ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಬಿಡಿ ನಿವೃತ್ತಿಯಿಂದ ಆರ್ಸಿಬಿ ತಂಡದಲ್ಲಿ ಖಾಲಿ ಇರುವ ಸ್ಥಾನವನ್ನು ತುಂಬಬಲ್ಲ ಆಟಗಾರರು ಯಾರ್ಯಾರು ಗೊತ್ತೆ?? ಆರ್ಸಿಬಿಯಿಂದ ಶುರುವಾಗಿದೆ ತಯಾರಿ.

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಐಪಿಎಲ್ ನ ಕಪ್ ಗೂ ಯಾಕೋ ಕೂಡಿ ಬರುತ್ತಿಲ್ಲ. ಪ್ರತಿ ಭಾರಿ ಸೀಸನ್ ಆರಂಭದಲ್ಲಿ ಕಪ್ ಗೆಲ್ಲುವ ಉತ್ಸಾಹದಲ್ಲಿರುತ್ತದ ತಂಡ, ಸೀಸನ್ ಮುಗಿಯುವ ಹೊತ್ತಿನಲ್ಲಿ ಕಪ್ ನಿಂದ ಬಹಳ ದೂರ ನಿಂತಿರುತ್ತದೆ. ಇಷ್ಟು ವರ್ಷ ಆರ್ಸಿಬಿ ತಂಡದ ಆಪತ್ಭಾಂದವನಾಗಿದ್ದ ಎಬಿ ಡಿ ವಿಲಿಯರ್ಸ್ ಸೇವೆ ಈ ವರ್ಷದಿಂದ ಐಪಿಎಲ್ ನಲ್ಲಿಯೂ ಸಹ ಭಾಗವಹಿಸುತ್ತಿಲ್ಲ. ಎಬಿಡಿಯನ್ನ ರಿಟೈನ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಆರ್ಸಿಬಿ ತಂಡ ಈಗ ಹೊಸ ಆಟಗಾರನತ್ತ ಕಣ್ಣಿಟ್ಟಿದೆ. ಎಬಿಡಿ ಸ್ಥಾನ ತುಂಬಲು ಆರ್ಸಿಬಿ ಕಣ್ಣಿಟ್ಟಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಮೊದಲನೆಯದಾಗಿ ಗ್ಲೆನ್ ಮ್ಯಾಕ್ಸವೆಲ್ – ಸದ್ಯ ಆರ್ಸಿಬಿ ತಂಡದಲ್ಲಿರುವ ಮ್ಯಾಕ್ಸಿಯವರನ್ನ ರಿಟೇನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಮ್ಯಾಕ್ಸಿ, ಆಡಿದರೇ ಉತ್ತಮ ಆಟಗಾರ. ಆದರೇ ಅವರದ್ದು ಅಸ್ಥಿರ ಪ್ರದರ್ಶನ. ಇನ್ನು ಎರಡನೆಯದಾಗಿ ಟಿಮ್ ಡೇವಿಡ್ – ಕಳೆದ ಸೀಸನ್ ನಲ್ಲಿ ತಂಡದಲ್ಲಿ ಇದ್ದರೂ, ಒಂದೇ ಪಂದ್ಯ ಆಡುವ ಅವಕಾಶ ಪಡೆದುಕೊಂಡರು. ಈ ಭಾರಿ ಅವರನ್ನ ಉಳಿಸಿಕೊಂಡು ಹೆಚ್ಚಿನ ಅವಕಾಶ ನೀಡುವ ಸಾಧ್ಯತೆಯಿದೆ.

ಮೂರನೇದಾಗಿ ಲಿಯಾಮ್ ಲಿವಿಂಗ್ ಸ್ಟೋನ್ – ಇಂಗ್ಲೆಂಡ್ ತಂಡದ ಆಲ್ ರೌಂಡರ್, ಬ್ಯಾಟಿಂಗ್ ನಲ್ಲಿ ಬಿಗ್ ಹಿಟ್ ಗಳಿಗೆ ಹೆಸರುವಾಸಿಯಾದರೇ , ಬೌಲಿಂಗ್ ನಲ್ಲಿ ಲೆಗ್ ಸ್ಪಿನ್ ಮತ್ತು ಆಫ್ ಸ್ಪಿನ್ ಎರಡನ್ನು ಮಾಡುತ್ತಾರೆ. ಹೀಗಾಗಿ ಲಿವಿಂಗ್ ಸ್ಟೋನ್ ರನ್ನು ಹರಾಜಿನಲ್ಲಿ ಖರೀದಿಸಲು ಆರ್ಸಿಬಿ ಕಣ್ಣಿಟ್ಟಿದೆ. ಇನ್ನು ನಾಲ್ಕನೆಯದಾಗಿ ಜೋಸ್ ಬಟ್ಲರ್ – ಇಂಗ್ಲೆಂಡ್ ತಂಡದ ಉಪನಾಯಕ ಹಾಗೂ ವಿಕೇಟ್ ಕೀಪರ್ ಬ್ಯಾಟ್ಸಮನ್. ಉತ್ತಮ ಬ್ಯಾಟಿಂಗ್ ಆಡುವ ಬಟ್ಲರ್ ಆರ್ಸಿಬಿ ತಂಡದ ನಾಯಕನಾದರೂ ಅಚ್ಚರಿ ಇಲ್ಲ. ಇನ್ನು ಕೊನೆಯದಾಗಿ ಗ್ಲೆನ್ ಫಿಲಿಫ್ಸ್ – ನ್ಯೂಜಿಲೆಂಡ್ ತಂಡದ ವಿಕೇಟ್ ಕೀಪರ್ ಬ್ಯಾಟ್ಸಮನ್, ಗೇಮ್ ಚೆಂಜರ್ ಎಂದು ಕರೆಸಿಕೊಳ್ಳುವ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ಬಿಗ್ ಹಿಟ್ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರ ಮೇಲೂ ಆರ್ಸಿಬಿ ತಂಡ ಕಣ್ಣಿಟ್ಟಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.