ಇಲ್ಲಿನ ಹುಡುಗಿಯರಿಗೆ ಮಕ್ಕಳು ಹೆರುವುದೇ ಕೆಲಸ, ವಿಚಿತ್ರ ದೇಶ ಮಂಗೋಲಿಯಾದ ಷಾಕಿಂಗ್ ಸಂಗತಿಗಳು. ಹೇಗಿದೆ ಗೊತ್ತಾ ದೇಶದ ವಿಚಾರಗಳು.

ಇಲ್ಲಿನ ಹುಡುಗಿಯರಿಗೆ ಮಕ್ಕಳು ಹೆರುವುದೇ ಕೆಲಸ, ವಿಚಿತ್ರ ದೇಶ ಮಂಗೋಲಿಯಾದ ಷಾಕಿಂಗ್ ಸಂಗತಿಗಳು. ಹೇಗಿದೆ ಗೊತ್ತಾ ದೇಶದ ವಿಚಾರಗಳು.

ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳಹೊರಟಿರುವ ದೇಶದಲ್ಲಿ ಮರುಭೂಮಿಯಿಂದ ಹಿಡಿದು ಹಿಮವೂ ಕೂಡ ಇದೆ. ವಿಶ್ವ ಕಂಡ ಅತ್ಯಂತ ಬಲಿಷ್ಠ ಯೋಧ ನಾಗಿರುವ ಚೆಂಗೀಸ್ ಖಾನ್ ನನ್ನು ನೀಡಿದ ದೇಶವಾಗಿದೆ. ಹೌದು ನಾವು ಮಾತನಾಡಲು ಹೊರಟಿರುವುದು ಮಂಗೋಲಿಯನ್ ದೇಶದ ಕುರಿತಂತೆ. ಚೆಂಗೀಸ್ ಖಾನ್ ಕುರಿತಂತೆ ನಿಮಗೆ ಗೊತ್ತೇ ಇದೆ. ಅವನು ಆಳಿರುವ ರಾಜ್ಯವೇ ಮಂಗೋಲಿಯನ್ ದೇಶ. ಆತ ಇಡೀ ಅರ್ಧ ಜಗತ್ತನ್ನೇ ಗೆದ್ದಿದ್ದ.

ಇನ್ನು ಮಂಗೋಲಿಯನ್ ದೇಶದ ಕುರಿತಂತೆ ಹೇಳುವುದಾದರೆ ಇಡೀ ಪ್ರಪಂಚಕ್ಕೆ ಐಸ್ಕ್ರೀಂ ತಿನ್ನುವುದನ್ನು ಕಳುಹಿಸಿಕೊಟ್ಟಿದ್ದೇ ಇವರು. ಇನ್ನು ಮಂಗೋಲಿಯನ್ ದೇಶದಲ್ಲಿರುವ ಜನಸಂಖ್ಯೆ ಕೇವಲ 33 ಲಕ್ಷ ಮಾತ್ರ. ಸುತ್ತಲೂ ಕೂಡ ಭೂ ಗಡಿಯನ್ನು ಹೊಂದಿರುವ ದೇಶವಾಗಿದೆ. ಮಂಗೋಲಿಯನ್ ದೇಶದ ರಾಜಧಾನಿಯಾಗಿರುವ ಉಲನ್ ಬತಾರ್ ವಿಶ್ವದ ಅತ್ಯಂತ ಚಳಿಯನ್ನು ಹೊಂದಿರುವ ರಾಜಧಾನಿ ಎಂದು ಕರೆಯಲಾಗುತ್ತದೆ. ಇನ್ನು ಈ ದೇಶವನ್ನು ಲ್ಯಾಂಡ್ ಆಫ್ ಅನಿಮಲ್ಸ್ ಎಂದು ಕರೆಯುತ್ತಾರೆ

