ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆಗೂ ಫಿಕ್ಸ್ ಆಯಿತು ಪ್ರಶಾಂತ್ ನೀಲ್ ಮುಂದಿನ ಚಿತ್ರ, ರಾಮಚರಣ್ ಹೀರೋ ಆಗಿ ನಟಿಸುತ್ತಿರುವ ಚಿತ್ರದ ಟೈಟಲ್ ಏನು ಗೊತ್ತೇ?

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೂಡ ಕೆಜಿಎಫ್ ಚಿತ್ರದ ನಂತರ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಎಂದೇ ಅನಿಸಿಕೊಂಡಿರುವ ಪ್ರಶಾಂತ್ ಅವರ ಬೇಡಿಕೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜಾಸ್ತಿಯಾಗಿದೆ. ಹೌದು ಗೆಳೆಯರೇ ಈ ಹಿಂದೆಯಷ್ಟೇ ಪ್ರಶಾಂತ್ ನೀಲ್ ಹಾಗೂ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ರವರ ಕಾಂಬಿನೇಷನ್ನಲ್ಲಿ ಹೊಸ ಚಿತ್ರವೊಂದು ಮೂಡಿಬರಲಿದೆ ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ದೊಡ್ಡ ಸುದ್ದಿ ವರದಿಯಾಗಿತ್ತು.

ಆದರೆ ಈ ಕುರಿತಂತೆ ಪ್ರಶಾಂತ್ ನೀಲ್ ರವರೇ ಆಗಲಿ ಅಥವಾ ರಾಮಚರಣ್ ರವರೇ ಆಗಲಿ ಎಲ್ಲಿಯೂ ಕೂಡ ಬಾಯಿಬಿಟ್ಟಿರಲಿಲ್ಲ. ಇನ್ನೊಮ್ಮೆ ಹೈದರಾಬಾದ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಮನೆಗೆ ಹೋದಾಗ ರಾಮಚರಣ್ ರವರು ಹಾಗೂ ಚಿರಂಜೀವಿ ಇಬ್ಬರ ಜೊತೆಗೂ ಕೂಡ ಫೋಟೋ ತೆಗೆದುಕೊಂಡು ಬಂದಾಗ ಕೂಡ ಇದರ ಕುರಿತಂತೆ ಹೆಚ್ಚೇನು ಮಾತನಾಡಿರಲಿಲ್ಲ. ಆದರೆ ಈಗ ರಾಮಚರಣ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮುಂದಿನ ದಿನಗಳಲ್ಲಿ ಹೊಸ ಚಿತ್ರವೊಂದು ಮೂಡಿಬರುವುದು ಕನ್ಫರ್ಮ್ ಆಗಿದೆ. ಇನ್ನು ಈ ಚಿತ್ರಕ್ಕೆ ಟೈಟಲ್ ಏನು ಇಟ್ಟಿದ್ದಾರೆ ಗೊತ್ತಾ ಅದನ್ನು ಕೂಡ ನಾವು ನಿಮಗೆ ಹೇಳುತ್ತೇವೆ.

ಹೌದು ಗೆಳೆಯರೇ ಪ್ರಶಾಂತ್ ನೀಲ್ ಹಾಗೂ ರಾಮಚರಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸಚಿತ್ರಕ್ಕೆ ” ಫ್ರಾಂಚೈಸ್ ” ಎನ್ನುವುದಾಗಿ ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ರಾಮಚರಣ್ ಆರ್ ಆರ್ ಆರ್ ಚಿತ್ರದ ಬಿಡುಗಡೆಯನ್ನು ಎದುರುನೋಡುತ್ತಿದ್ದು ರೋಬೋ ಶಂಕರ್ ರವರ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಇನ್ನು ಪ್ರಶಾಂತ್ ನೀಲ್ ಸಲಾರ್ ಚಿತ್ರವನ್ನು ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದು, ಜೂನಿಯರ್ ಎನ್ಟಿಆರ್ ಅವರಿಗೂ ಕೂಡ ಒಂದು ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇದಾದ ನಂತರವೇ ಇವರಿಬ್ಬರೂ ಕೂಡ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2022 ರ ಹೊತ್ತಿಗೆ ಈ ಚಿತ್ರ ಸೆಟ್ಟೇರುವುದು ಗ್ಯಾರಂಟಿ.

Get real time updates directly on you device, subscribe now.