ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗೆಲ್ಲಲೇಬೇಕಾಗಿದ್ದ ವಿಷ್ಣು ರವರ ಸಿನಿಮಾ ಅಂದು ಸೋತದ್ದು ಯಾಕೆ ಗೊತ್ತೇ?? ಅದೊಂದು ತಪ್ಪಿನಿಂದ ಅದ್ಭುತ ಸಿನಿಮಾ ಸೋತಿದ್ದು ಹೇಗೆ ಗೊತ್ತೇ??

3,162

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಒಂದು ಸಿನಿಮಾ ಗೆಲ್ಲುವುದಕ್ಕೆ ಅಥವಾ ಒಂದು ಸಿನಿಮಾ ಸೋಲುವುದಕ್ಕೆ ಚಿತ್ರರಂಗದಲ್ಲಿ ಹಲವಾರು ಕಾರಣಗಳಿರುತ್ತೆ, ಅದು ಸ್ಟಾರ್ ನಟರ ಚಿತ್ರವಾಗಿರಲಿ ಅಥವಾ ಹೊಸಬರ ಚಿತ್ರವಾಗಿರಲಿ, ಆ ಚಿತ್ರದ ಗೆಲುವಿಗೆ ಪ್ರೇಕ್ಷಕರ ಮೆಚ್ಚುಗೆಯ ಜೊತೆಗೆ ಸರಿಯಾದ ಪ್ರಚಾರ, ಆ ಸಿನಿಮಾ ಬಗ್ಗೆ ವಿಶೇಷ ಗಮನ ಅಗತ್ಯವಾಗಿರುತ್ತೆ. ಚಿತ್ರತಂಡದ ಸರಿಯಾದ ಇನ್ವಾಲ್ಮೆಂಟ್ ಇಲ್ಲದಿದ್ದರೆ ಆ ಸಿನಿಮಾ ಸೋಲುವುದು ಬಾಗಶಃ ಸತ್ಯ.

ಒಬ್ಬ ವರ್ಸಟೈಲ್ ಆಕ್ಟರ್ ಎನಿಸಿಕೊಂಡಿದ್ದ ಡಾ. ವಿಷ್ಣುವರ್ಧನ್ ಹಲವು ಚಿತ್ರಗಳಲ್ಲಿ ನಟಿಸಿ ಜನ ಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇನ್ನು ಅವರ ಚಿತ್ರಗಳು ಕೂಡ ಸಾಕಷ್ಟು ಯಶಸ್ಸನ್ನು ಗಳಿಸಿರುವಂಥದ್ದು. ವಿಷ್ಣುವರ್ಧನ್ ಅವರ ಕೆಲವು ಚಿತ್ರಗಳು ಸರಿಯಾದ ಪ್ರಮೋಶನ್, ಸರಿಯಾದ ಪ್ರಚಾರವಿಲ್ಲದೆ ಸೋತಿದ್ದನ್ನು ನೆನಪಿಸಿಕೊಂಡರೆ ಬೇಸರವೆನಿಸುತ್ತದೆ. ಆಪ್ತ ಮಿತ್ರದ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ತುಂಬಾ ಆಸಕ್ತಿಯಿಂದ ಸ್ವತಃ ವಿಷ್ಣು ದಾದಾ ನಟಿಸಿದ್ದ ಚಿತ್ರ ನಮ ಯಜಮಾನ್ರು.

ಬಹಳ ದೊಡ್ಡ ತಾರಾಗಣವನ್ನು ಹೊಂದಿದ್ದ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಮತ್ಯಾರೂ ಅಲ್ಲ, ಸಾಹಿತ್ಯ ವಿದ್ವಾಂಸ ಎನ್ನಬಹುದಾದ ಟಿ ಎನ್ ನಾಗಾಭರಣ ಅವರು. ಇನ್ನು ಲಕ್ಷ್ಮಿ ಗೋಪಾಲಸ್ವಾಮಿ, ನವ್ಯಾ ನಾಯರ್ ಮೊದಲಾದ ತಾರೆಗಳನ್ನು ಹೊಂದಿದ್ದ ಈ ಚಿತ್ರ ತೆರೆಗೆ ಬಂದ ಮೇಲೆ ಜನರ ಮೆಚ್ಚುಗೆಯನ್ನೂ ಗಳಿಸಿತ್ತು. ನಾದ ಬ್ರಹ್ಮ ಹಂಸಲೇಖ ಅವರ ಸಂಗೀತ ಈ ಚಿತ್ರದ ಉತ್ತಮ ಹಾಡುಗಳ ರಚನೆಗೆ ಸಾಕ್ಷಿಯಾಗಿತ್ತು. ರಾಜ ಕುಮಾರಿ ರಾಜಶೇಖರ್ ನಿರ್ಮಾಣವನ್ನು ಹೊಂದಿದ್ದ ಈ ಚಿತ್ರ 2009 ಫೆಬ್ರವರಿಯಲ್ಲಿ ತೆರೆಗೆ ಬಂದಾಗ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದೂ ಸುಳ್ಳಲ್ಲ. ಆದರೆ ದುರದೃಷ್ಟವಶಾತ್ ಈ ಚಿತ್ರ ನಿರೀಕ್ಷಿತ ಮಟ್ತದ ಯಶಸ್ಸನ್ನು ಕಾಣಲೇ ಇಲ್ಲ. ಇದಕ್ಕೆ ಸರಿಯಾದ ಪ್ರಚಾರದ ಅಭಾವವೇ ಕಾರಣ ಎನ್ನಬಹುದು. ಹಾಗಾಗಿ ಆಪ್ತಮಿತ್ರದಷ್ಟು ಯಶಸ್ಸು ನಂಜಮಾನ್ರು ಚಿತ್ರಕ್ಕೆ ಸಿಗಲೇ ಇಲ್ಲ

Get real time updates directly on you device, subscribe now.