ಮನುಷ್ಯರಿಗಿಂತ ಜಾಸ್ತಿಯಾಗಿ ಇಲ್ಲಿ ಪ್ರಾಣಿಗಳ ಇರುವುದರಿಂದ ಈ ಹೆಸರನ್ನು ನೀಡಲಾಗಿದೆ. ಇಲ್ಲಿನ ಜನರಲ್ಲಿ 40 ಪ್ರದೇಶದ ಪಾರಂಪರಿಕ ಜೀವನವನೆ ನಡೆಸುತ್ತಾ ಅಲೆಮಾರಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಟೆಂಟುಗಳಲ್ಲಿ ವಾಸವಾಗಿರುತ್ತಾರೆ. ಇನ್ನು ಚೆಂಗೀಸ್ ಖಾನ್ ಕುರಿತಂತೆ ಕೆಟ್ಟ ವಿಷಯಗಳನ್ನು ಹೇಳಿದ್ದೇವೆ ಆದರೆ ಆತನಲ್ಲಿ ಒಂದು ಒಳ್ಳೆ ಗುಣ ಗುಣ ಕೂಡ ಇತ್ತು. ಮಂಗೋಲಿಯಾದಲ್ಲಿ ಆತ ಅವಿದ್ಯಾವಂತನಾಗಿ ಇದ್ದರೂ ಕೂಡ ಅಲ್ಲಿನ ಜನರಿಗೆ ಬರೆಯುವುದನ್ನು ಹಾಗೂ ಕಲಿಯುವಿಕೆಯನ್ನು ಮೊದಲಿಗೆ ಜಾರಿಗೆ ತಂದಿದ್ದು ಈತನೇ.

ಮಂಗೋಲಿಯ ದಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಆರೋಗ್ಯವಂತ ಕುದುರೆಗಳು ಸಿಗುತ್ತದೆ. ಈ ದೇಶದಿಂದ ಕುದುರೆಗಳು ಬೇರೆ ಬೇರೆ ದೇಶಕ್ಕೆ ರಫ್ತಾಗುತ್ತದೆ. ಇನ್ನು ಮಂಗೋಲಿಯದಲ್ಲಿ 5ಕ್ಕಿಂತ ಹೆಚ್ಚು ಮಕ್ಕಳನ್ನು ಹುಟ್ಟಿಸಿದರೆ ಮಹಿಳೆಯರಿಗೆ ಸಾಕಷ್ಟು ಸಕಲ ಗೌರವಗಳು ಸಿಗುತ್ತದೆ. ಸರ್ಕಾರ ಈ ತರಹದ ಕಾನೂನುಗಳನ್ನು ಕೈಗೊಂಡಿರುವುದು ಅವರ ದೇಶದಲ್ಲಿನ ಜನಸಂಖ್ಯೆಯನ್ನು ಹೆಚ್ಚಿಸಲು. ಇನ್ನು ಮಂಗೋಲಿಯನ್ನರು ಸಂಗೀತಪ್ರಿಯರು ಮೂಗಿನಲ್ಲಿ ಕುದುರೆ ಮೇಲೆ ಕುಳಿತುಕೊಂಡು ಹಾಡುತ್ತಾರೆ. ಇನ್ನು ಇಡೀ ವಿಶ್ವಕ್ಕೆ ಐಸ್ ಕ್ರೀಮ್ ಅನ್ನು ಕಂಡುಹಿಡಿದು ಕೊಟ್ಟಿದ್ದು ಇವರೇ.

