ಹಸೆಮಣೆ ಏರಲು ಸಿದ್ದವಾದ ಕನ್ನಡದ ಕಿರುತೆರೆಯ ಸ್ಟಾರ್ ನಟಿ ಕಾವ್ಯ ಗೌಡ, ದಿನಾಂಕ ಫಿಕ್ಸ್ ಮಾಡಿ ಘೋಷಣೆ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆಯಾಗುವುದು ಜಾಸ್ತಿ ಆಗಿಬಿಟ್ಟಿದೆ. ಅದರಲ್ಲೂ ಕೂಡ ಕನ್ನಡ ಕಿರುತೆರೆಯ ಕ್ಷೇತ್ರದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಮದುವೆಯಾಗಿದ್ದಾರೆ. ಕನ್ನಡ-ತೆಲುಗು ಧಾರವಾಹಿಗಳಲ್ಲಿ ನಡೆಸಿರುವ ಆಶಿಕ ಪಡುಕೋಣೆ ಮದುವೆಯಾಗಿದ್ದರು. ಕನ್ನಡ ಕಿರುತೆರೆಯ ಖ್ಯಾತ ನಟಿ ಪ್ರಿಯಾಂಕ ಚಿಂಚೋಳಿ ಕೂಡ ಇತ್ತೀಚೆಗಷ್ಟೇ ತಮ್ಮ ಮದುವೆಯನ್ನು ಅನೌನ್ಸ್ ಮಾಡಿದರು.

ಈಗ ಈ ಸರದಿಗೆ ಮತ್ತೊಬ್ಬ ಕನ್ನಡ ಕಿರುತೆರೆಯ ಖ್ಯಾತ ದಾರವಾಹಿ ನಟಿ ಸೇರ್ಪಡೆಯಾಗಿದ್ದಾರೆ. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಕಿರುತೆರೆಯ ಖ್ಯಾತ ನಟಿ ಕಾವ್ಯ ಗೌಡರವರ ಕುರಿತಂತೆ. ಇತ್ತೀಚಿಗಷ್ಟೇ ಕಾವ್ಯ ಗೌಡ ರವರು ತಮ್ಮ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ ಹಾಗೂ ಅಭಿಮಾನಿಗಳು ಕೂಡ ಇಷ್ಟವಾಗಿದೆ. ಇನ್ನು ಈಗಾಗಲೇ ಸೋಮಶೇಖರ್ ಹಲವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕಾವ್ಯ ಗೌಡರವರು,

ಇದೇ ಡಿಸೆಂಬರ್ 1ರಂದು ರಿಸೆಪ್ಶನ್ ಅನ್ನು ಮಾಡಿಕೊಳ್ಳಲಿದ್ದಾರೆ. ಇನ್ನು ಡಿಸೆಂಬರ್ 2ರಂದು ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ನಿಜವಾಗಿ ಹೇಳಬೇಕೆಂದರೆ ಸೋಮಶೇಖರ್ ಹಾಗೂ ಕಾವ್ಯ ಗೌಡರವರ ಮದುವೆ ಲಾಕ್ಡೌನ್ ಸಮಯದಲ್ಲಿ ನಡೆಯಬೇಕಾಗಿತ್ತು. ಆದರೆ ಇಬ್ಬರೂ ಕೂಡ ಎರಡು ಮನೆಯಲ್ಲಿ ಕೊನೆಯ ಮಕ್ಕಳು ಆಗಿರುವುದರಿಂದ ಮದುವೆಯನ್ನು ಚೆನ್ನಾಗಿ ಹಾಗೂ ಅದ್ದೂರಿಯಾಗಿ ನಡೆಸಬೇಕೆಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಗೀತ ಮೆಹಂದಿ ರಿಸೆಪ್ಶನ್ ಹಳದಿ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಟ್ಟಾರೆಯಾಗಿ ಕಾವ್ಯ ಗೌಡರವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಎಲ್ಲರಿಗೂ ಕೂಡಾ ಖುಷಿಯನ್ನು ತರಿಸಿದೆ.