ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಫೈನಲ್ ಆಯಿತು ಆರ್ಸಿಬಿ ಉಳಿಸಿಕೊಳ್ಳುತ್ತಿರುವ ನಾಲ್ಕು ಆಟಗಾರರ ಪಟ್ಟಿ, ಪಡಿಕ್ಕಲ್ ಇಲ್ಲದೆ ಆಯ್ಕೆಯಾದವರು ಯಾರ್ಯಾರು ಗೊತ್ತೇ??

6

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಈ ಭಾರಿ ವಿಶೇಷವಾಗಿರಲಿದೆ. ಎಂಟು ತಂಡಗಳ ಪೈಕಿ ಹತ್ತು ತಂಡಗಳ ನಡುವೆ ಟ್ರೋಫಿಗಾಗಿ ಕದನ ನಡೆಯಲಿದೆ. ಇನ್ನು ಈ ಭಾರಿ ಆಟಗಾರರ ಮೆಗಾ ಹರಾಜು ನಡೆಯಲಿದ್ದು, ಪ್ರತಿ ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು. ನಮ್ಮ ಆರ್ಸಿಬಿ ತಂಡಕ್ಕೆ ಸಹ ಈ ಭಾರಿ ಹೊಸ ನಾಯಕನ ಆಗಮನವಾಗಲಿದ್ದು, ಆರ್ಸಿಬಿ ತಂಡ ಉಳಿಸಿಕೊಳ್ಳುವ ನಾಲ್ವರು ಆಟಗಾರರ ಪಟ್ಟಿ ಇಂತಿದೆ. ಮೂವರು ಭಾರತೀಯ ಆಟಗಾರರು ಹಾಗೂ ಒಬ್ಬ ವಿದೇಶಿ ಆಟಗಾರರನ್ನ ಆರ್ಸಿಬಿ ತಂಡ ಈ ಭಾರಿ ಉಳಿಸಿಕೊಳ್ಳಲಿದೆ.

ಮೊದಲನೆಯದಾಗಿ ವಿರಾಟ್ ಕೊಹ್ಲಿ : ನಾಯಕನ ಸ್ಥಾನದಿಂದ ಕೆಳಗಿಳಿದರೂ, ವಿರಾಟ್ ಆರ್ಸಿಬಿ ತಂಡದಲ್ಲಿಯೇ ಮುಂದುವರೆಯುವುದಾಗಿ ಘೋಷಿಸಿದ್ದರು. ಹೀಗಾಗಿ ವಿರಾಟ್ ಮೊದಲಿಗರಾಗಿ ರಿಟೇನ್ ಆಗಲಿದ್ದಾರೆ. ವಿರಾಟ್ ಗೆ ಆರ್ಸಿಬಿ ಒಟ್ಟು ಹದಿನಾರು ಕೋಟಿ ರೂಪಾಯಿ ಪಾವತಿಸಲಿದೆ. ಇನ್ನು ಎರಡನೇನೇಯದಾಗಿ ಯುಜವೇಂದ್ರ ಚಾಹಲ್ : ಏರಡನೇ ರಿಟೇನ್ ಆಗಿ ಆರ್ಸಿಬಿಯ ಫೇವರೇಟ್ ಸ್ಪಿನ್ನರ್ ಯುಜವೇಂದ್ರ ಚಾಹಲ್ ರನ್ನ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಚಾಹಲ್ ರನ್ನ ಬಿಡುಗಡೆಗೊಳಿಸಿದರೇ, ಹರಾಜಿನಲ್ಲಿ ಪುನಃ ಖರೀದಿಸುವ ಸಾಧ್ಯತೆ ಕಷ್ಟವಾಗುತ್ತದೆ.

ಮೂರನೇದಾಗಿ ಹರ್ಷಲ್ ಪಟೇಲ್ – ಕಳೆದ ಸೀಸನ್ ನ ಬೆಸ್ಟ್ ಬೌಲರ್ ಹರ್ಷಲ್ ಪಟೇಲ್ ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸಿದ ಆಟಗಾರನಾಗಿ ಬದಲಾಗುತ್ತಿದ್ದಾರೆ. ಇವರನ್ನ ಬಿಟ್ಟರೇ ಪುನಃ ಖರೀದಿಸಲು ಆಗುವುದಿಲ್ಲ . ಹಾಗಾಗಿ ಸಿರಾಜ್ ಬದಲು ಹರ್ಷಲ್ ಪಟೇಲ್ ರನ್ನ ರಿಟೇನ್ ಮಾಡಿಕೊಳ್ಳಲು ನಿರ್ಧರಿಸಿದೆ. ಇನ್ನು ಕೊನೆಯದಾಗಿ ಗ್ಲೆನ್ ಮ್ಯಾಕ್ಸವೆಲ್ – ಆರ್ಸಿಬಿಯ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೇಟ್ ಗೆ ವಿದಾಯ ಹೇಳಿದ ಕಾರಣ ವಿದೇಶಿ ಆಟಗಾರನ ಕೋಟಾದಡಿಯಲ್ಲಿ ಮ್ಯಾಕ್ಸವೆಲ್ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕಳೆದ ಭಾರಿ 14.45ಕೋಟಿ ರೂಪಾಯಿ ನೀಡಿ ಖರೀದಿಸಿತ್ತು‌. ಹೀಗಾಗಿ ಇವರನ್ನ ಪುನಃ.ಖರೀದಿಸಲು ಕಷ್ಟವಾದ ಕಾರಣ, ಇವರನ್ನ ರಿಟೇನ್ ಮಾಡಿಕೊಳ್ಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.