ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿವಾದ ಸೃಷ್ಟಿಸಿರುವ ಹಂಸಲೇಖ ಬೇಡ, ಇವರನ್ನು ಸರಿಗಮಪ ದಲ್ಲಿ ಮಹಾಗುರುಗಳನ್ನಾಗಿ ಮಾಡಿ ಎಂದ ಫ್ಯಾನ್ಸ್. ಆ ನಟ, ಹಾಡುಗಾರ ಯಾರಂತೆ ಗೊತ್ತೇ??

20

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಧಾರವಾಹಿಗಳನ್ನು ಹೊರತುಪಡಿಸಿ ರಿಯಾಲಿಟಿ ಶೋಗಳು ಕೂಡ ಸಾಕಷ್ಟು ಜನಪ್ರಿಯತೆಯನ್ನು ಇತ್ತೀಚಿನ ದಿನಗಳಲ್ಲಿ ಕಂಡುಕೊಂಡಿವೆ ಎಂಬುದನ್ನು ನೀವು ನೋಡಿದ್ದೀರಿ. ಕೆಲವು ರಿಯಾಲಿಟಿ ಶೋಗಳು ಒಂದು ಅವತರಣಿಕೆಗೆ ಯಶಸ್ಸನ್ನು ಕಾಣದೆ ಹೋದರೆ ಇನ್ನು ಕೆಲವು ರಿಯಾಲಿಟಿ ಶೋಗಳು ಇಂದಿಗೂ ಕೂಡ ಹಲವಾರು ಸರಣಿಗಳ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾ ಯಶಸ್ವಿಯಾಗಿ ಪ್ರಸಾರಗೊಳ್ಳುತ್ತಿದೆ. ಇನ್ನು ಹಲವಾರು ಅವತರಣಿಕೆಗಳಲ್ಲಿ ಯಶಸ್ಸನ್ನು ಪಡೆದುಕೊಂಡಿರುವ ರಿಯಾಲಿಟಿ ಶೋಗಳಲ್ಲಿ ಸರಿಗಮಪ ವೀಕೆಂಡ್ ವಿತ್ ರಮೇಶ್ ಬಿಗ್ ಬಾಸ್ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.

ಇಂದು ನಾವು ಮಾತನಾಡಲು ಹೊರಟಿರುವುದು ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಕುರಿತಂತೆ. ಇನ್ನು ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದು ನಮ್ಮ ಅನುಶ್ರೀ ಅವರು. ಈ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ವಿಜಯಪ್ರಕಾಶ್ ರವರು ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಮಹಾ ಗುರುಗಳಾಗಿ ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಹಂಸಲೇಖರವರು ಭಾಗವಹಿಸುತ್ತಾರೆ. ಇನ್ನು ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬ ಸ್ಪರ್ಧೆಗೂ ಕೂಡ ಹಂಸಲೇಖರವರು ಸಂಗೀತದ ಕುರಿತಂತೆ ಹಲವಾರು ನುಡಿಮುತ್ತುಗಳನ್ನು ಹೇಳುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಹಂಸಲೇಖ ಅವರ ಜಾಗಕ್ಕೆ ಮತ್ತೊಬ್ಬ ಸಂಗೀತ ನಿರ್ದೇಶಕರನ್ನು ಮಹಾ ಗುರುಗಳಾಗಿ ನೇಮಿಸಬೇಕೆಂದು ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನರು ಹೇಳುತ್ತಿದ್ದಾರೆ. ಹೌದು ಕನ್ನಡ ಚಿತ್ರರಂಗ ಕಂಡಂತಹ ಮತ್ತೊಬ್ಬ ಶ್ರೇಷ್ಠ ಸಂಗೀತ ನಿರ್ದೇಶಕರಾಗಿರುವ ಸಾಧುಕೋಕಿಲ ಅವರನ್ನು ಈ ಸ್ಥಾನಕ್ಕೆ ಕರೆತರಬೇಕು ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆ ಇನ್ನೊಂದು ಕಾರಣವೇನೆಂದರೆ ಇತ್ತೀಚಿಗಷ್ಟೇ ಹಂಸಲೇಖರವರು ಪೇಜಾವರ ಶ್ರೀಗಳ ಕುರಿತಂತೆ ದಲಿತರ ವಿಷಯದಲ್ಲಿ ಕೆಲವೊಂದು ಮಾತನಾಡಿರುವುದು ಹಲವರ ಕೋಪಕ್ಕೆ ಗುರಿಯಾಗಿದೆ. ಇದಕ್ಕೆ ಹಂಸಲೇಖರವರು ಕ್ಷಮೆ ಕೇಳಿದ್ದರು ಕೂಡ ಅವರನ್ನು ಕೆಳಗಿಳಿಸಿ ಸಾಧುಕೋಕಿಲ ರವರನ್ನು ಈ ಜಾಗಕ್ಕೆ ಕೂಡಿಸಿ ಎಂಬುದಾಗಿ ಕೆಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.