ದಯವಿಟ್ಟು ಅಂಬರೀಷ್ ರವರ ಹೆಸರಿಗೆ ದಕ್ಕೆ ತರಬೇಡಿ ಎಂದು ಮನವಿ ಮಾಡಿದ ಸುಮಲತಾ, ಅಂಬಿ ಫ್ಯಾನ್ಸ್ ನಡೆಗೆ ಬೇಸರ. ಯಾಕೆ ಗೊತ್ತೇ??

ದಯವಿಟ್ಟು ಅಂಬರೀಷ್ ರವರ ಹೆಸರಿಗೆ ದಕ್ಕೆ ತರಬೇಡಿ ಎಂದು ಮನವಿ ಮಾಡಿದ ಸುಮಲತಾ, ಅಂಬಿ ಫ್ಯಾನ್ಸ್ ನಡೆಗೆ ಬೇಸರ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಇತ್ತೀಚಿಗಷ್ಟೇ ಪುನೀತ್ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದನ್ನು ಹಲವಾರು ಮಂದಿ ಒಪ್ಪಿ ಮೆಚ್ಚಿದ್ದಾರೆ. ಆದರೆ ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿದ ನಂತರ ಹಲವಾರು ಗುಸುಗುಸು ಮಾತುಗಳು ಎದ್ದು ಬರುತ್ತಿವೆ.

ಅದೇನೆಂದರೆ ಕನ್ನಡ ಚಿತ್ರರಂಗದ ಲೆಜೆಂಡರಿ ನಟರಾಗಿರುವ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರಿಗೆ ಯಾಕೆ ಈ ರೀತಿಯ ಸನ್ಮಾನ ಗೌರವಗಳನ್ನು ಎಂಬುದಾಗಿ. ಯಾಕೆ ಅವರ ಹೆಸರನ್ನು ರಸ್ತೆ ಹಾಗೂ ಪಾರ್ಕಿಗೆ ಇಟ್ಟಿಲ್ಲ ಎನ್ನುವುದರ ಕುರಿತಂತೆ ಕೂಡ ಸುದ್ದಿ ಕೇಳಿಬರುತ್ತಿದೆ. ಇಷ್ಟು ಮಾತ್ರವಲ್ಲದೆ ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳಂತೂ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಈ ಕುರಿತಂತೆ ರೆಬಲ್ ಸ್ಟಾರ್ ಅಂಬರೀಶ್ ರವರ ಪತ್ನಿ ಆಗಿರುವ ಸುಮಲತಾ ಅಂಬರೀಶ್ ಅವರು ಕೂಡ ದೀರ್ಘವಾದ ಪತ್ರ ಬರೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಹಾಗಿದ್ದರೆ ಆ ಪತ್ರದಲ್ಲಿ ಏನಿದೆ ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ. ಮಾನ್ಯ ಅಂಬರೀಶ್ ರವರಿಗೆ ನೀವು ಈಗಾಗಲೇ ಪ್ರೀತಿ ಗೌರವವನ್ನು ನೀಡಿ ಬೆಳೆಸಿದ್ದೀರಿ. ಇತ್ತೀಚಿಗೆಯಷ್ಟೇ ನೀವು ಅಂಬರೀಶರವರ ಸ್ಮಾರಕದ ಅಭಿವೃದ್ಧಿ ಕಾರ್ಯ ರಸ್ತೆ ಕಟ್ಟಡಗಳಿಗೆ ಅವರ ಹೆಸರನ್ನು ಇಡುವ ಕುರಿತಂತೆ ಪ್ರತಿಭಟನೆ ಮಾಡಲು ಸಿದ್ಧರಾಗಿರುವುದು ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಗಮನಕ್ಕೆ ಬಂದಿದೆ ಎಂಬುದಾಗಿ ಹೇಳಿದ್ದಾರೆ.

