ಮೊದಲ ಬಾರಿಗೆ ಸಮಂತಾ ವಿರುದ್ಧ ಗರಂ ಆದ ಅಭಿಮಾನಿಗಳು, ದುಡ್ಡಿಗಾಗಿ ಈ ಕೆಲಸ ಮಾಡಬೇಡಿ ಎಂದು ಅಪ್ಪಟ ಅಭಿಮಾನಿಗಳು ಹೇಳಿದ್ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಮಂತ ರವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಾಕಷ್ಟು ಸುದ್ದಿಗೆ ಬಂದಿದ್ದರು. ಅದರಲ್ಲೂ ಕೂಡ ಇತ್ತೀಚಿಗಷ್ಟೇ ಸಮಂತಾ ಅವರು ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪುಷ್ಪ ಚಿತ್ರದಲ್ಲಿ ಐಟಂ ಸಾಂಗಿಗೆ ಕುಣಿಯೋದು ಕನ್ಫರ್ಮ್ ಆದಮೇಲೆ ಇನ್ನಷ್ಟು ಸುದ್ದಿಗೆ ಕಾರಣವಾಗಿದ್ದಾರೆ.

ನಿಮಗೆಲ್ಲ ತಿಳಿದಿರುವಂತೆ ಸಮಂತಾ ರವರ ವಿವಾಹ ವಿಚ್ಛೇದನದ ಸುದ್ದಿ ಹೊರ ಬಂದ ನಂತರ ಸಮಂತಾ ರವರು ಕೆಲವು ಸಮಯಗಳ ಕಾಣಿಸಿಕೊಂಡಿರಲಿಲ್ಲ ಹಾಗೂ ಯಾವುದೇ ಸಿನಿಮಾಗಳ ವಿಷಯದಲ್ಲಿ ಕೂಡ ಅವರ ಹೆಸರು ಕೇಳಿ ಬಂದಿರಲಿಲ್ಲ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯಲು ಬರೋಬ್ಬರಿ 1.50 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಸಮಂತಾ ರವರು ಪಡೆದಿದ್ದಾರೆ ಎನ್ನುವ ವಿಶಯ ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇನ್ನು ಇತ್ತೀಚಿಗೆ ಕೇವಲ ತಮಿಳು ಚಿತ್ರಗಳಿಗೆ ಮಾತ್ರ ಸಹಿಹಾಕಿದ್ದಾರೆ ಹೊರತು ಯಾವುದೇ ತೆಲುಗು ಚಿತ್ರದಲ್ಲಿ ನಟಿಸಲು ಇನ್ನು ಕೂಡ ಒಪ್ಪಿಕೊಂಡಿಲ್ಲ. ಈ ಕುರಿತಂತೆ ಕೊಂಚ ಅಭಿಮಾನಿಗಳು ಕೂಡ ಬೇಸರದಿಂದ ಇದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ನಟನಾಗಿರುವ ಶರ್ವಾನಂದರವರ ಸಿನಿಮಾದಲ್ಲಿ ಕೂಡ ನಟಿಸಲು ಸಮಾಂತರ ಅವರು ಒಪ್ಪಿಗೆ ನೀಡಿರಲಿಲ್ಲ. ಇದರ ಕುರಿತಂತೆ ಬೇಸರ ವ್ಯಕ್ತಪಡಿಸಿರುವ ಅಭಿಮಾನಿಗಳು ಐಟಂ ಚಿತ್ರದಲ್ಲಿ ಹಣ ಹಾಗೂ ಪ್ರಚಾರ ಸಿಗುತ್ತದೆ ಎಂಬ ಮಾತ್ರಕ್ಕೆ ನಟಿಸಲು ಒಪ್ಪಿಕೊಂಡಿದ್ದೀರಿ ಆದರೆ ಚಿತ್ರಗಳಲ್ಲಿ ಯಾಕೆ ನಟಿಸುತ್ತಿಲ್ಲ ಎಂಬುದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತೀವ್ರ ಮಟ್ಟದಲ್ಲಿ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸದ್ಯಕ್ಕೆ ತೆಲುಗಿನಲ್ಲಿ ಸಮಂತ ರವರ ನಟಿಸುತ್ತಿರುವ ಏಕೈಕ ಚಿತ್ರವೆಂದರೆ ಅದು ಗುಣಶೇಖರ್ ನಿರ್ದೇಶನದ ಶಾಕುಂತಲಂ. ತೆಲುಗಿನಲ್ಲಿ ಮತ್ತೆ ಯಾವಾಗ ನಟಿಸುತ್ತಾರೆ ಎಂಬುದರ ಕುರಿತಂತೆ ಸಮಂತ ಅವರ ಅಭಿಮಾನಿಗಳು ಸಾಕಷ್ಟು ಕಾತುರರಾಗಿದ್ದಾರೆ.

Post Author: Ravi Yadav