರಗಳಲ್ಲಿ.

ಡಾ. ರಾಜ ಕುಮಾರ್ ಅವರ ಸುಮಾರು ಎಲ್ಲಾ ಚಿತ್ರಗಳಲ್ಲಿಯೂ ಕೂಡ ಸದಾಶಿವ ಬ್ರಹ್ಮಾವರಅವರಿಗೆ ಒಂದು ಪಾತ್ರ ಇದ್ದೇ ಇರುತ್ತಿತ್ತು. ಹೀಗೆ ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸಿ ನಮ್ಮ ಅತ್ಯುತ್ತಮ ನಟನೆಗೆ ಹೆಸರಾಗಿದ್ದ ಸದಾಶಿವ ಬ್ರಹ್ಮಾವರ ಅವರ ಜೀವನ ಮುಂದೆ ಹೀಗಾಗಿದ್ದಾದ್ರೂ ಯಾಕೆ? ಹೌದು ಒಂದು ಕಾಲದಲ್ಲಿ ಚೆನ್ನಾಗಿಯೇ ದುಡಿದುಕೊಂಡಿದ್ದ ಸದಾಶಿವ ಬ್ರಹ್ಮಾವರ ಅವರ ಜೀವನ ಅವರ ಪ್ರೀತಿಯ ಹೆಂಡತಿ ತೀರಿಕೊಂಡಾಗಿನಿಂದ ಬದಲಾಗುತ್ತಾ ಬಂತು.

ಸದಾಶಿವ ಬ್ರಹ್ಮಾವರ ಅವರು ಹೆಂಡತಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಂತೆ. ಆದರೆ ಕ್ಯಾನ್ಸರ್ ಖಾಯಿಲೆಗೆ ಬಲಿಯಾದರು ಸದಾಶಿವ ಅವರ ಹೆಂಡತಿ. ಇದರಿಂದ ಸಾಕಷ್ಟು ನೊಂದರು ಸದಾಶಿವ ಬ್ರಹ್ಮಾವರ. ಸದಾಶಿವ ಅವರಿಗೆ 4 ಜನ ಮಕ್ಕಳು ಅವರಲ್ಲಿ 2 ತೀರಿಕೊಂಡು ಒಬ್ಬಳು ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಆದರೆ ತಂದೆ ಹಾಗೂ ಮಕ್ಕಳಲ್ಲಿ ವೈಮನಸ್ಸು ಮೂಡಿ ತಂದೆಯನ್ನು ಮನೆಯಿಂದ ಹೊರ ಹಾಕುತ್ತಾರೆ. ಆದರೆ ಒಬ್ಬ ಸ್ನೇಹಿತರ ಮುಖಾಂತರ ಸಂಧಾನ ಮಾಡಲಾಗುತ್ತದೆ. ಆ ನಂತರ ಮಗಳ ಮನೆಯಲ್ಲಿ ಉಳಿಯುತ್ತಾರೆ ಸದಾಶಿವ ಬ್ರಹ್ಮಾವರ. ಆದರೆ ಅಳಿಯ ಮಾವನ ನಡುವೆ ವೈಮನಸ್ಸು ಬಂದು ಮತ್ತೆ ಮನೆಯಿಂದ ಹೊರ ಹಾಕುತ್ತಾರೆ. ಆ ನಂತರ ಮಗನ ಮನೆಯಲ್ಲಿ ಬಂದು ಉಳಿದು, ಅಲ್ಲಿಯು ಅಪ್ಪ ಮಗನಿಗೆ ಆಗಿಬರದೆ ಅಲ್ಲಿಂದಲೂ ಹೊರದೂಡಲ್ಪಡುತ್ತಾರೆ.

ಒಮ್ಮೆ ಉತ್ತರ ಕನ್ನಡದ ಕುಮಟಾ ಹೋಟೆಲ್ ಒಂದರಲ್ಲಿ ಸದಾಶಿವ ಬ್ರಹ್ಮಾವರ ತಿಂಡಿ ತಿನ್ನುತ್ತಿರುತ್ತಾರೆ. ಅವರ ವೇಷ ಭೂಷಣಗಳು ಯಾರೂ ಅವರನ್ನು ಗುರುತುಹಿಡಿಯುವಂತೆ ಇರಲಿಲ್ಲ. ಆದರೆ, ಸ್ಥಳೀಯರೊಬ್ಬರು ಅವರನ್ನು ಗುರುತಿಸಿ ಮಾತನಾಡಿಸಿದಾಗ ಅವರ ನೋವಿನ ಕಥೆಯನ್ನು ಹೇಳಿಕೊಳ್ಳುತ್ತಾರೆ. ಇದು ಮಾದ್ಯಮಗಳಲ್ಲಿಯೂ ಕೂಡ ಸುದ್ದಿಯಾಗುತ್ತದೆ. ಇದರಿಂದ ಸದಾಶಿವ ಬ್ರಹ್ಮಾವರ ಅವರಿಗೆ ಸ್ವಲ್ಪ ಕಸಿವಿಸಿಯಾಗುತ್ತದೆ. ನಂತರ ತನ್ನ ಹುಟ್ಟೂರಾದ ಬೈಲುಹೊಂಗಲಕ್ಕೆ ಹೋದಾಗ ಮತ್ತೆ ಮಾದ್ಯಮದವರು ಪ್ರಶ್ನಿಸಿದ್ದಕ್ಕೆ ಮಕ್ಕಳು ತನ್ನನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ ಎನ್ನುತ್ತಾರೆ. ತಮ್ಮ ಈ ಪರಿಸ್ಥಿತಿಯಲ್ಲೂ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ ಈ ಮಹಾನ್ ಕಲಾವಿದ.

ಸದಾಶಿವ ಬ್ರಹ್ಮಾವರ ಅವರ ಈ ಸ್ಥಿತಿಗೆ ಮರುಗಿದ ಚಿತ್ರತಂಡ ಅದರಲ್ಲೂ ನಟ ಸುದೀಪ್ ಮೊದಲಾದವರು ಬ್ರಹಾವರಿಗೆ ಸಹಾಯ ಮಾಡುವುದಾಗಿ ಹೇಳುತ್ತಾರೆ. ಆದರೆ ಸ್ವಾಭಿಮಾನಿ ಸದಾಶಿವ, ಈ ಸಹಾಯವನ್ನು ನಿರಾಕರಿಸುತ್ತಾರೆ. ತಾನೇ ತನ್ನ ದುಡ್ದಿನಲ್ಲೇ ಬದುಕುವುದಾಗಿ ಹೇಳುತ್ತಾರೆ. ಇಷ್ಟಾಗಿ ಒಂದು ವರ್ಷದಲ್ಲಿ ಅಂದರೆ 2018 ರಲ್ಲಿ ಸದಾಶಿವ ಬ್ರಹ್ಮಾವರ ಅವರು ಅಸುನೀಗುತ್ತಾರೆ. ಸ್ನೇಹಿತರೆ, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ, ತಮ್ಮ ಸಾತ್ವಿಕ ನಟನೆಯ ಮೂಲಕ ಗುರುತಿಸಿಕೊಂಡ ಜನರ ಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.