ಬದಲಾಗುತ್ತಿರುವ ಈ ಕಾಲದಲ್ಲಿ ಮದುವೆ ಮಾಡಿಕೊಳ್ಳುವ ಮುನ್ನ ಮಹಿಳೆಯರು, ಪುರುಷರನ್ನು ಈ ಪ್ರಶ್ನೆಗಳನ್ನು ಕೇಳಲೇಬೇಕು, ಯಾವ್ಯಾವು ಗೊತ್ತೇ??

ಬದಲಾಗುತ್ತಿರುವ ಈ ಕಾಲದಲ್ಲಿ ಮದುವೆ ಮಾಡಿಕೊಳ್ಳುವ ಮುನ್ನ ಮಹಿಳೆಯರು, ಪುರುಷರನ್ನು ಈ ಪ್ರಶ್ನೆಗಳನ್ನು ಕೇಳಲೇಬೇಕು, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯನ್ನು ಅದು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಪ್ರಮುಖ ಘಟ್ಟ ವಾಗಿರುತ್ತದೆ. ಕೆಲವರು ಪ್ರೀತಿಸಿ ಲವ್ ಮ್ಯಾರೇಜ್ ಆದರೆ ಇನ್ನು ಕೆಲವರು ಮನೆಯವರ ಒಪ್ಪಿಗೆಯ ಮೇರೆಗೆ ಅರೆಂಜ್ ಮ್ಯಾರೇಜ್ ಆಗುತ್ತಾರೆ. ಅರೆಂಜ್ ಮ್ಯಾರೇಜ್ ನಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಾಕಷ್ಟು ಸಮಯಗಳು ಬೇಕಾಗುತ್ತದೆ. ಆದರೆ ಅರೆಂಜ್ ಮ್ಯಾರೇಜ್ ಆಗುವುದಕ್ಕಿಂತ ಮುಂಚೆ ಹುಡುಗರ ಬಳಿ ಈ ಎಂಟು ಪ್ರಶ್ನೆಗಳನ್ನು ನೀವು ಕೇಳಲೇಬೇಕು.

ಕರಿಯರ್ ಕುರಿತಂತೆ ಪ್ರತಿಯೊಬ್ಬ ಹುಡುಗ ಕೂಡ ತಮ್ಮ ಕರಿಯರ್ ನಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಬೇಕೆಂಬ ಟಾರ್ಗೆಟ್ ಅನ್ನು ಇಟ್ಟಿರುತ್ತಾರೆ. ಹುಡುಗನ ಕರಿಯರ್ ಪ್ಲಾನಿಂಗ್ ಹಾಗೂ ನಿಮ್ಮ ಮದುವೆ ನಂತರ ಜೀವನ ಮ್ಯಾಚ್ ಆಗುತ್ತಿದೆ ಎಂದರೆ ಖಂಡಿತವಾಗಿ ಮದುವೆಯಾದ ನಂತರ ನಿಮ್ಮ ಜೀವನ ಸುಖಕರವಾಗಿರುತ್ತದೆ. ಇದನ್ನು ಮದುವೆ ಮುಂಚೆ ಕೇಳಿ ತಿಳಿದು ಕೊಳ್ಳಬೇಕಾಗುತ್ತದೆ. ವಿದೇಶದಲ್ಲಿ ಸೆಟಲ್ ವಿಚಾರ ಕೆಲವು ಹುಡುಗಿಯರಿಗೆ ತಮ್ಮ ಮನೆಯವರೊಂದಿಗೆ ಇಲ್ಲೇ ಇದ್ದು ಅಭ್ಯಾಸವಿರುತ್ತದೆ.

ಈ ಸಂದರ್ಭದಲ್ಲಿ ಮದುವೆ ಆಗುವ ಹುಡುಗನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿ ಅಲ್ಲೇ ಸೆಟಲ್ ಆಗುವ ಅವಕಾಶ ಒದಗಿ ಬಂದರೆ ಅದನ್ನು ಅವರು ಒಪ್ಪಿಕೊಂಡರೆ ಮುಂದೇನಾಗಬಹುದು ನೀವು ಅದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿದ್ದೀರ ಎಂಬುದು ಕೂಡ ನಿಮ್ಮ ಮಾನಸಿಕ ಪಾತ್ರದ ಕುರಿತಂತೆ ಒಂದು ಕಾಳಜಿಯ ವಿಷಯವಾಗಿರುತ್ತದೆ. ಕುಟುಂಬ ವೃದ್ಧಿಸುವ ಕುರಿತಂತೆ ಒಂದು ವೇಳೆ ಹುಡುಗಿಯರು ಮದುವೆಯಾಗಿ ಎರಡು ವರ್ಷದವರೆಗೂ ಕೂಡ ಮಕ್ಕಳು ಬೇಡ ಎಂದು ಅಂದುಕೊಳ್ಳಬಹುದು. ಇನ್ನು ಮದುವೆಯಾದ ತಕ್ಷಣವೇ ಹುಡುಗರು ಫ್ಯಾಮಿಲಿ ಪ್ಲಾನಿಂಗ್ ಮಾಡಿರಬಹುದು.