ಇತ್ತೀಚಿಗಷ್ಟೇ ನಮ್ಮ ಮನೆ ಮಗನಂತೆ ನಿಕಟವಾಗಿ ಇದ್ದಂತಹ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನನಗೆ ಬಹಳಷ್ಟು ದುಃಖವಾಗಿದೆ. ಇದರೊಂದಿಗೆ ಚಿತ್ರರಂಗ ಸೇರಿದಂತೆ ಇಡೀ ಕರ್ನಾಟಕವೇ ಪುನೀತ್ ರಾಜಕುಮಾರ್ ಅವರ ಅಗಲಿಕೆಗೆ ಕಣ್ಣೀರು ಹಾಕುತ್ತಿದೆ. ಈ ಸಂದರ್ಭದಲ್ಲಿ ನೀವು ಹೀಗೆ ಮಾಡುವುದು ಉಚಿತವಲ್ಲ ಇದರಿಂದ ಅಂಬರೀಶ್ರವರ ಹೆಸರಿಗೆ ಧಕ್ಕೆ ಆಗುತ್ತದೆ. ಯಾವುದೇ ಪ್ರಶಸ್ತಿ ಸಮ್ಮಾನ ಗೌರವ ಗಳನ್ನು ಕೇಳಿ ಪಡೆಯುವುದು ಅತಿಶಯೋಕ್ತಿ ಎಂಬುದಾಗಿ ಹೇಳಿದ್ದಾರೆ.

ಅವರ ಜೀವನದುದ್ದಕ್ಕೂ ಕೂಡ ನೀವು ಅಭಿಮಾನಿಗಳು ಪ್ರೀತಿ ಹಾಗೂ ಗೌರವ ಗಳ ಸನ್ಮಾನವನ್ನು ಹಾಗೂ ಪ್ರಶಸ್ತಿಗಳನ್ನು ನೀಡಿದ್ದೀರಿ ಅದರ ಮುಂದೆ ಯಾವ ಪ್ರಶಸ್ತಿ ಕೊಡಬೇಕಾಗಿಲ್ಲ. ಇದಕ್ಕಾಗಿ ಸುಮ್ಮನೆ ನೀವು ಹೋರಾಟವನ್ನು ಮಾಡುವುದು ಅವರ ಘನತೆಗೆ ಧಕ್ಕೆ ತರುವಂತ ಕೆಲಸವಾಗಿದೆ ಎಂಬುದಾಗಿ ಹೇಳಿದ್ದಾರೆ. ಅಂಬರೀಶ್ ಅವರ ಮೇಲೆ ನೀವು ಇಟ್ಟಿರುವ ಪ್ರೀತಿ ಹಾಗೂ ಗೌರವಗಳನ್ನು ಗೌರವಿಸುತ್ತ ಇದೇ ನವೆಂಬರ್ 24ರಂದು ಅಂಬರೀಶ್ರವರ ಮೂರನೆಯ ಪುಣ್ಯಸ್ಮರಣೆಯನ್ನು ಎಲ್ಲರೂ ಶಾಂತಿಯುತವಾಗಿ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರೋಣ.

ಸರ್ಕಾರ ಈ ಕುರಿತಂತೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿಯೇ ಸಂಧಿಸುವುದು ಖಂಡಿತ ಎಂದಿದ್ದಾರೆ. ಇನ್ನು ರಾಜಕುಮಾರ್ ಹಾಗೂ ಅಂಬರೀಶ್ ಅವರ ಕುಟುಂಬದ ಸಂಬಂಧ ಮೊದಲಿನಿಂದಲೂ ಕೂಡ ಸಾಕಷ್ಟು ಅನ್ಯೋನ್ಯವಾಗಿತ್ತು. ಇನ್ನು ಪುನೀತ್ ರಾಜಕುಮಾರ್ ಹಾಗೂ ಅಂಬರೀಶ್ ರವರು ದೊಡ್ಮನೆ ಹುಡುಗ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ಅಪ್ಪು ಅವರು ಸುಮಲತಾ ರವರನ್ನು ಮದುವೆಯಾಗುತ್ತೇನೆ ಎಂಬುದಾಗಿ ಹೇಳಿದ್ದರಂತೆ. ಎಲ್ಲ ಘಟನೆಗಳು ಈಗ ಕೇವಲ ನೆನಪು ಮಾತ್ರ.