ಬಿಡುಗಡೆಯಾಯಿತು ಬಹು ನಿರೀಕ್ಷಿತ ಟಿ ಆರ್ ಪಿ ಲಿಸ್ಟ್, ಈ ಬಾರಿಯ ಟಾಪ್ 5 ಧಾರಾವಾಹಿಗಳು ಯಾವ್ಯಾವು ಗೊತ್ತೇ?? ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಕಿರುತೆರೆಯ ಲೋಕವನ್ನು ಅಳುತ್ತಿರುವುದು ವಾಹಿನಿಗಳ ಧಾರವಾಹಿಗಳು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಾಹಿನಿಯು ಕೂಡ ಪೈಪೋಟಿಗೆ ಬಿದ್ದವರಂತೆ ಹೊಸ ಹೊಸ ಧಾರವಾಹಿಗಳನ್ನು ಕ್ವಾಲಿಟಿ ಮೇಕಿಂಗ್ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಿರ್ಮಿಸುತ್ತಿದ್ದಾರೆ ಹಾಗೂ ಬಿಡುಗಡೆಯನ್ನು ಕೂಡ ಮಾಡುತ್ತಿದ್ದಾರೆ. ಇನ್ನು ಇಷ್ಟೆಲ್ಲಾ ಮಾಡುವುದು ಟಿ ಆರ್ ಪಿ ಗೋಸ್ಕರ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ.

ಇನ್ನು ಇಂದಿನ ವಿಚಾರದಲ್ಲಿ ನಾವು ಹೇಳಲು ಹೊರಟಿರುವುದು ಟಿ ಆರ್ ಪಿ ಅಂಕದಲ್ಲಿ ಈ ವಾರದ ಟಾಪ್ 5 ಧಾರವಾಹಿಗಳು ಯಾವುವು ಎಂಬುದರ ಕುರಿತಂತೆ. ಈ ವಾರದ ಟಾಪ್-5 ಧಾರವಾಹಿಗಳ ಲಿಸ್ಟ್ ಬಿಡುಗಡೆಯಾಗಿದ್ದು ಇದರಲ್ಲಿ ನಿಮ್ಮ ನೆಚ್ಚಿನ ಧಾರವಾಹಿ ಇದೆಯಾ ಎಂಬುದನ್ನು ನೀವು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ. ಟಾಪ್ 1 ಗಟ್ಟಿಮೇಳ : ಈ ವಾರದಲ್ಲಿ ಗಟ್ಟಿಮೇಳ ಧಾರವಾಹಿ ಎಲ್ಲರನ್ನೂ ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.

ಧಾರಾವಾಹಿಯ ಪ್ರಾರಂಭದಿಂದಲೂ ಕೂಡ ಆ ರೌಡಿ ಬೇಬಿ ಅಮೂಲ್ಯ ಹಾಗೂ ವೇದಾಂತ್ ರವರ ಮದುವೆಗೆ ಪ್ರೇಕ್ಷಕರು ಒಕ್ಕೊರಲಿನಿಂದ ಕೋರಿಕೆಯನ್ನು ನೀಡುತ್ತಿದ್ದರು. ಅಂತೂ ಇಂತೂ ಇವರಿಬ್ಬರ ಮದುವೆ ಅಮೇಧ್ಯಾ ಅದ್ದೂರಿಯಾಗಿ ನಡೆದಿದ್ದು ಪ್ರೇಕ್ಷಕರು ಕೂಡ ಫುಲ್ ಮಾರ್ಕ್ಸ್ ನೀಡಿ ಧಾರವಾಹಿಗೆ ಶುಭಹಾರೈಸಿದ್ದಾರೆ. ಟಾಪ್ 2 ಹಿಟ್ಲರ್ ಕಲ್ಯಾಣ : ಹಿಟ್ಲರ್ ಕಲ್ಯಾಣ ಎಲ್ಲೂ ಕೂಡ ಬೋರ್ ಹೊಡೆಸದೆ ಪ್ರಾರಂಭದಿಂದ ಇಂದಿನವರೆಗೂ ಕೂಡ ಫಾಸ್ಟ್ ಸ್ಕ್ರೀನ್ ಪ್ಲೇ ಯನ್ನು ಹೊಂದಿದ್ದು ಪ್ರೇಕ್ಷಕರಿಗೆ ಸಾಕಷ್ಟು ಇಷ್ಟವಾಗುತ್ತಿದೆ.