ಹೀಗಾಗಿ ಫ್ಯಾಮಿಲಿ ಪ್ಲಾನಿಂಗ್ ಕುರಿತಂತೆ ಮೊದಲೇ ಚರ್ಚಿಸಬೇಕಾಗುತ್ತದೆ. ಮದುವೆಯಾದ ಮೇಲೆ ಎರಡು ಪರಿವಾರವನ್ನು ನೋಡಿಕೊಳ್ಳಲು ಸಾಧ್ಯವೇ ಈ ವಿಚಾರವನ್ನು ಮದುವೆಯಾದ ನಂತರ ಪ್ರತಿಯೊಬ್ಬ ಹುಡುಗನ ಬಳಿ ಕೇಳಲೇಬೇಕು. ಮದುವೆಯಾದ ನಂತರ ತಮ್ಮ ತಂದೆ ತಾಯಿಯ ಜೊತೆಗೆ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಕೂಡ ಸಾಕುವ ಜವಾಬ್ದಾರಿ ಯನ್ನು ಹೊರಲು ಸಾಧ್ಯವೇ ಎಂಬುದನ್ನು ಕೇಳಬೇಕು.

ಕರಿಯರ್ ಕುರಿತಂತೆ ರಾಜಿ ಆಗದೆ ಇರುವುದು ನೀವು ಕೂಡ ಹುಡುಗಿಯಾಗಿ ಕರಿಯರ್ ನಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಕಷ್ಟ ಪಡುತ್ತಿರುತ್ತೀರಿ. ಹೀಗಾಗಿ ಮದುವೆ ಆದಮೇಲೆ ನಿಮ್ಮ ಅಂಬಿಷನ್ ಅನ್ನು ತೊರೆಯಲು ಸಿದ್ಧರಾಗುತ್ತೀರ. ಮದುವೆಯಾದ ಮೇಲೆ ನಿಮ್ಮ ಕೆಲಸಕ್ಕೂ ಕೂಡ ನೀವು ಅಷ್ಟೇ ಪ್ರಾಮುಖ್ಯತೆ ಬೇಕಾಗುತ್ತೆ. ಹಿಂದಿನ ಸಂಬಂಧದ ಕುರಿತಂತೆ ಈ ವಿಷಯವನ್ನು ಮದುವೆಯಾಗುವುದಕ್ಕಿಂತ ಮುಂಚೆ ಹುಡುಗನೊಂದಿಗೆ ಮಾತನಾಡಲೇಬೇಕು.

ಯಾಕೆಂದರೆ ಮದುವೆ ಆಗುವುದಕ್ಕಿಂತ ಮುಂಚೆಯೇ ನೀವು ಹಿಂದೆ ಹೊಂದಿರುವಂತಹ ಪ್ರೇಮ ಸಂಬಂಧದ ಕುರಿತಂತೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಿದಾಗ ಅದರ ಕುರಿತಂತೆ ಇರುವ ಎಲ್ಲಾ ಅನುಮಾನಗಳು ಕೂಡ ಕ್ಲಿಯರ್ ಆಗುತ್ತದೆ. ಮದುವೆ ಆದ ಮೇಲೆ ಇದರ ಕುರಿತಂತೆ ಯಾವುದೇ ಜಗಳಗಳು ಕೂಡ ನಡೆಯಬಾರದು. ಲೈಫ್ ಪಾರ್ಟ್ನರ್ ಕುರಿತಂತೆ ಇರುವ ನಿರೀಕ್ಷೆಗಳು ಮದುವೆಯಾದ ಮೇಲೆ ಪ್ರತಿಯೊಬ್ಬ ಹುಡುಗನಿಗೂ ಕೂಡ ತನ್ನ ಸಂಗಾತಿ ಹೀಗೆ ಇರಬೇಕು ಎಂಬ ನಿರೀಕ್ಷೆ ಹಾಗೂ ಆಸೆಗಳು ಇರುತ್ತದೆ. ಹೀಗಾಗಿ ಮದುವೆ ಆಗುವ ಮುನ್ನವೇ ಅದರ ಕುರಿತಂತೆ ಸಮಗ್ರವಾಗಿ ತಿಳಿಯುವುದರಿಂದ ಆಗಿ ಸಂಸಾರ ಎನ್ನುವುದು ಸುಖವಾಗಿ ನಡೆಯಲು ಸಾಧ್ಯವಿರುತ್ತದೆ.