ಮಂಗೋಲಿಯದ ಕುದುರೆ ಸವಾರರು ಕಂಡುಹಿಡಿದ ಐಸ್ ಕ್ರೀಮನ್ನು ಈಗ ಇಡಿ ವಿಶ್ವವೇ ತಮ್ಮ ಜೀವನದ ಭಾಗವಾಗಿ ಉಪಯೋಗಿಸುತ್ತಿದೆ. ಮೈಕ್ರೋಸಾಫ್ಟ್ ನಲ್ಲಿ ಕಾಣಬರುವ ಫೋಟೋ ಕೂಡ ಮಂಗೋಲಿಯನ್ನರು ತೆಗೆದಿದ್ದು. ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಗೋಬಿ ಮರುಭೂಮಿ ಇರುವುದು ಕೂಡ ಮಂಗೋಲಿಯಾದಲ್ಲಿ. ಇಲ್ಲೇ ಡೈನೋಸರ್ ಪಳೆಯುಳಿಕೆ ಕೂಡ ಕಂಡುಬಂದಿತ್ತು. ಚಿಕ್ಕವಯಸ್ಸಿನಲ್ಲೇ ಎಲ್ಲಿ ಮಕ್ಕಳಿಗೆ ಕುದುರೆ ಸವಾರಿಯನ್ನು ಹೇಳಿಕೊಡಲಾಗುತ್ತದೆ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಈ ದೇಶ ಹೊಂದಿದೆ.

ಈ ದೇಶದ ರಾಷ್ಟ್ರ ಪಕ್ಷಿ ಹದ್ದು ಹಾಗೂ ರಾಷ್ಟ್ರ ಪ್ರಾಣಿ ಕುದುರೆ. ಇನ್ನು ಪ್ರವಾಸಿಗರನ್ನು ಮಂಗೋಲಿಯನ್ನರು ಸಾಕಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಲ್ಲಿ ಜನಪ್ರಿಯವಾಗಿರುವ ಕ್ರೀಡೆಯೆಂದರೆ ಕುದುರೆ ಸವಾರಿ ಮಾಡುತ್ತಿರಬೇಕಾದರೆ ಬಿಲ್ಲುಗಾರಿಕೆ ಮಾಡುವುದು. ಇನ್ನು ವಿದೇಶಿಗರಿಗೆ ಮಂಗೋಲಿಯಾ ಕೆ ಬರಲು ನೇರ ಪ್ರವೇಶವಿಲ್ಲ. ಒಂದು ರಷ್ಯಾಗೆ ಹೋಗಿಬರಬೇಕು ಇಲ್ಲವಾದಲ್ಲಿ ಚೀನಾಗೆ ಹೋಗಿ ಬರಬೇಕು. ಇನ್ನು ಈ ದೇಶದಲ್ಲಿ ಜಗತ್ತಿನ ಅತ್ಯಂತ ಪುರಾತನ ಪಾರ್ಕ್ ಕೂಡ ಇದೆ. ಇನ್ನು ಮಂಗೋಲಿಯದಲ್ಲಿ ಮ್ಯೂಸಿಯಂ ಕೂಡ ಇದೆ ಇದರಲ್ಲಿ ದೇಶದ ಇತಿಹಾಸವನ್ನು ಮರು ಸೃಷ್ಟಿಸಲಾಗಿದೆ. ಇಲ್ಲಿ ಕುದುರೆ ಸವಾರಿಯನ್ನು ಕೂಡ ಮಾಡಬಹುದಾಗಿದೆ. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಹಿಮ ಚಿರತೆಗಳು ಇಲ್ಲೇ ಕಾಣಸಿಗುವುದು. ರಾಜ್ಯ ರಾಜಧಾನಿಯಲ್ಲಿ ಪ್ರತಿವರ್ಷ ಉತ್ಸವ ನಡೆಯುತ್ತದೆ. ಇನ್ನು ಇಲ್ಲಿ ಫಲವತ್ತಾದ ಭೂಮಿ ಇಲ್ಲದಿರುವ ಕಾರಣದಿಂದಾಗಿ ಮಾಂಸಾಹಾರವನ್ನು ಹೆಚ್ಚಾಗಿ ಮಾಡುತ್ತಾರೆ. ಇದು ಮಂಗೋಲಿಯಾದ ಕುರಿತಂತೆ ನೀವು ತಿಳಿದುಕೊಳ್ಳಲೇಬೇಕಾದ ಅಂತಹ ಅಂಶಗಳು.