ಇನ್ನು ಧಾರಾವಾಹಿ ಯಲ್ಲಿರುವ ಕ್ವಾಲಿಟಿ ಮೇಕಿಂಗ್ ಹಾಗೂ ಹಲವಾರು ಟ್ವಿಸ್ಟ್ ಗಳು ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಲೀಲಾ ಹಾಗೂ ಎಜೆ ಜುಗಲ್ಬಂದಿ ಹೊಸ ಪಾತ್ರಗಳ ಪರಿಚಯ ಹೀಗೆ ಹಲವಾರು ವಿಷಯಗಳು ಎರಡನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಧಾರವಾಹಿಯನ್ನು ಪ್ರೇಕ್ಷಕರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗುವ ಲ್ಲಿ ಯಶಸ್ವಿಯಾಗಿದೆ.

ಟಾಪ್ 3 ಪಾರು : ಟಾಪ್ ಮೂರನೇ ಸ್ಥಾನದಲ್ಲಿ ಪಾರು ಧಾರಾವಾಹಿಯನ್ನು ಕಾಣಬಹುದಾಗಿದೆ. ಅರಸನ ಕೋಟೆಯ ಹಿರಿಯ ಸೊಸೆಯನ್ನಾಗಿ ಅಖಿಲಾಂಡೇಶ್ವರಿ ಆದೇಶದ ಬೇರೆ ಹುಡುಗಿಯನ್ನು ಕರೆತರುತ್ತಿದ್ದಾರೆ. ಇದರ ನಡುವಲ್ಲೇ ಪಾರು ಹಾಗೂ ಆದಿಯ ನಿಶ್ಚಿತಾರ್ಥ ರಹಸ್ಯವನ್ನು ಬಿಚ್ಚಿಡಲು ವೀರಯ್ಯ ದೇವ ವೇಗವಾಗಿ ಬರುತ್ತಿದ್ದಾರೆ.

ದಿನದಿಂದ ದಿನಕ್ಕೆ ಪಾರು ಜೀವನದ ಕಹಾನಿ ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ ಪ್ರೇಕ್ಷಕರಿಗೆ ಇದು ರಸವತ್ತಾಗಿ ಹಿಡಿಸಿದೆ. ಟಾಪ್ 4 ಜೊತೆ ಜೊತೆಯಲಿ : ಅನಿರುಧ್ ಹಾಗೂ ಮೇಘ ಶೆಟ್ಟಿ ನಟನೆಯ ಜೊತೆ ಜೊತೆಯಲ್ಲಿ ದಾರವಾಹಿ ಮೊದಲಿನಿಂದಲೂ ಕೂಡ ಟಾಪ್ ಸ್ಥಾನದಲ್ಲಿ ಮಿಂಚುತ್ತಿತ್ತು. ಇನ್ನು ಈಗ ಅನು ಹಾಗೂ ಆರ್ಯ ಮದುವೆಯಾದ ಮೇಲಂತೂ ಸಾಕಷ್ಟು ಹೊಸ ವಿಚಾರಗಳು ತೆರೆದುಕೊಳ್ಳುತ್ತಿದ್ದ ಪ್ರೇಕ್ಷಕರ ಕುತೂಹಲ ಕೂಡ ಹೆಚ್ಚಾಗಿದೆ.

ಟಾಪ್ 5 ಸತ್ಯ : ರಾಕಿಂಗ್ ಕ್ವೀನ್ ಸತ್ಯ ತನ್ನ ತಂದೆ ಮರಣದ ಜಾಡನ್ನು ಹಿಡಿದು ಅಂತಿಮ ಸತ್ಯವನ್ನು ಹುಡುಕಲು ಹೊರಟಿದ್ದಾಹೆ. ಒಂದು ಕಡೆ ಅಮೂಲ್ ಬೇಬಿ ಲವ್ ಕನ್ಫ್ಯೂಷನ್ ನಲ್ಲಿ ಇದ್ದಾನೆ. ಇತ್ತಕಡೆ ದಿವ್ಯ ಯಾವಾಗ ಸುಖದಸುಪ್ಪತಿಗೆಯಲ್ಲಿ ಬಿದ್ದು ಹೊರಳಾಡಲಿ ಎಂಬ ನಿರೀಕ್ಷೆಯಲ್ಲಿದ್ದಾಳೆ. ಒಟ್ಟಾರೆಯಾಗಿ ಸತ್ಯ ಧಾರವಾಹಿಯನ್ನು ಕೂಡ ಪ್ರೇಕ್ಷಕರು ಮೆಚ್ಚಿ ಅಪ್ಪಿಕೊಂಡಿದ್ದಾರೆ. ಇವು 5 ದಾರವಾಹಿಗಳು ಟಾಪ್ 5 ಧಾರವಾಹಿಗಳಾಗಿ ಈ ವಾರದಲ್ಲಿ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿವೆ.

Post Author: Ravi Yadav